ಔಷಧಿ ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ತಡೆ
ವಿಕ್ಸ್ ಆ್ಯಕ್ಷನ್ 500, ಡಿ-ಕೋಲ್ಡ್ ಸೇರಿದಂತೆ ಇತರೆ 344 ಔಷಧಿಗಳನ್ನು ನಿಷೇಧಿಸಲು ನಿರ್ಧರಿಸಿದ್ದ ಕೇಂದ್ರ ಸರ್ಕಾರಕ್ಕೆ ಹಿನ್ನೆಡೆಯಾಗಿದ್ದು, ಔಷಧಿ ನಿಷೇಧಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನವದೆಹಲಿ, ಡಿಸೆಂಬರ್,1: ವಿವಿಧ ಸಂಯೋಜನೆಯ 344 ಔಷಧಿಗಳನ್ನು ನಿಷೇಧಿಸಲು ಮುಂದಾಗಿದ್ದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದೆ.
ಸಾಮಾನ್ಯ ಜನರಿಗೂ ಪರಿಚಯವಿದ್ದ ವಿಕ್ಸ್ ಆ್ಯಕ್ಷನ್ 500, ಕೋರೆಕ್ಸ್ ಕಾಫ್ ಸಿರಪ್, ಡಿ-ಕೋಲ್ಡ್ ನಂತಹ ಪ್ರಮುಖ ಔಷಧಿಗಳು ಸೇರಿದಂತೆ ಇತರೆ 344 ಔಷಧಿಗಳನ್ನು ನಿಷೇಧಿಸುವ ಕುರಿತು ಕೇಂದ್ರ ಸರ್ಕಾರ ಚಿಂತಿಸಿತ್ತು.
ಹೈಕೋರ್ಟ್ ತೀರ್ಪಿನಿಂದ ಕೇಂದ್ರ ಸರ್ಕಾರಕ್ಕೆ ಹಿನ್ನೆಡೆಯಾಗಿದೆ. ಆದರೆ ಔಷಧಿ ಕಂಪೆನಿಗಳು ಮಾತ್ರ ಕೋರ್ಟ್ ತೀರ್ಪಿನಿಂದ ನಿಟ್ಟುಸಿರು ಬಿಟ್ಟಿವೆ.

ಔಷಧಿ ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಪಿಫಿಜರ್, ಗ್ಲೆನ್ ಮಾರ್ಕ್, ಪ್ರೊಕ್ಟರ್, ಗ್ಯಾಂಬಲ್, ಸಿಪ್ಲಾ ಸೇರಿದಂತೆ ಹಲವು ಸರ್ಕಾರೇತರ ಸಂಸ್ಥೆಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದವು.
ಈ ಔಷಧಿಗಳು ಜನರ ಆರೋಗ್ಯಕ್ಕೆ ಮಾರಕ ಇದಕ್ಕೆ ಬದಲೀ ವ್ಯವಸ್ಥೆ ಕಂಡುಕೊಳ್ಳುವುದು ಅಗತ್ಯ ಆದ್ದರಿಂದ ಈ 344 ಔಷಧಿಗಳನ್ನು ನಿಷೇಧಿಸಬೇಕೆಂದು ಸರ್ಕಾರ ತಿಳಿಸಿತ್ತು.












Click it and Unblock the Notifications