ತನ್ನ 10 ಕಾರ್ಮಿಕರನ್ನು ವಿಮಾನದಲ್ಲಿ ತವರಿಗೆ ಕಳುಹಿಸಿಕೊಟ್ಟ ರೈತ

ನವದೆಹಲಿ, ಮೇ 28: ಲಾಕ್‌ಡೌನ್‌ನಿಂದಾಗಿ ದೊಡ್ಡ ದೊಡ್ಡ ಕಂಪನಿಗಳು ನೌಕರರ ವೇತನ ಕಡಿತಗೊಳಿಸುತ್ತಿದ್ದರೆ , ದೆಹಲಿಯ ರೈತನೊಬ್ಬ ತನ್ನ ಬಳಿ ಕೆಲಸ ಮಾಡುತ್ತಿದ್ದ 10 ಮಂದಿ ಕಾರ್ಮಿಕರನ್ನು ವಿಮಾನದ ಮೂಲಕ ಕಳುಹಿಸಿಕೊಟ್ಟಿದ್ದಾರೆ.

Recommended Video

      ಸತ್ತ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದ ಮಗು ವಿಡಿಯೋ ವೈರಲ್ | Oneindia Kannada

      ಈ ಕಾರ್ಮಿಕರು ಬಸ್‌ನಲ್ಲಾಗಲಿ, ನಡೆದುಕೊಂಡಾಗಲಿ, ಸೈಕಲ್, ರೈಲಿನಲ್ಲಾಗಲಿ ತೆರಳಿಲ್ಲ ಬದಲಾಗಿ ವಿಮಾನದಲ್ಲಿ ತೆರಳಿದ್ದಾರೆ.ಎರಡು ತಿಂಗಳಿನಿಂದ ತವರಿಗೆ ಮರಳಲಾಗದೆ ಪರಿತಪಿಸುತ್ತಿದ್ದ ಬಿಹಾರದ ಕಾರ್ಮಿಕರ ಆಸೆ ಈಡೇರಿದಂತಾಗಿದೆ. ಏಪ್ರಿಲ್‌ನಲ್ಲೇ ಊರು ಸೇರ ಬಯಸಿದ್ದ ಕಾರ್ಮಿಕರು ಇದೀಗ ಗುರುವಾರ ಬೆಳಗ್ಗೆ 6 ಗಂಟೆಗೆ ವಿಮಾನದ ಮೂಲಕ ಊರು ಸೇರಿದ್ದಾರೆ.

      ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕರ ಲಖೀಂದರ್ ರಾಮ್ , ನಾವು ಕನಸು ಮನಸಿನಲ್ಲೂ ವಿಮಾನದಲ್ಲಿ ಪ್ರಯಾಣಿಸುತ್ತೇವೆ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

      Delhi Farmer Buys Plane Tickets To Send His 10 Workers Home To Bihar

      ದೆಹಲಿಯ ಮಶ್ರೂಮ್ ಬೆಳೆಯುವ ರೈತ ಪಪ್ಪನ್ ಸಿಂಗ್ ಈ ಕಾರ್ಮಿಕರಿಗೆ ಸಹಾಯ ಮಾಡಿದವರು. ಎಷ್ಟೋ ಮಂದಿ ಕಾರ್ಮಿಕರು ನಡೆದುಕೊಂಡು, ಸೈಕಲ್‌ನಲ್ಲಿ ಹೋಗಿ ಅರ್ಧ ದಾರಿಯಲ್ಲೇ ಮೃತಪಟ್ಟಿದ್ದಾರೆ. ಇವುಗಳ ಮಧ್ಯೆ ಈ ರೈತನ ಸಹಾಯ ಮೆಚ್ಚುಗೆಗೆ ಪಾತ್ರವಾಗಿದೆ.

      ಲಖಿಂದರ್ ಪಪ್ಪನ್ ಸಿಂಗ್ ಅವರ ಜಮೀನಿನಲ್ಲಿ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 25ರವರೆಗೂ ಪಪ್ಪನ್ ಸಿಂಗ್ ಅವರು ಈ ಎಲ್ಲಾ ಕಾರ್ಮಿಕರ ಯೋಗಕ್ಷೇಮ, ಆಹಾರವನ್ನು ನೋಡಿಕೊಳ್ಳುತ್ತಿದ್ದರು. ಕಾರ್ಮಿಕರ ಟಿಕೆಟ್‌ಗಾಗಿ 68 ಸಾವಿರ ರೂ ಖರ್ಚಿ ಮಾಡಿದ್ದಲ್ಲದೆ, ಪ್ರತಿಯೊಬ್ಬರಿಗೂ 3 ಸಾವಿರ ರೂ.ನಗದು ಹಣವನ್ನು ಕೊಟ್ಟು ಕಳುಹಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+