ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ ದೆಹಲಿಗೆ ಬಂದಿದ್ದರಂತೆ ಹನಿಪ್ರೀತ್!

ನವದೆಹಲಿ, ಸೆಪ್ಟೆಂಬರ್ 25: ಅತ್ಯಾಚಾರದ ಆರೋಪ ಸಾಬೀತಾಗಿ, 20 ವರ್ಷಗಳ ಜೈಲು ಸಜಾ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ದೆಹಲಿಯಲ್ಲಿದ್ದಾರಂತೆ!

ರಾಮ್ ರಹೀಮ್ ಗೆ ಶಿಕ್ಷೆ ಪ್ರಕಟವಾಗಿ ಆತ ಜೈಲು ಸೇರಿದಾಗಿನಿಂದ ತಲೆಮರೆಸಿಕೊಂಡಿರುವ ಹನಿಪ್ರೀತ್ ಗಾಗಿ ಪೊಲೀಸರು ಹಲವೆಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ.

ಹನಿಪ್ರೀತ್ ಗುಟ್ಟಾಗಿ ನೆರೆ ರಾಷ್ಟ್ರ ನೇಪಾಳಕ್ಕೆ ಹಾರಿಬಿಟ್ಟಿದ್ದಾಳೆ ಎಂಬ ವದಂತಿಯೂ ಎದ್ದಿತ್ತು. ಆದರೆ ಇವೆಲ್ಲವೂ ಸುಳ್ಳು, ಆಕೆ ರಾಜಧಾನಿ ದೆಹಲಿಯಲ್ಲೇ ಇದ್ದಾರೆ ಎಂಬುದು ಇದೀಗ ಸಾಬೀತಾಗಿದೆ. ಹನಿಪ್ರೀತ್ ಅವರ ವಕೀಲ ಪ್ರದೀಪ್ ಆರ್ಯ ಅವರೇ ತಿಳಿಸಿರುವಂತೆ, ಸೆ.25 ರ ಸೋಮವಾರ ಹನಿಪ್ರೀತ್, ಆರ್ಯ ಅವರಲ್ಲಿಗೆ ಬಂದು ನಿರೀಕ್ಷಣಾ ಜಾಮೀನು ಅರ್ಜಿಗೆ ಸಹಿ ಮಾಡಿಹೋಗಿದ್ದಾರೆ!

ತನ್ನ ಕಕ್ಷಿದಾರರ ಪರವಾಗಿ ತಾನು ನಿರೀಕ್ಷಣಾ ಜಾಮೀನು ಅರ್ಜಿ ಯನ್ನು ಮಂಗಳವಾರ ಸಲ್ಲಿಸಲಿದ್ದು, ಈ ಕುರಿತು ನ್ಯಾಯಾಲಯ ತುರ್ತು ವಿಚಾರಣೆ ನಡೆಸಲು ಮನವಿಮಾಡಿಕೊಳ್ಳುತ್ತೇನೆ ಎಂದಿದ್ದಾರೆ ಪ್ರದೀಪ್ ಆರ್ಯ.

ಇಷ್ಟೇ ಅಲ್ಲ, ರಾಮ್ ರಹೀಮ್ ಬಂಧನದ ನಂತರ ಹನಿಪ್ರೀತ್ ತಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೋಮವಾರದಂದು ದೆಹಲಿಯ ಲಜಪತ್ ನಗರದಲ್ಲಿರುವ ತಮ್ಮ ಕಚೇರಿಗೆ ಬಂದು, ಜಾಮೀನು ಅರ್ಜಿಗೆ ಸಹಿ ಮಾಡಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಬೇಸರ ವ್ಯಕ್ತಪಡಿಸಿದ ಹನಿಪ್ರೀತ್

ಬೇಸರ ವ್ಯಕ್ತಪಡಿಸಿದ ಹನಿಪ್ರೀತ್

ತಮ್ಮ ಮೇಲೆ ಬಂದಿರುವ ಆರೋಪ ಮತ್ತು ರಾಮ್ ರಹೀಮ್ ಮತ್ತು ನನ್ನ ನಡುವೆ ಅನೈತಿಕ ಸಂಬಂಧವಿತ್ತು ಎಬಂತೆ ಬಿಂಬಿಸುತ್ತಿರುವ ಬಗ್ಗೆ ಹನಿಪ್ರೀತ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಈ ಆರೋಪಗಳೆಲ್ಲವೂ ಸುಳ್ಳು ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದು ತಮ್ಮಲ್ಲಿ ಮನವಿ ಮಾಡಿಕೊಂದಿದ್ದಾರೆಂದು ಆರ್ಯ ಹೇಳಿದ್ದಾರೆ.

ರಾಮ್ ರಹೀಮ್ ದೋಷಿ

ರಾಮ್ ರಹೀಮ್ ದೋಷಿ

ಆಗಸ್ಟ್ 25 ರಂದು ಸಿಬಿಐ ವಿಶೇಷ ನ್ಯಾಯಾಲಯ 2 ಅತ್ಯಾಚಾರ ಪ್ರಕರಣಗಳಲ್ಲಿ ರಾಮ್ ರಹೀಮ್ ನನ್ನು ದೋಷಿ ಎಂದು ಘೋಷಿಸಿ, ಆತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆತನನ್ನು ತಪ್ಪಿತಸ್ಥ ಎಂದು ಘೋಷಿಸುತ್ತಿದ್ದಂತೆಯೇ ಹರ್ಯಾಣದಾದ್ಯಂತ ರಾಮ್ ರಹೀಮ್ ಅನುಯಾಯಿಗಳು ಗಲಭೆ ಎದ್ದಿದ್ದರು. ಆ ಸಂದರ್ಭದಲ್ಲಿ 40 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂದಿದ್ದರೆ, 250 ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿದ್ದರು.

ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಹನಿಪ್ರೀತ್!

ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಹನಿಪ್ರೀತ್!

ಘಟನೆಯ ನಂತರ ಹರ್ಯಾಣ ಪೊಲೀಸರು ರಾಮ್ ರಹೀಮ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ 43 ಜನರ ಪಟ್ಟಿಯೊಂದನ್ನು ಸಿದ್ಧಪಡಿಸಿ, ಇವರೆಲ್ಲರ ಮೇಲೂ ದೂರು ದಾಖಲಿಸಿದ್ದರು. ಈ ಪಟ್ಟಿಯಲ್ಲಿ ಹನಿಪ್ರೀತ್ ಹೆಸರು ಅಗ್ರಸ್ಥಾನದಲ್ಲಿತ್ತು. ಆದರೆ ರಾಮ್ ರಹೀಮ್ ಗೆ ಶಿಕ್ಷೆ ಘೋಷಣೆಯಾಗುತ್ತಿದ್ದಂತೆಯೇ ತನಗೂ ಗ್ರಹಚಾರ ತಪ್ಪಿದ್ದಲ್ಲ ಎಂಬುದನ್ನು ಅರಿತ ಹನಿಪ್ರೀತ್ ನಾಪತ್ತೆಯಾಗಿದ್ದರು.

ದತ್ತುಪುತ್ರಿ ಕಮ್ ಪ್ರೇಯಸಿ!

ದತ್ತುಪುತ್ರಿ ಕಮ್ ಪ್ರೇಯಸಿ!

ಜಗತ್ತಿನೆದುರು ಹನಿಪ್ರೀತ್ ಳನ್ನು ದತ್ತುಪುತ್ರಿ ಎಂದು ಕರೆಯುತ್ತಿದ್ದರೂ, ಆಕೆಯೊಂದಿಗೆ ರಾಮ್ ರಹೀಮ್ ಅನೈತಿಕ ಸಂಬಂಧ ಹೊಂದಿದ್ದ ಎಂದು ರಾಮ್ ರಹೀಮ್ ಮತ್ತು ಹನಿಪ್ರೀತ್ ಇನ್ಸಾನ್ ರ ನಿಕಟವರ್ತಿಗಳೇ ಹೇಳಿದ್ದರು. ಇದರಿಂದ ಪ್ರಕರಣ ವಿಚಿತ್ರ ತಿರುವು ಪಡೆದಿದ್ದಲ್ಲದೆ, ಹನಿಪ್ರೀತ್ ಳನ್ನು ವಶಕ್ಕೆ ಪಡೆಯಲೇಬೇಕಾದ ಒತ್ತಡವೂ ಪೊಲೀಸರ ಮೇಲೆ ಬಿದ್ದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+