ದೆಹಲಿಯಿಂದ ಡೆಹ್ರಾಡೂನ್‌ಗೆ ಎಕ್ಸ್‌ಪ್ರೆಸ್ ವೇ: ಎಷ್ಟು ಗಂಟೆ ಪ್ರಯಾಣ,ವೇಗದ ಮಿತಿ ಎಷ್ಟು?
ನವದೆಹಲಿ,ಫೆಬ್ರವರಿ 12: ಪ್ರಸ್ತಾವಿತ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಿಂದಾಗಿ 4 ತಾಸುಗಳ ಪ್ರಯಾಣ ಕಡಿತವಾಗಲಿದೆ. ಹಾಗೆಯೇ ರಸ್ತೆಯಲ್ಲಿ ಪ್ರತಿ ಗಂಟೆಗೆ 100 ಕಿ.ಮೀನಂತೆ ಕನಿಷ್ಠ ವೇಗದಲ್ಲಿ ಚಾಲನೆ ಮಾಡುವಂತೆ ತಿಳಿಸಲಾಗಿದೆ.
ಈ ಮಾರ್ಗವು ಪ್ರಾಣಿಗಳ ಅಡೆತಡೆ ಇಲ್ಲದ ಚಲನೆಯನ್ನು ಸಕ್ರಿಯಗೊಳಿಸುತ್ತದೆ, ಇದು 12 ಕಿ.ಮೀ ಎತ್ತರವನ್ನು ಹೊಂದಿರುತ್ತದೆ. ಇದು ಏಷ್ಯಾದ ಅತಿ ದೊಡ್ಡ ವನ್ಯಜೀವಿ ಕಾರಿಡಾರ್ ಆಗಿರಲಿದೆ.
ದೆಹಲಿ ಹಾಗೂ ಉತ್ತರಾಖಂಡ್ ನಡುವಿನ ಪ್ರಯಾಣದ ದೂರವನ್ನು 25 ಕಿ.ಮೀ ಕಡಿತಗೊಳಿಸುತ್ತದೆ ಎಂದು ಪ್ರಕಟೆಣೆಯಲ್ಲಿ ತಿಳಿಸಲಾಗಿದೆ.

ದೆಹಲಿ-ಸಹರಾನ್‌ಪುರ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್, ಎರಡು ನಗರಗಳ ನಡುವಿನ ಅಂತರವನ್ನು 235 ಕಿ.ಮೀ ಇಂದ 210 ಕಿ.ಮೀವರೆಗೆ ಇಳಿಸುತ್ತದೆ. ಮತ್ತೆ ಇದು ಪೂರ್ಣಗೊಂಡ ಬಳಿಕ ಪ್ರಯಾಣದ ಸಮಯವನ್ನು 6.5 ಗಂಟೆಗಳ ಬದಲಾಗಿ 2.5 ಕಿ.ಮೀ ಇಳಿಕೆಯಾಗುತ್ತದೆ.
ವನ್ಯಜೀವಿ ರಕ್ಷಣೆಗಾಗಿ 12 ಕಿ.ಮೀ ಉದ್ದದ ಕಾರಿಡಾರ್ ಇರಲಿದೆ ಎಂದು ಸರ್ಕಾರ ತಿಳಿಸಿದೆ.ಎಕ್ಸ್‌ಪ್ರೆಸ್‌ವೇನಲ್ಲಿ ಒಟ್ಟು 25 ಕಿ.ಮೀ ಎತ್ತರದ ರಸ್ತೆ ಇರಲಿದೆ. 6 ಕಿ.ಮೀ ತೆರೆದಿರುತ್ತದೆ. 14 ಸುರಂಗಗಳಲ್ಲಿ,ಆರು ಪಥಗಳ ಹೆದ್ದಾರಿ ಪ್ರಾಚೀನ ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುತ್ತದೆ.
ಭೂಸ್ವಾಧೀನ ಪ್ರಕ್ರಿಯೆ, ಮರಗಳ ತೆರವು ಅಂತಿಮ ಹಂತದಲ್ಲಿದೆ. ಈ ಮೇಲ್ಸೇತುವೆ ನಿರ್ಮಾಣವಾಗಲು ಕನಿಷ್ಠ 2 ವರ್ಷಗಳು ಬೇಕು.












Click it and Unblock the Notifications