• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈನಿಂದ ಬದಲಾಗಲಿವೆ ನಿಮ್ಮ ಡಿಎಲ್, ಆರ್‌ಸಿ ಕಾರ್ಡ್: ಏನೇನು ಹೊಸದಿವೆ ನೋಡಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 14: ಮುಂದಿನ ವರ್ಷದ ಜುಲೈನಿಂದ ಹೊಸದಾಗಿ ನೀಡಲಾಗುವ ವಾಹನ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಮತ್ತು ವಾಹನ ನೋಂದಣಿ ಪತ್ರಗಳು (ರಿಜಿಸ್ಟ್ರೇಷನ್ ಸರ್ಟಿಫಿಕೇಟ್) ದೇಶದಾದ್ಯಂತ ಏಕರೂಪತೆ ಪಡೆದುಕೊಳ್ಳಲಿವೆ.

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತರಿಸಲಾಗುವ ಡಿಎಲ್ ಹಾಗೂ ಆರ್‌ಸಿಗಳು ಬಣ್ಣ, ವಿನ್ಯಾಸ, ನೋಟವನ್ನು ಹೊಂದಲಿದ್ದು, ಒಂದೇ ರೀತಿಯ ಭದ್ರತಾ ಸೌಲಭ್ಯಗಳನ್ನು ಹೊಂದಿರಲಿವೆ.

ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್, ಆರ್ಸಿಯನ್ನು ಸ್ವೀಕರಿಸಲು ಆದೇಶಡಿಜಿಟಲ್ ಡ್ರೈವಿಂಗ್ ಲೈಸೆನ್ಸ್, ಆರ್ಸಿಯನ್ನು ಸ್ವೀಕರಿಸಲು ಆದೇಶ

ಈ 'ಸ್ಮಾರ್ಟ್' ಡಿಎಲ್ ಹಾಗೂ ಆರ್‌ಸಿಗಳಿಗೆ ಮೈಕ್ರೋಚಿಪ್ ಅಳವಡಿಸಲಾಗುತ್ತದೆ ಮತ್ತು ಕ್ಯೂಆರ್‌ಕೋಡ್ ವ್ಯವಸ್ಥೆ ಹೊಂದಿರಲಿವೆ. ಮಾತ್ರವಲ್ಲದೆ ಈ ಕಾರ್ಡ್‌ಗಳು ಮೆಟ್ರೋ ಹಾಗೂ ಎಟಿಎಂ ಕಾರ್ಡ್‌ಗಳಂತೆ ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್‌ಎಫ್‌ಸಿ) ಸೌಲಭ್ಯಗಳನ್ನೂ ಹೊಂದಿರಲಿವೆ.

ಹೀಗಾಗಿ ಸಾರಿಗೆ ಅಧಿಕಾರಿಗಳು ಕೈಯಲ್ಲಿ ಹಿಡಿಯಬಹುದಾದ ಸಾಧನವನ್ನು ಬಳಸಿ ಕಾರ್ಡ್‌ಗಳಲ್ಲಿ ಇರುವ ಎಲ್ಲ ಮಾಹಿತಿಗಳನ್ನು ಸುಲಭವಾಗಿ ಪರಿಶೀಲಿಸಬಹುದು.

ಮೈಸೂರು ದಸರಾ - ವಿಶೇಷ ಪುರವಣಿ

ಮತ್ತೊಂದು ವಿಶೇಷವೆಂದರೆ ಈ ನೂತನ ಡಿಎಲ್, ಚಾಲಕ ತನ್ನ ಅಂಗಗಳನ್ನು ದಾನ ಮಾಡಲು ಬಯಸಿದ್ದರೆ ಅದರ ವಿವರ ಒಳಗೊಳ್ಳಲಿದೆ. ದೈಹಿಕ ಸಮಸ್ಯೆಯುಳ್ಳವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಚಾಲಕರ ಮಾಹಿತಿಯನ್ನು ಸಹ ಸ್ಪಷ್ಟವಾಗಿ ತಿಳಿಸಲಿದೆ.

ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ?ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ?

ವಾಹನವು ಮಾಲಿನ್ಯ ನಿಯಂತ್ರಣ ತಪಾಸಣೆಗೆ ನಿಯಮಿತವಾಗಿ ಒಳಪಡಿಸಲು ನೆರವಾಗುವಂತೆ ಎಮಿಷನ್ ನಿಯಮಗಳನ್ನು ಆರ್‌ಸಿಯಲ್ಲಿ ನಿರ್ದಿಷ್ಟವಾಗಿ ನಮೂದಿಸಲಾಗುತ್ತದೆ. ಪ್ರಸ್ತುತ ಎಮಿಷನ್ ಟೆಸ್ಟ್ ಮಾಡಿಸುವಾಗ ಅದರ ಮಾಲೀಕರಿಂದ ವಿವರಗಳನ್ನು ಪಡೆದುಕೊಳ್ಳಲಾಗುತ್ತಿದೆ.

ಹಳೆಯದರ ನವೀಕರಣ

ಹಳೆಯದರ ನವೀಕರಣ

ದೇಶದಾದ್ಯಂತ ಪ್ರತಿನಿತ್ಯ 32,000 ಡಿಎಲ್‌ಗಳನ್ನು ವಿತರಿಸಲಾಗುತ್ತಿದೆ ಅಥವಾ ನವೀಕರಿಸಲಾಗುತ್ತಿದೆ. ಮತ್ತು ನಿತ್ಯವೂ ಸುಮಾರು 43,000 ವಾಹನಗಳನ್ನು ನೋಂದಣಿ ಅಥವಾ ಮರುನೋಂದಣಿ ಮಾಡಲಾಗುತ್ತಿದೆ.

ಹೀಗಾಗಿ ಜುಲೈನಿಂದ ಯಾವುದೇ ನವೀಕರಣ ಅಥವಾ ಮರುನೋಂದಣಿಗೆ ಹೋದರೆ ಸಾರಿಗೆ ಅಧಿಕಾರಿಗಳು ಹೊಸ ಡಿಎಲ್ ಮತ್ತು ಆರ್‌ಸಿಗಳನ್ನು ವಿತರಿಸಿ ಹಳೆಯದನ್ನು ಬದಲಿಸುತ್ತಾರೆ.

ಕಾರ್ಡ್ ಪರಿಶೀಲನೆಗೆ ಸಾಧನ

ಕಾರ್ಡ್ ಪರಿಶೀಲನೆಗೆ ಸಾಧನ

ಈ ಸಂಬಂಧ ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಸಾರಿಗೆ ಸಿಬ್ಬಂದಿಗೆ ಹಲವು ಆಯ್ಕೆಗಳು ಸಿಗಲಿವೆ. ಅವರು ಕೈಯಲ್ಲಿ ಹಿಡಿದುಕೊಳ್ಳಬಹುದಾದ ಸಣ್ಣ ಸಾಧನದಲ್ಲಿ ಡಿಎಲ್ ಅಥವಾ ಆರ್‌ಸಿ ಸಂಖ್ಯೆಗಳನ್ನು ನಮೂದಿಸಿ, ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿ ಅಥವಾ ಆ ಸಾಧನದಲ್ಲಿ ಕಾರ್ಡ್ ತೂರಿಸುವ ಮೂಲಕ ಅದರ ವಿವರಗಳನ್ನು ಪರಿಶೀಲಿಸಬಹುದು. ಕಾರ್ಡ್‌ಅನ್ನು ಸಾಧನದ ಸಮೀಪದ ಇರಿಸಿದ ಕೂಡಲೇ ಎನ್‌ಎಫ್‌ಸಿ ಸೌಲಭ್ಯವು ಅದರ ವಿವರಗಳನ್ನು ಪತ್ತೆ ಮಾಡಲು ನೆರವಾಗುತ್ತದೆ.

ಕೃಷಿ ಟ್ರ್ಯಾಕ್ಟರ್ ಗಳು ಸಾರಿಗೆ ವಾಹನ ವಿಭಾಗಕ್ಕೆ ಒಳಪಡಲಿದೆಯೇ?ಕೃಷಿ ಟ್ರ್ಯಾಕ್ಟರ್ ಗಳು ಸಾರಿಗೆ ವಾಹನ ವಿಭಾಗಕ್ಕೆ ಒಳಪಡಲಿದೆಯೇ?

ತಗುಲುವ ವೆಚ್ಚ ದೊಡ್ಡದೇನಲ್ಲ

ತಗುಲುವ ವೆಚ್ಚ ದೊಡ್ಡದೇನಲ್ಲ

ವಾಹನ್ (ವಾಹನಗಳಿಗೆ) ಮತ್ತು ಸಾರಥಿ (ಚಾಲಕರಿಗೆ) ಕೇಂದ್ರ ದತ್ತಾಂಶ ಸಂಗ್ರಹದಲ್ಲಿ ದಾಖಲಾಗಿರುವ ಹಳೆಯ ದಾಖಲೆಗಳು ಸೇರಿದಂತೆ ನಿರ್ದಿಷ್ಟ ವಾಹನ ಅಥವಾ ಚಾಲಕನ ಎಲ್ಲ ಮಾಹಿತಿಗಳು ನೇರವಾಗಿ ತೆರೆದುಕೊಳ್ಳಲು ಇದು ಸಹಾಯ ಮಾಡಲಿದೆ.

ಈ ಎಲ್ಲ ಬದಲಾವಣೆಗಳಿಗಾಗಿ ಒಂದು ಡಿಎಲ್ ಅಥವಾ ಆರ್‌ಸಿಗೆ ಹೆಚ್ಚುವರಿಯಾಗಿ ತಗುಲುವ ವೆಚ್ಚ 15-20 ರೂ. ಮಾತ್ರ. ನಿರ್ದಿಷ್ಟ ಸಮಯದ ಅವಧಿಯೊಳಗೆ ಎಲ್ಲ ರಾಜ್ಯಗಳೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಡಿಎಲ್‌ನಲ್ಲಿ ಏನೇನು ಇರಲಿವೆ?

ಡಿಎಲ್‌ನಲ್ಲಿ ಏನೇನು ಇರಲಿವೆ?

ಹೆಸರು: ಭಾರತೀಯ ಕೇಂದ್ರ ಚಾಲನಾ ಪರವಾನಗಿ
* ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳ ಲಾಂಛನ, ಅದನ್ನು ವಿತರಿಸುವ ಇಲಾಖೆಯ ಹೆಸರು
* ವಿತರಣಾ ದಿನಾಂಕ ಮತ್ತು ವ್ಯಾಲಿಡಿಟಿ ದಿನಾಂಕ
* ಹೆಸರು, ರಕ್ತದ ಗುಂಪು, ಅಂಗ ದಾನದ ಘೋಷಣೆ ಮಾಹಿತಿ
* ತುರ್ತು ಸಂದರ್ಭದ ಸಂಖ್ಯೆ, ಕ್ಯುಆರ್ ಕೋಡ್ ಮತ್ತು ವಾಹನ ವಿಭಾಗ

ಸೌದಿ ಅರೇಬಿಯಾದ ಸಾರಿಗೆ ಕ್ಷೇತ್ರದಲ್ಲಿ ಹೊಸ ಇತಿಹಾಸಸೌದಿ ಅರೇಬಿಯಾದ ಸಾರಿಗೆ ಕ್ಷೇತ್ರದಲ್ಲಿ ಹೊಸ ಇತಿಹಾಸ

ಆರ್‌ಸಿ ಕಾರ್ಡ್‌ನಲ್ಲಿ ಏನಿರಲಿವೆ?

ಆರ್‌ಸಿ ಕಾರ್ಡ್‌ನಲ್ಲಿ ಏನಿರಲಿವೆ?

ಹೆಸರು: ಭಾರತೀಯ ಕೇಂದ್ರ ವಾಹನ ನೋಂದಣಿ ಪ್ರಮಾಣಪತ್ರ
* ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳ ಲಾಂಛನ, ಅದನ್ನು ವಿತರಿಸುವ ಇಲಾಖೆಯ ಹೆಸರು
* ವಿತರಣಾ ದಿನಾಂಕ ಮತ್ತು ವ್ಯಾಲಿಡಿಟಿ ದಿನಾಂಕ
* ವಾಹನದ ಮಾದರಿ: ವಾಣಿಜ್ಯ ಅಥವಾ ವಾಣಿಜ್ಯೇತರ
* ಚಾಸಿ ಮತ್ತು ಎಂಜಿನ್ ಸಂಖ್ಯೆ, ಇಂಧನ ಮತ್ತು ಎಮಿಷನ್ ನಿಯಮಗಳು

English summary
From next July driving licences and vehicle registration certificates issued by all states and union territories will be uniform in look, colour and design.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X