169 ದಿನಗಳ ಬಳಿಕ ದೆಹಲಿಯಲ್ಲಿ ಮೆಟ್ರೋ ಸಂಚಾರ ಆರಂಭ

ನವದೆಹಲಿ, ಸೆಪ್ಟೆಂಬರ್ 07: ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ಮೆಟ್ರೋ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನವದೆಹಲಿಯಲ್ಲಿ ಮೆಟ್ರೋ ರೈಲುಗಳ ಸಂಚಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ.

Recommended Video

      ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಸಿದ್ರಾ? ಹಂಗಾದ್ರೆ.. ಗೋವಿಂದ | Oneindia Kannada

      ಸೋಮವಾರದಿಂದ ದೇಶದ ವಿವಿಧ ನಗರಗಳಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದೆ. ಪ್ರಯಾಣಿಕರ ಸುರಕ್ಷತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

      ಹಲವಾರು ಮೆಟ್ರೋ ನಿಗಮಗಳು ಪ್ರಾಯೋಗಿಕವಾಗಿ ಪೀಕ್ ಅವರ್‌ನಲ್ಲಿ ಮಾತ್ರ ರೈಲುಗಳ ಸಂಚಾರವನ್ನು ನಡೆಸಲಿವೆ. ರೈಲು ನಿಲ್ದಾಣ ಸ್ಯಾನಿಟೈಸ್ ಮಾಡಲಾಗಿದೆ. ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ.

      Delhi Metro Rail Corporation Resumed Services

      ಗುರುಗಾಂವ್‌ನ ಹುಡಾ ಸಿಟಿ ಸೆಂಟರ್ ರೈಲು ನಿಲ್ದಾಣಕ್ಕೆ 7 ಗಂಟೆಗೆ ಮೊದಲ ರೈಲು ಆಗಮಿಸಿತು. "ನನಗೆ ಸಂತಸವಾಗುತ್ತಿದೆ. ಮೆಟ್ರೋ ರೈಲು ಸೇವೆ ಮತ್ತೆ ಆರಂಭವಾಗಿದೆ" ಎಂದು ಪ್ರಯಾಣಿಕರು ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡರು.

      169 ದಿನಗಳ ಬಳಿಕ ದೆಹಲಿಯಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಿದೆ. ಜನರು ಉತ್ಸಾಹದಿಂದಲೇ ಮೆಟ್ರೋ ನಿಲ್ದಾಣಗಳಿಗೆ ಆಗಮಿಸುತ್ತಿದ್ದಾರೆ.

      ಲಕ್ನೋ, ಚೆನ್ನೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಇಂದು ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಮೆಟ್ರೋ ರೈಲುಗಳ ಸಂಚಾರ ಸ್ಥಗಿತಗವಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+