ಅಕ್ಷರಧಾಮ್ ದೇವಸ್ಥಾನದಲ್ಲಿ ದೀಪಾವಳಿ ಪೂಜೆ ನೆರವೇರಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ನವದೆಹಲಿ, ನವೆಂಬರ್ 15: ಭಜನೆ, ಆರತಿ ಮತ್ತು ದೀಪಗಳೊಂದಿಗೆ ಅದ್ಧೂರಿ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಅಕ್ಷರಧಾಮ್ ದೇವಸ್ಥಾನದಲ್ಲಿ ತಮ್ಮ ಕುಟುಂಬ ಮತ್ತು ಕ್ಯಾಬಿನೆಟ್ ಸಚಿವರೊಂದಿಗೆ ದೀಪಾವಳಿ ಪೂಜೆಯನ್ನು ನಡೆಸಿದರು.
ದೆಹಲಿಯಲ್ಲಿ ಮಾಲಿನ್ಯ ಮಟ್ಟ ಹೆಚ್ಚುತ್ತಿರುವುದರಿಂದ ಮತ್ತು ಕೊರೊನಾವೈರಸ್ ಹಿನ್ನೆಲೆಯಿಂದಾಗಿ ಪಟಾಕಿಗಳನ್ನು ಸಿಡಿಸಬಾರದು ಎಂದು ಕೇಜ್ರಿವಾಲ್ ಜನರಲ್ಲಿ ಮನವಿ ಮಾಡಿದ್ದರು. ಟಿವಿ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನೇರ ಪ್ರಸಾರವಾಗುತ್ತಿದ್ದ "ದೀಪಾವಳಿ ಪೂಜಾ' ಕಾರ್ಯಕ್ರಮದಲ್ಲಿ ತಮ್ಮೊಂದಿಗೆ ಸೇರಿಕೊಳ್ಳಬೇಕೆಂದು ಅವರು ವಿನಂತಿಸಿದ್ದರು.
"ಇಂದು ಎರಡು ಕೋಟಿ ದೆಹಲಿ ಜನರ ಕುಟುಂಬದೊಂದಿಗೆ ಒಟ್ಟಾಗಿ ದೀಪಾವಳಿ ಪೂಜೆ ನೆರವೇರಿಸಿದೆ. ಎಲ್ಲರ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದೆ. ಎಲ್ಲರೂ ಯೋಗಕ್ಷೇಮವಾಗಿರಲಿ' ಎಂದು ಕೇಜ್ರಿವಾಲ್ ಕಾರ್ಯಕ್ರಮದ ನಂತರ ಟ್ವೀಟ್ ಮಾಡಿದ್ದಾರೆ.

ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಎಎಪಿ ಸಂಸದರು ಮತ್ತು ಶಾಸಕರು ಮತ್ತು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಗಳು "ದೀಪಾವಳಿ ಪೂಜಾ' ಸಮಾರಂಭದ ಭಾಗವಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
आप सभी के घर में माँ लक्ष्मी का वास हो, सभी का मंगल हो। अक्षरधाम मंदिर से "दिवाली पूजन" | LIVE https://t.co/DRNablwq2H
— Arvind Kejriwal (@ArvindKejriwal) November 14, 2020
ಅರ್ಚಕರು ಮಂತ್ರಗಳನ್ನು ಪಠಿಸಿದಂತೆ, ಮುಖ್ಯಮಂತ್ರಿ ಮತ್ತು ಅವರ ಮಂತ್ರಿಗಳು ಮಂತ್ರಗಳನ್ನು ಹೇಳಿದರು. ಖ್ಯಾತ ಗಾಯಕ ಅನೂಪ್ ಜಲೋಟಾ ಸಮಾರಂಭದಲ್ಲಿ ವಿವಿಧ ಭಜನೆಗಳನ್ನು ಹಾಡಿದರು.












Click it and Unblock the Notifications