ಅಕ್ರಮ ಸಂಬಂಧ ಆರೋಪ, ಕುಮಾರ್ ವಿಶ್ವಾಸ್ ವಿರುದ್ಧ ಎಫ್ಐಆರ್?

ನವದೆಹಲಿ, ಮಾರ್ಚ್ 16: ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆ ಜೊತೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಹೊತ್ತುಕೊಂಡಿರುವ ಎಎಪಿ ಮುಖಂಡ ಕುಮಾರ್ ವಿಶ್ವಾಸ್‌ ಅವರಿಗೆ ಮತ್ತೆ ಸಮಸ್ಯೆ ಶುರುವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರ್ ವಿಶ್ವಾಸ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪಟಿಯಾಲ ಹೈಕೋರ್ಟ್ ಬುಧವಾರ (ಮಾರ್ಚ್ 16) ಪೊಲೀಸರಿಗೆ ನಿರ್ದೇಶಿಸಿದೆ.

ಕವಿ ಹಾಗೂ ರಾಜಕಾರಣಿಯಾಗಿರುವ ಕುಮಾರ್ ವಿಶ್ವಾಸ್ (46) ಅವರಿಗೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ದೆಹಲಿ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿತ್ತು. ದೆಹಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬರ್ಖಾ ಶುಕ್ಲಾ ಸಿಂಗ್ ಅವರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಬಳಸಿ ಕುಮಾರ್ ಉತ್ತರಿಸಿದ್ದರು.

2014ರ ಲೋಕಸಭೆ ಚುನಾವಣೆ ವೇಳೆಯಲ್ಲಿ ಕುಮಾರ್ ವಿಶ್ವಾಸ್ ಪಕ್ಷದ ಕಾರ್ಯಕರ್ತೆ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಆರೋಪವಾಗಿದೆ. ಲೋಕಸಭೆ ಚುನಾವಣೆಗೆ ಕುಮಾರ್ ವಿಶ್ವಾಸ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.[ಕೇಜ್ರಿ ಟೀಕಿಸಿ, ಮೋದಿ ಹೊಗಳಿದ 'ಎಎಪಿ' ಕುಮಾರ]

Delhi Court directs police to file FIR against AAP leader

ಅಜಯ್ ವೋಹರಾ ಎನ್ನುವವರು ಅಮೇಥಿಯಲ್ಲಿನ ಆಪ್ ಕಾರ್ಯಕರ್ತೆ ಜೊತೆ ಕುಮಾರ್ ವಿಶ್ವಾಸ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರಿಗೆ ದೂರು ನೀಡಿದ್ದರು. ಈ ಕುರಿತು ಸರಣಿ ಇ ಮೇಲ್‌ಗಳನ್ನು ಕಳಿಸಿದ್ದರು.

ಆದರೆ, ಕುಮಾರ್ ವಿಶ್ವಾಸ್ ಈ ಆರೋಪವನ್ನು ತಳ್ಳಿ ಹಾಕಿದ್ದರು. ಇದು ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರ. ಅಜಯ್ ವೋಹರಾ ಅವರಿಂದ ನನ್ನ ವಿರೋಧಿಗಳು ಈ ದೂರು ಕೊಡಿಸಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಕುಮಾರ್ ವಿಶ್ವಾಸ್ ವಿರುದ್ಧ ಯಾವುದೇ ಗುರುತರ ಸಾಕ್ಷಿಗಳಿಲ್ಲ ಎಂದು ಪೊಲೀಸರು ಹೇಳಿದ್ದರು. ಆದರೆ, ಈಗ ಪಟಿಯಾಲ ಹೈಕೋರ್ಟಿನಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+