ನ್ಯಾಷನಲ್ ಹೆರಾಲ್ಡ್: ಸೋನಿಯಾ, ರಾಹುಲ್ ವಿಚಾರಣೆಗೆ ಕೋರ್ಟ್ ಒಪ್ಪಿಗೆ

Posted By:
Subscribe to Oneindia Kannada

ನವದೆಹಲಿ, ಮೇ 12: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಒಪ್ಪಿಗೆ ನೀಡಿದೆ. ನ್ಯಾಷನಲ್ ಹೆರಾಲ್ಡ್ ಸೇರಿದಂತೆ ಮೂರು ಪತ್ರಿಕೆಗಳ ಕಂಪೆನಿಗಳಿಗೆ ಸಂಬಂಧಿಸಿದಂತೆ ಸೋನಿಯಾ ಹಾಗೂ ರಾಹುಲ್ ವಿಚಾರಣೆಗೆ ಆದಾಯ ತೆರಿಗೆ ಇಲಾಖೆಗೆ ದಾರಿ ಸುಗಮವಾಗಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ದಿವಂಗತ ಪ್ರಧಾನಿ ಜವಾಹರ್ ಲಾಲ್ ನೆಹರು ಆರಂಭಿಸಿ, ಅದರ ಸಂಪಾದಕರೂ ಆಗಿದ್ದರು. ಹದಿನೈದು ದಶಲಕ್ಷ ಅಮೆರಿಕನ್ ಡಾಲರ್ ನಷ್ಟು ಸಾಲ ಹಿಂತಿರುಗಿಸಲಾಗದೆ 2008ರಲ್ಲಿ ಮುಚ್ಚಿತ್ತು.[ಪ್ರಧಾನಿ ನಿವಾಸಕ್ಕಿಂತ ಸೋನಿಯಾ ಗಾಂಧಿ ಬಂಗಲೆಯೇ ದೊಡ್ಡದು!]

delhi-high-court-clears-way-it-department-investigate-the-national-herald-case

ನೆಹರೂ ಅವರ ಮರಿಮಗ ರಾಹುಲ್ ಹಾಗೂ ಸೋನಿಯಾ ಗಾಂಧಿ ಆ ಸಂಸ್ಥೆಯ ಖರೀದಿಗಾಗಿ ಯಂಗ್ ಇಂಡಿಯನ್ ಕಂಪೆನಿ ಎಂದು ಹುಟ್ಟು ಹಾಕಿ, ಕಾಂಗ್ರೆಸ್ ಪಕ್ಷದ ನಿಧಿಯಿಂದ ನ್ಯಾಷನಲ್ ಹೆರಾಲ್ಡ್ ಸಾಲ ತೀರಿಸಿದ್ದಾರೆ. ಪತ್ರಿಕೆಯ ಸಹವರ್ತಿ ಸಂಸ್ಥೆಗಳ ಆಸ್ತಿ ಮೌಲ್ಯವೇ 335 ಮಿಲಿಯನ್ ಡಾಲರ್ ಅಮೆರಿಕನ್ ಡಾಲರ್ ಇದ್ದು, ಅವು ಸಾಲ ತೀರಿಸಬಹುದಿತ್ತು ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು.

ಯಂಗ್ ಇಂಡಿಯನ್ ಕಂಪೆನಿಯು ನ್ಯಾಷನಲ್ ಹೆರಾಲ್ಡ್ ಮತ್ತು ಇತರ ಪತ್ರಿಕೆಯ ಎಲ್ಲ ಷೇರುಗಳನ್ನು ಖರೀದಿಸಿ, ಅದರ ಆಸ್ತಿಗಳನ್ನು ಬಾಡಿಗೆಗೆ ನೀಡಿ, ಅದರ ಲಾಭವನ್ನು ಷೇರುದಾರರಿಗೆ ಹಂಚಲಾಗಿತ್ತು. ಷೇರುದಾರರ ಪೈಕಿ ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರದೇ ಶೇ 76ರಷ್ಟು ಒಡೆತನವಿತ್ತು.[ನ್ಯಾಷನಲ್ ಹೆರಾಲ್ಡ್ ಆರಂಭಕ್ಕೆ 'ಕೈ' ಮುಂದೆ, ಏನಿದೆ ಹಿಂದೆ?]

ಪಕ್ಷದ ನಿಧಿ ಹದಿನೈದು ದಶಲಕ್ಷ ಅಮೆರಿಕನ್ ಡಾಲರ್ ಅನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡ ಆರೋಪದ ಮೇಲೆ ವೈಯಕ್ತಿಕವಾಗಿ ಕೋರ್ಟ್ ಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಬೇಕೆಂದು 2016ರಲ್ಲಿ ಸೋನಿಯಾ-ರಾಹುಲ್ ಅರ್ಜಿ ಹಾಕಿಕೊಂಡಿದ್ದರು. ಅದಕ್ಕೆ ಕೋರ್ಟ್ ಸಹ ಒಪ್ಪಿಗೆ ಸೂಚಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A company which has Congress bosses Sonia and Rahul Gandhi as its main stakeholders will be investigated by income tax officials, the Delhi High Court ruled today, according to news agency ANI.
Please Wait while comments are loading...