• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರವಾಹದಿಂದ ತತ್ತರಿಸಿರುವ ತೆಲಂಗಾಣಕ್ಕೆ 15 ಕೋಟಿ ರೂ. ನೆರವು: ಕೇಜ್ರಿವಾಲ್

|

ದೆಹಲಿ, ಅಕ್ಟೋಬರ್ 20: ಭಾರಿ ಮಳೆ, ಪ್ರವಾಹದಿಂದ ನಲುಗಿ ಹೋಗಿರುವ ತೆಲಂಗಾಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 15 ಕೋಟಿ ರೂ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ತೆಲಂಗಾಣ ಜನ ಜೀವನ ಈಗಾಗಲೇ ಕೊರೊನಾದಿಂದಾಗಿ ಆರ್ಥಿಕವಾಗಿ ತತ್ತರಿಸಿರುವ ತೆಲಂಗಾಣಕ್ಕೆ ಈ ನೆರೆ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ದೃಶ್ಯಸಹಿತ ವರದಿ:ಹೈದ್ರಾಬಾದ್ ನಲ್ಲಿ ಮಳೆ ಸೃಷ್ಟಿಸಿದ ಅವಾಂತರದ ಚಿತ್ರಣ

ಕೇಜ್ರಿವಾಲ್‌ರವರ ಈ ಮಾನವೀಯ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಪ್ರಶಂಶಿಸಿದ್ದರೆ, ಇನ್ನೂ ಕೆಲವರು ತೀವ್ರ ಟೀಕೆಗೆ ಗುರಿಮಾಡಿದ್ದಾರೆ.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ತೆಲಂಗಾಣ ರಾಜ್ಯದ ಬೆನ್ನಿಗೆ ನಿಂತಿರುವ ದೆಹಲಿ ಸರ್ಕಾರವು ಸಹಾಯ ಹಸ್ತ ಚಾಚಿದ್ದು, 15 ಕೋಟಿ ದೇಣಿಗೆ ನೀಡಲು ಮುಂದಾಗಿದೆ.

ಈ ಸಂಬಂಧ ಸ್ವತಃ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಟ್ವೀಟ್​ ಮಾಡಿದ್ದಾರೆ. ಟ್ವೀಟ್‌ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ "ಹೈದರಾಬಾದ್‌ನಲ್ಲಿ ಹಿಂದೆಂದೂ ಕಾಣದ ಭೀಕರ ಪ್ರವಾಹ ಉಂಟಾಗಿದೆ.

ಈ ಬಿಕ್ಕಟ್ಟಿನ ಸಮಯದಲ್ಲಿ ದೆಹಲಿಯ ಜನರು ಹೈದರಾಬಾದ್‌ನ ನಮ್ಮ ಸಹೋದರ ಸಹೋದರಿಯರೊಂದಿಗೆ ನಿಲ್ಲಲಿದ್ದಾರೆ. ಪರಿಹಾರ ಕಾರ್ಯಗಳಿಗಾಗಿ ದೆಹಲಿ ಸರ್ಕಾರವು ತೆಲಂಗಾಣ ಸರ್ಕಾರಕ್ಕೆ 15 ಕೋಟಿ ರೂ ದೇಣಿಗೆ ನೀಡಲಿದೆ ಎಂದು ಹೇಳಿದ್ದಾರೆ.

English summary
Delhi Chief Minister Arvind Kejriwal has extended help to Telangana, in view of the floods in Hyderabad and in some other districts of the state. The Delhi CM has announced Rs15 crore to the Govt of Telangana for its relief efforts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X