ದೆಹಲಿ ಆಮ್ ಆದ್ಮಿ ಗೆ ಕೇಜ್ರಿವಾಲ್ 'ನೀರು ಭಾಗ್ಯ'

ನವದೆಹಲಿ, ಜೂ, 29 : ಹಲವಾರು ಭರವಸೆಗಳ ಮಹಾಪೂರ ಹರಿಸಿ ಅಧಿಕಾರ ಗದ್ದುಗೆ ಏರಿದ ಆಮ್ ಆದ್ಮಿ ಸರ್ಕಾರ ಹೊಸದೊಂದು ಯೋಜನೆ ಜಾರಿಗೆ ತರುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಸರ್ಕಾರ ಮೊದಲ ಬಾರಿ ಒಳಚರಂಡಿ ಮತ್ತು ನೀರು ಅಭಿವೃದ್ಧಿ ಪಾವತಿ ಬಿಲ್‌ಗಳಲ್ಲಿ 80% ಕಡಿತಗೊಳಿಸಿದೆ.

ಕಳೆದ ತಿಂಗಳಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಮ್‌ ಆದ್ಮಿ ಪಕ್ಷ, ದೆಹಲಿ ಜಲ ಅಭಿವೃದ್ಧಿ ನಿಗಮವು ಒಳಚರಂಡಿ ಹಾಗೂ ನೀರಿನ ಬಿಲ್‌ ಸಂಗ್ರಹಿಸುತ್ತಿರುವ ಸಮಯದಲ್ಲಿ ಬಿಲ್ ಕಡಿಮೆ ಮಾಡುವ ಕುರಿತು ಘೋಷಿಸಿತ್ತು. ನಗರದಲ್ಲಿನ ಸುಮಾರು 1,700 ಅನಧಿಕೃತ ಕಾಲೋನಿಗಳು ಇದರ ಲಾಭವನ್ನು ಪಡೆಯಲು ಅರ್ಹವಾಗಿವೆ. ನಗರಾಭಿವೃದ್ಧಿ ಇಲಾಖೆ ಜೂನ್ 26 ರಂದು ಒಳಚರಂಡಿ ಮತ್ತು ನೀರು ಅಭಿವೃದ್ಧಿ ನಿಗಮ ಬಿಲ್ ಕಡಿಮೆ ಮಾಡುವ ನಿರ್ಧಾರ ತೆಗೆದುಕೊಂಡಿದೆ.

Delhi govt notifies 80pc reduction in water, sewer charges

ದೆಹಲಿ ಸರ್ಕಾರ ನೀರು ಅಭಿವೃದ್ಧಿ ಮತ್ತು ಒಳಚರಂಡಿಯ ಬಿಲ್‌ನ್ನು ಕಡಿತಗೊಳಿಸಿರುವುದು ಇದೊಂದು ಐತಿಹಾಸಿಕ ಮೈಲಿಗಲ್ಲು. ನೀರು ಅಭಿವೃದ್ಧಿ ನಿಗಮದ ಬಿಲ್‌ಗಳಲ್ಲಿ ಸುಮಾರು ರೂ 440 ಸ್ಕ್ವೇರ್‌ ಮೀಟರ್‌ ನಿಂದ 100 ರೂ ಸ್ಕ್ವೇರ್‌ ಮೀಟರ್‌ ಹಾಗೂ ಒಳಚರಂಡಿ ಅಭಿವೃದ್ಧಿ ಬಿಲ್‌ಗಳಲ್ಲಿ ರೂ 494 ಸ್ಕ್ವೇರ್‌ ಮೀಟರ್‌ ನಿಂದ ರೂ 100ರವರೆಗೆ ಕಡಿತಗೊಂಡಿದೆ.

ಪರಿಷ್ಕೃತ ದರಗಳು ಅನಧಿಕೃತ ಕಾಲೋನಿಗಳಾದ ಡಿ, ಇ, ಎಫ್, ಜಿ ಮತ್ತು ಹೆಚ್ ಗಳಿಗೆ ಅನ್ವಯವಾಗಲಿದೆ. ಇದು ಸೆಪ್ಟೆಂಬರ್‌ 25, 2015 ಮತ್ತು ಅದರ ನಂತರ ಜಾರಿ ಆಗಲಿದ್ದು, ಇದೀಗ ಮೊದಲಿನ ಬೆಲೆಯೇ ಮುಂದುವರೆಯಲಿದೆ. ಡಿಜೆಬಿ ಅಧಿಕಾರಿಗಳ ಪ್ರಕಾರ ಗ್ರಾಹಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು www.djb.gov.in, www.delhijalboard.nic.in ಈ ವಿಳಾಸ ಬಳಸಿ ವಲಯ ಆದಾಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+