• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿ ಅಗ್ನಿ ಅವಘಡ: ಕೊನೆಗೂ ಸೆರೆ ಸಿಕ್ಕ ಆರೋಪಿಗಳು

|

ನವದೆಹಲಿ, ಡಿಸೆಂಬರ್ 9; ಭಾನುವಾರ ಬೆಳಿಗ್ಗೆ ಉತ್ತರ ದೆಹಲಿಯ ರಾಣಿ ಝಾನ್ಸಿ ರಸ್ತೆಯ, ಆಂಜ್ ಮಂಡಿ ಪ್ರದೇಶದದಲ್ಲಿ ಸಂಭವಿಸಿರುವ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲಿಕ ಹಾಗೂ ಅವನ ಪಾಲುದಾರನನ್ನು ಬಂಧಿಸಲಾಗಿದೆ. ಅವರನ್ನು ದೆಹಲಿ ನ್ಯಾಯಾಲಯ 14 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಕಟ್ಟಡದ ಮಾಲಿಕನಾಗಿದ್ದ ರೆಹಾನ್ ಹಾಗೂ ರೆಹಾನ್ ಪಾಲುದಾರ ಪುಕ್ರಾನ್ ಎನ್ನುವರನ್ನು ದೆಹಲಿ ಪೊಲೀಸರು ತಡರಾತ್ರಿ ಉತ್ತರ ದೆಹಲಿಯಲ್ಲಿ ಬಂಧಿಸಿದ್ದರು. ಇಂದು ದೆಹಲಿ ಕೋರ್ಟ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರಾದ ಮನೋಜಕುಮಾರ ಅವರು ಆರೋಪಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.

ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಕಲಂ 304 ಹಾಗೂ 285 ರ ಪ್ರಕಾರ (ಉದ್ದೇಶವಲ್ಲದ ಕೊಲೆ ಪ್ರಕರಣ ಹಾಗೂ ನಿರ್ಲಕ್ಷ್ಯದಿಂದ ಸಾವು ಸಂಭವಿಸಲು ಕಾರಣವಾಗುವದು) ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣವನ್ನು ಅಪರಾಧ ದಳಕ್ಕೆ ವರ್ಗಾಯಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ಆಂಜ್ ಮಂಡಿ ಪ್ರದೇಶದ ನಾಲ್ಕು ಅಂತಸ್ತಿನ ರಟ್ಟು ತಯಾರಿಸುವ ಫ್ಯಾಕ್ಟರಿಯಲ್ಲಿ ಭಾನುವಾರ ಶಾರ್ಟ್ ಸರ್ಕೂಟ್ ಸಂಭವಿಸಿ ಈ ದುರಂತ ಸಂಭವಿಸಿತ್ತು. ರಾತ್ರಿ ಕೆಲಸ ಮುಗಿಸಿ, ಕಾರ್ಖಾನೆಯಲ್ಲಿ ಮಲಗಿದ್ದ 150 ಕ್ಕೂ ಹೆಚ್ಚು ಜನರು ಬೆಂಕಿಯ ಜ್ವಾಲೆಯಲ್ಲಿ ಸಿಲುಕಿಕೊಂಡಿದ್ದರು. ಬೆಂಕಿಯ ಕೆನ್ನಾಲಿಗೆ ಹಾಗೂ ವಿಷಕಾರಿ ಹೊಗೆಗೆ ಸಿಲುಕಿ ಒಟ್ಟು 43 ಜನ ಮೃತಪಟ್ಟರೆ, 50 ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಕುರಿತು ದೆಹಲಿ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

English summary
‍Delhi Fire; Court Sends Building Oweners To Police Custody. Building Owner Rehan and one of the partner Fukran sends to police custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X