'ಖರಾಬ್ ಸಿಂಗರ್' ಡಿಂಚಕ್ ಪೂಜಾ ವಿಡಿಯೋಗಳು ಇನ್ನಿಲ್ಲ

Posted By:
Subscribe to Oneindia Kannada

ನವದೆಹಲಿ, ಜುಲೈ 12: ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಉಂಟು ಮಾಡಿರುವ 'ಖರಾಬ್ ಸಿಂಗರ್' ಡಿಂಚಕ್ ಪೂಜಾ ಹಾಗೂ ಆಕೆಯ ಲಕ್ಷಾಂತರ ಅಭಿಮಾನಿಗಳಿಗೆ ಆಘಾತವಾಗಿದೆ. ಡಿಂಚಕ್ ಪೂಜಾಳ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಡಿಲಿಟ್ ಮಾಡಲಾಗಿದೆ.

ಡಿಂಚಕ್ ಪೂಜಾ ವಿರುದ್ಧ ದೆಹಲಿ ಪೊಲೀಸರಿಂದ ಕ್ರಮ?

ತಮ್ಮ ಕರಾಬ್ ಗಾಯನದ ಮೂಲಕ ಎಲ್ಲರ ಗಮನ ಸೆಳೆದಿರುವ ಪೂಜಾ ಅವರ ಹೊಸ ವಿಡಿಯೋ ಸಾಂಗ್ ವಿವಾದಕ್ಕೆ ಕಾರಣವಾಗಿತ್ತು. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ, ಇದೊಂದು ಸಣ್ಣ ಪ್ರಕರಣವಾಗಿತ್ತು. ಆದರೆ, ಈಗ ಪೂಜಾ ಅವರ 12ಕ್ಕೂ ಅಧಿಕ ವಿಡಿಯೋಗಳಿದ್ದ ಚಾನೆಲ್ ಬರಿದಾಗಿದೆ.

Dhinchak Pooja's videos on Youtube removed

ಡಿಂಚಕ್ ಪೂಜಾಳ ಯೂಟ್ಯೂಬ್ ಲಿಂಕ್ ಗೆ 182,160 ಚಂದಾದಾರರಿದ್ದಾರೆ. ಕಾಪಿರೈಟ್ ಕಾರಣಕ್ಕಾಗಿ ಡಿಂಚಕ್ ಪೂಜಾಳ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಡಿಲಿಟ್ ಮಾಡಲಾಗಿದೆ. ಇದೆಲ್ಲವೂ ಕಥಪ್ಪ ಸಿಂಗ್ ಅವರಿಗೆ ಸೇರಿದೆ ಎಂದು ತಿಳಿದು ಬಂದಿದೆ. ಈ ಕಥಪ್ಪ ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಬಹುಶಃ ವಿಡಿಯೋ ಟೀಮ್ ನವರೇ ಇರಬೇಕು ಎಂದು ಊಹಿಸಲಾಗಿದೆ. 'ದಿಲೋಂಕಾ ಶೂಟರ್' ಎಂಬ ಇತ್ತೀಚಿನ ವಿಡಿಯೋ ಮಾತ್ರ ಹಾಗೆ ಉಳಿಸಲಾಗಿದೆ.

ಡಿಂಚಕ್ ಪೂಜಾ ವಿಡಿಯೋ ಮಾಯವಾಗಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದ್ದರೆ, ಹಲವರಿಗೆ ನೆಮ್ಮದಿ ತಂದಿದೆ.ಆಕೆ ರಿಲೀಸ್ ಮೂಡಿರುವ ಮೂರು ಮ್ಯೂಸಿಕ್ ವಿಡಿಯೋಗಳು ಭರ್ಜರಿ ಬೆಳೆ ತಂದಿವೆ. ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಲಿಸ್ಟ್ ನಲ್ಲಿ ಸ್ಥಾನ ಪಡೆದಿವೆ. ಸೆಲ್ಫಿ ಹಾಡು18,402,494 ಬಾರಿ ಯೂಟ್ಯೂಬಿನಲ್ಲಿ ವೀಕ್ಷಣೆ ಪಡೆದಿದೆ.ದಿಲೋಂಕಾ ಶೂಟರ್ ಸ್ಕೂಟರ್ ಈಗಾಗಲೆ 3,942,855 ಬಾರಿ ವೀಕ್ಷಣೆ ಪಡೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Social media sensation singer Dhinchak Pooja's videos on Youtube have been removed from her channel and are currently unable for views.
Please Wait while comments are loading...