ರೂ.500 ನೋಟು ಚಲಾವಣೆಗೆ ಡಿಸೆಂಬರ್ 2 ಕೊನೆ ದಿನ?

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್, 1: ಅಧಿಕ ಮುಖಬೆಲೆಯ ನೋಟುಗಳ ಮೇಲೆ ನಿಷೇಧಿಸಿದ ನಂತರ ರೂ. 500ರ ನೋಟುಗಳನ್ನು ಮಾತ್ರ ಡಿಸೆಂಬರ್ 15 ರವರೆಗೆ ಸರ್ಕಾರದ ವಿವಿಧ ಸೇವೆಗಳಿಗಾಗಿ ಬಳಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಆದರೆ ಸರ್ಕಾರ ಇಗ ತನ್ನ ನಿರ್ಧಾರ ಬದಲಿಸಿಕೊಂಡಿದ್ದು, ರೂ. 500ರ ನೋಟುಗಳನ್ನು ಕೇವಲ ಡಿಸೆಂಬರ್ 2 ರ ವರೆಗೆ ಮಾತ್ರ ಸರ್ಕಾರಿ ಸೇವೆಗಳಿಗೆ ಬಳಸಿಕೊಳ್ಳಬಹುದು ಎಂಬ ಹೊಸ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿದೆ.

Demonetisation: old Rs.500 notes to be accepted till December 2?

ತುರ್ತು ಸೇವೆಗಳಿಗಾಗಿ ನಿಷೇಧಿತ ನೋಟುಗಳನ್ನು ಬದಲಾಯಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಇದನ್ನೇ ಅವಕಾಶ ಮಾಡಿಕೊಂಡ ಕಾಳಧನಿಕರು ತಮ್ಮ ಕಪ್ಪು ಹಣವನ್ನು ಸಕ್ರಮ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು.

ಅದರಲ್ಲೂ ಮುಖ್ಯವಾಗಿ ರೂ. 1000 ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ಪೆಟ್ರೋಲ್ ಬಂಕ್ ಗಳಲ್ಲಿ ವಿನಿಮಯ ಮಾಡಿಕೊಂಡು ಅಕ್ರಮ ಹಣವನ್ನು ಸಕ್ರಮ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ಕಾರಣದಿಂದಾಗಿಯೇ ಸರ್ಕಾರ ಮೊದಲು ರೂ 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು.

ನಗದು ಸಮಸ್ಯೆ ತೀವ್ರವಾಗಿ ಇದ್ದುದರಿಂದ ಡಿಸೆಂಬರ್ 15ರ ವರೆಗೆ ರೂ. 500 ರ ನೋಟುಗಳನ್ನು ಆಸ್ಪತ್ರೆ, ಔಷಧಿ, ಪ್ರಯಾಣ, ಶಾಲಾ ಶುಲ್ಕ ಮುಂತಾದ 21 ತುರ್ತು ಸೇವೆಗಳಿಗೆ ಚಲಾವಣೆ ಮಾಡಬಹುದು ಎಂದು ವಿನಾಯಿತಿ ನೀಡಿತ್ತು.

ಪ್ರಸ್ತುತ ರೂ.500ರ ನೋಟುಗಳ ಮೂಲಕವೂ ಹಣವನ್ನು ಸಕ್ರಮ ಮಾಡಿಕೊಳ್ಳಲು ಕಾಳಧನಿಕರು ಪ್ರಯತ್ನಿಸುತ್ತಿರುವುದರಿಂದ ಡಿಸೆಂಬರ್ 2ರಿಂದ ಈ ನೋಟುಗಳನ್ನೂ ಸಹ ಚಲಾವಣೆಗೆ ಬಳಸಿಕೊಳ್ಳುವಂತಿಲ್ಲ ಎಂದು ಘೋಷಿಸುವ ಸಾಧ್ಯತೆ ಇದೆ.

ಆದರೆ, ಈ ನಿಷೇಧಿತ ನೋಟುಗಳನ್ನು ಡಿಸೆಂಬರ್ 30ರ ವರೆಗೆ ಖಾತೆಗೆ ಜಮೆ ಮಾಡಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ. ಇನ್ನು ವಿನಿಮಯ ಅವಕಾಶವನ್ನು ಈಗಾಗಲೇ ನಿಷೇಧಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Old Rs 500 notes to be accepted at petrol pumps and for buying airline tickets till December 2, as against December 15.
Please Wait while comments are loading...