• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನರು ಮುಖ ಮುಚ್ಚಿಕೊಳ್ಳದೇ ವಿಧಿಯಿಲ್ಲ: ಯಾರಿಗೆ ಹೇಳೋಣಾ ಇವರ ಪ್ರಾಬ್ಲಮ್?

|
Google Oneindia Kannada News

ದೆಹಲಿ, ನವೆಂಬರ್.12: ರಾಷ್ಟ್ರ ರಾಜಧಾನಿ ಕಥೆ ಎಷ್ಟು ಹೇಳಿದರೂ ಮುಗಿಯೋದೇ ಇಲ್ಲ. ದೆಹಲಿ ಮಂದಿ ಕಷ್ಟವನ್ನು ಕೇಳುವವರೇ ಇಲ್ಲದಂತಾಗಿ ಬಿಟ್ಟಿದೆ. ಸೂರ್ಯ ಹುಟ್ಟೋದೇ ತಡ. ಒಂದು ಕಡೆ ಕೆಲಸದ ಒತ್ತಡ, ಇನ್ನೊಂದು ಕಡೆ ಮುಖಕ್ಕೆ ಹಾಕಿರುವ ಮಾಸ್ಕ್. ಇಲ್ಲಿ ಜನರು ಮುಖ ಮುಚ್ಚಿಕೊಳ್ಳದೇ ಹೊರ ಬರುವ ಹಾಗೆಯೇ ಇಲ್ಲ.

ಹೌದು, ದೆಹಲಿಯಲ್ಲಿ ವಾತಾವರಣ ದಿನೇ ದಿನೆ ಹದಗೆಡುತ್ತಿದೆ. ಮನೆಯಿಂದ ಹೊರ ಬರೋದಕ್ಕೂ ಮೊದಲೇ ಜನರು ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕಾದ ದುಸ್ಥಿತಿ ಎದುರಾಗಿದೆ. ನೆರೆ ರಾಜ್ಯಗಳು ಮಾಡುತ್ತಿರುವ ಕೆಲಸದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೋಸಿ ಹೋಗಿದ್ದಾರೆ.

ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: ಕೆರಳಿ ಕೆಂಡವಾದ ಸಿಎಂ ಕೇಜ್ರಿವಾಲ್!ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: ಕೆರಳಿ ಕೆಂಡವಾದ ಸಿಎಂ ಕೇಜ್ರಿವಾಲ್!

ಗುಜರಾತ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಬೆಳೆಗೆ ಬೆಂಕಿ ಹಚ್ಚಿದರೆ, ದೆಹಲಿ ಮಂದಿ ಮುಖ ಮುಚ್ಚಿಕೊಳ್ಳುವ ಹಾಗಾಗಿದೆ. ಇಲ್ಲಿ ದೊಡ್ಡವರೇ ಉಸಿರಾಡುವುದು ಕಷ್ಟ ಕಷ್ಟ ಎನ್ನುವ ಹಾಗಾಗಿದೆ. ಹೀಗಿರುವಾಗ ವಿದ್ಯಾರ್ಥಿಗಳು, ಮಕ್ಕಳ ಪರಿಸ್ಥಿತಿಯಂತೂ ಹೇಳುವ ಹಾಗೆಯೇ ಇಲ್ಲ. ಇದರಿಂದ ಶಾಲೆ-ಕಾಲೇಜುಗಳಿಗೆ ಸರ್ಕಾರವೇ ಬೀಗ ಹಾಕಿಸುತ್ತಿದೆ.

ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರದಿಂದಲೇ ಬೀಗ!

ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರದಿಂದಲೇ ಬೀಗ!

ದೆಹಲಿಯಲ್ಲಿ ಶಾಲಾ-ಕಾಲೇಜುಗಳಿಗೆ ಸರ್ಕಾರವೇ ಬೀಗ ಹಾಕಿಸುತ್ತಿದೆ. ಹಾಗಂತಾ ಇದೇನು ಕೆಟ್ಟ ಕೆಲಸವಲ್ಲ. ಬದಲಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಇಂಥದೊಂದು ಕ್ರಮಕ್ಕೆ ಮುಂದಾಗಿದೆ. ಅಸಲಿಗೆ ಶಾಲಾ-ಕಾಲೇಜುಗಳಿಗೆ ಬೀಗ ಹಾಕಿಸುತ್ತಿರುವುದು ಶಾಶ್ವತವಾಗೇನೂ ಅಲ್ಲ. ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿದೆ. ಹೀಗಾಗಿ ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ಜೊತೆಗೆ ಪರಿಸ್ಥಿತಿ ನೋಡಿಕೊಂಡು ಯಾವಾಗ ಅವುಗಳನ್ನು ಮತ್ತೆ ತೆರೆಯಬೇಕೆಂದು ಸರ್ಕಾರವೇ ಘೋಷಿಸಲಿದೆ.

ಮುಖಕ್ಕೆ ಮಾಸ್ಕ್ ಇಲ್ಲದಿದ್ದರೆ ಅಷ್ಟೇ ಕಥೆ

ಮುಖಕ್ಕೆ ಮಾಸ್ಕ್ ಇಲ್ಲದಿದ್ದರೆ ಅಷ್ಟೇ ಕಥೆ

ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿ ಹೋಗಿದೆ. ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಮಾಸ್ಕ್ ಧರಿಸಲೇಬೇಕಾದಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೆಲ್ಲ ಅರಿತು ಸರ್ಕಾರವೇ ತನ್ನ ಪ್ರಜೆಗಳಿಗೆ ಮಾಸ್ಕ್ ನೀಡುವ ಕ್ರಮ ಕೈಗೊಂಡಿತ್ತು. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದರು.

ದೆಹಲಿಗೆ ಹೋಗುವ ಮುನ್ನ ಹುಷಾರ್: ಅಲ್ಲಿ ಮಾಸ್ಕ್ ತೆಗೆದರೆ ಮರಣ!ದೆಹಲಿಗೆ ಹೋಗುವ ಮುನ್ನ ಹುಷಾರ್: ಅಲ್ಲಿ ಮಾಸ್ಕ್ ತೆಗೆದರೆ ಮರಣ!

ದೆಹಲಿಯಲ್ಲಿ ಗಾಳಿ ಗುಣಮಟ್ಟ ಎಷ್ಟಿದೆ ಗೊತ್ತಾ?

ದೆಹಲಿಯಲ್ಲಿ ಗಾಳಿ ಗುಣಮಟ್ಟ ಎಷ್ಟಿದೆ ಗೊತ್ತಾ?

ದೆಹಲಿಯಲ್ಲಿ ಗಾಳಿ ಗುಣಮಟ್ಟ ಮಿತಿ ಮೀರಿದ್ದು, ವಿಷಾನಿಲವಾಗಿ ಪರಿವರ್ತನೆ ಆಗಿ ಬಿಟ್ಟಿದೆ. ಇಂದು ಬೆಳಗ್ಗೆ ನೋಯ್ಡಾ ಸೆಕ್ಟರ್ ನಲ್ಲಿ ಗಾಳಿ ಗುಣಮಟ್ಟದ ಸೂಚ್ಯಂಕ 768ಕ್ಕೆ ತಲುಪಿದೆ. ಗಜಿಯಾಬಾದ್ ನಲ್ಲಿ ಗಾಳಿಯ ಗುಣಮಟ್ಟ 714, ದಿಟೆ ಓಕ್ಲಾ ಪ್ರದೇಶದಲ್ಲಿ 624, ಬನಾವಾದಲ್ಲಿ 792, ರೋಹಿಣಿ ಎಂಬಲ್ಲಿ 692, ಹಾಗೂ ಆನಂದ್ ವಿಹಾರ್ ನಲ್ಲಿ ಗಾಳಿಯ ಗುಣಮಟ್ಟ 666ಕ್ಕೆ ಏರಿಕೆಯಾಗಿದೆ. ಈ ಮೂಲಕ ಗಾಳಿಯ ಗುಣಮಟ್ಟ ಅಪಾಯಕಾರಿ ಮಟ್ಟವನ್ನೂ ಮೀರಿ ಹೋಗಿದೆ.

ಗಾಳಿ ಗುಣಮಟ್ಟ ಎಷ್ಟಿರಬೇಕು ಗೊತ್ತಾ?

ಗಾಳಿ ಗುಣಮಟ್ಟ ಎಷ್ಟಿರಬೇಕು ಗೊತ್ತಾ?

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹಾಳಾಗಿ ಹೋಗಿದ್ದು, ಇಲ್ಲಿ ಗಾಳಿಯೇ ವಿಷಾನಿಲವಾಗಿ ಪರಿವರ್ತನೆ ಆಗಿ ಬಿಟ್ಟಿದೆ. ಹಾಗಿದ್ದರೆ ಗಾಳಿಯ ಗುಣಮಟ್ಟದ ಪ್ರಮಾಣ ಎಷ್ಟಿರಬೇಕು ಎಂದು ನೋಡುವುದಾದರೆ,

- 00-50 ಉತ್ತಮ

- 51-100 ತೃಪ್ತಿದಾಯಕ

- 101-200 ಮಧ್ಯಮ

- 201-300 ಕಳಪೆ

- 301-400 ಅತಿಕಳಪೆ

- 401-500 ಅಪಾಯಕಾರಿ

- 500 ನಂತರ ಅತಿ ಅಪಾಯಕಾರಿ

ಸದ್ಯ ದೆಹಲಿಯಲ್ಲಿನ ವಾಯುಮಾಲಿನ್ಯದ ಪ್ರಮಾಣ ಅತಿ ಅಪಾಯಕಾರಿ ಮಟ್ಟವನ್ನೂ ಕೂಡಾ ಮೀರಿ ಹೋಗಿದೆ.

ಸ್ವಲ್ಪ ಜೋರಾಗಿ ಉಸಿರಾಡಿದರೆ ಆಸ್ಪತ್ರೆ ಸೇರುವುದು ಪಕ್ಕಾ!

ಸ್ವಲ್ಪ ಜೋರಾಗಿ ಉಸಿರಾಡಿದರೆ ಆಸ್ಪತ್ರೆ ಸೇರುವುದು ಪಕ್ಕಾ!

ಕಳೆದ ಎರಡು ಮೂರು ದಿನಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಇಂದು ಮತ್ತೆ ವಾತಾವರಣ ಹದಗೆಟ್ಟು ಹೋಗಿದೆ. ವಾಯು ಮಾಲಿನ್ಯದಿಂದ ಗಾಳಿ ಗುಣಮಟ್ಟ ಮತ್ತಷ್ಟು ಹಾಳಾಗಿರುವ ಬಗ್ಗೆ ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಆಂಡ್ ವೆದರ್ ಫಾರಕಾಸ್ಟಿಂಗ್ ಆಂಡ್ ರಿಸರ್ಚ್ ತಿಳಿಸಿದೆ. ಅಲ್ಲದೇ ಜನರಲ್ಲಿ ವಾಯುಮಾಲಿನ್ಯದಿಂದ ಉಸಿರಾಟ ತೊಂದರೆ, ಶ್ವಾಸಕೋಶದ ಸಮಸ್ಯೆ ಹಾಗೂ ಹೃದಯಾಘಾತದ ಭೀತಿಯನ್ನು ಎದುರಿಸುತ್ತಿದ್ದಾರೆ.

English summary
Pollution In Delhi Rising Again. Mask Compulsory For People. Two Day Leave For Students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X