ಮನೆ ಬಾಗಿಲಿಗೆ ಪಡಿತರ ವಿತರಣೆ, ದೆಹಲಿಗಾಗಿ ಎಎಪಿ ಪ್ರಣಾಳಿಕೆ

ನವದೆಹಲಿ, ಫೆಬ್ರವರಿ 04: ದೆಹಲಿ ವಿಧಾನಸಭೆ ಚುನಾವಣೆಗಾಗಿ ಹತ್ತು ಪ್ರಮುಖ ಆಶ್ವಾಸನೆಯೊಂದಿಗೆ ಆಮ್ ಆದ್ಮಿ ಪಕ್ಷ(ಎಎಪಿ) ಪ್ರಣಾಳಿಕೆಯನ್ನು ಇಂದು ಪ್ರಕಟಿಸಲಾಗಿದೆ.

ದೆಹಲಿಗಾಗಿ 10 ಅಂಶ ಹೊಂದಿರುವ ಪ್ರಣಾಳಿಕೆಯನ್ನು ಮಂಗಳವಾರದಂದು ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಕೇಜ್ರಿವಾಲ್ ಅವರು ಭರವಸೆಗಳುಳ್ಳ ಗ್ಯಾರಂಟಿ ಕಾರ್ಡ್ ಘೋಷಿಸಿದ್ದರು.

ಮನೆ ಬಾಗಿಲಿಗೆ ಪಡಿತರ ವಿತರಣೆ, ಎಲ್ಲರಿಗೂ ಗುಣಮಟ್ಟದ ಶಿಕ್ಷಣ, ಶಾಲೆಗಳಲ್ಲಿ ದೇಶಭಕ್ತಿ ಪಠ್ಯ ಅಳವಡಿಕೆ ಮುಂತಾದ ಅಂಶಗಳು ಪ್ರಣಾಳಿಕೆಯಲ್ಲಿವೆ.

Delhi polls: AAP releases manifesto with focus on health, education and electricity

ಪ್ರಣಾಳಿಕೆ ಬಗ್ಗೆ ಮಾತನಾಡಿದ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ, ಆಹಾರ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಎಎಪಿ ಬದ್ಧವಾಗಿದೆ. ದೆಹಲಿ ಜನರಿಗೆ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುತ್ತೇವೆ.

10 ಲಕ್ಷ ಮಂದಿ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ ರವಾನೆಯಾಗಲಿದೆ, ಯುವಕರು, ಮಹಿಳೆ ಹಾಗೂ ಜನ ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ತಯಾರಿಸಲಾಗಿದೆ ಎಂದರು.

ಗ್ಯಾಲರಿ: ದಿಲ್ಲಿ ಗಲ್ಲಿಗಲ್ಲಿಗಳಲ್ಲಿ ಚುನಾವಣೆ ರಂಗೋ ರಂಗು

ಸಫಾಯಿ ಕರ್ಮಚಾರಿಗಳು ಕರ್ತವ್ಯ ನಿರತರಾಗಿದ್ದ ಮೃತರಾದರೆ ವಿಮೆ ರೂಪದಲ್ಲಿ 1 ಕೋಟಿ ರು ಪರಿಹಾರ ಧನ ನೀಡಲಾಗುತ್ತದೆ. ಜನ ಲೋಕಪಾಲ್ ಮಸೂದೆಯನ್ನು ಮಂಡನೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಮುಖಂಡರಾದ ಗೋಪಾಲ್ ರೈ, ಸಂಜಯ್ ಸಿಂಗ್, ಜಾಸ್ಮಿನ್ ಶಾ ಮತ್ತು ಡಾ.ಅಜಯ್​ ಕುಮಾರ್ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+