ಪರೀಕ್ಷಾರ್ಥ ಸಂಚಾರ : ಗೋಡೆಗೆ ಗುದ್ದಿದ ಮೆಟ್ರೋ ರೈಲು
ನವದೆಹಲಿ, ಡಿಸೆಂಬರ್ 19 : ನವ ದೆಹಲಿ ಮೆಟ್ರೋ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರದ ವೇಳೆ ಅವಘಡ ನಡೆದಿದೆ. ಕ್ರಿಸ್‌ಮಸ್ ದಿನ ಈ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ದೆಹಲಿಯ ಮೆಜೆಂಟಾ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಅವಘಡ ನಡೆದಿದೆ. ರೈಲು ಹಳಿಯಿಂದ ಹೊರಬಂದು ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.

ಮೆಜೆಂಟಾ ಮಾರ್ಗ ದೆಹಲಿಯ ಜಾನಕಿಪುರಿ-ನೋಯ್ಡಾ ನಡುವೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರಕ್ಕೆ ಈಗಾಗಲೇ ಅನುಮತಿ ಸಿಕ್ಕಿದೆ. ನೂತನ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿ.25ರಂದು ಲೋಕಾರ್ಪಣೆ ಮಾಡಲಿದ್ದಾರೆ.
12.64 ಕಿ.ಮೀ. ಉದ್ದದ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು ಕಳೆದ ತಿಂಗಳು ಅನುಮತಿ ನೀಡಿದ್ದರು. ಮಂಗಳವಾರ ಪರೀಕ್ಷಾರ್ಥ ಸಂಚಾರದ ವೇಳೆ ಗೋಡೆಗೆ ರೈಲು ಡಿಕ್ಕಿ ಹೊಡೆದಿದೆ.

ಬ್ರೇಕ್ ಫೇಲ್ ಘಟನೆಗೆ ಕಾರಣ ಎಂದು ಅಂದಾಜಿಸಲಾಗಿದೆ. ಅಪಘಡ ನಡೆಯುವ ವೇಳೆ ರೈಲಿನಲ್ಲಿ ಯಾರೂ ಇರಲಿಲ್ಲ.











Click it and Unblock the Notifications