ಕೇಜ್ರಿವಾಲ್ ಧರಣಿಯನ್ನು ಗೇಲಿ ಮಾಡಿದ ಬಿಜೆಪಿ

ನವದೆಹಲಿ, ಜೂನ್ 13: ಲೆಫ್ಟಿನೆಂಟ್‌‌ ಗವರ್ನರ್‌‌ ನಡೆ ಖಂಡಿಸಿ, ಕಚೇರಿಯಲ್ಲೇ ಸಿಎಂ ಕೇಜ್ರಿವಾಲ್‌ ಮತ್ತು ತಂಡ, ಪ್ರತಿಭಟನೆ ನಡೆಸುತ್ತಿರುವುದು ದೊಡ್ಡ ನಾಟಕ, ಪ್ರಜಾಪ್ರಭುತ್ವದ ಅಣಕು ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.

ಮೂರು ಬೇಡಿಕೆಗಳನ್ನಿಟ್ಟುಕೊಂಡು ಸಿಎಂ ಕೇಜ್ರಿವಾಲ್‌, ಡಿಸಿಎಂ ಮನೀಶ್‌ ಸಿಸೋಡಿಯಾ ಮತ್ತಿಬ್ಬರು ಸಚಿವರು, ಲೆಫ್ಟಿನೆಂಟ್‌‌ ಗವರ್ನರ್‌‌ ಅನಿಲ್‌ ಬೈಜಲ್‌ ಅವರ ಭೇಟಿಗೆ ತೆರಳಿದ್ದರು.

ನಾಲ್ಕು ತಿಂಗಳಿಂದ ಕೆಲಸ ಮಾಡದೆ ಪ್ರತಿಭಟನೆಯಲ್ಲಿ ತೊಡಗಿರುವ ಐಎಎಸ್‌‌ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು. ಆದರೆ, ಲೆಫ್ಟಿನೆಂಟ್‌‌ ಗವರ್ನರ್‌‌ ಅನಿಲ್‌ ಬೈಜಲ್‌, ಐಎಎಸ್‌‌ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ನಿರಾಕರಿಸಿದ್ದರು.

Delhi BJP dubs Kejriwals dharna at L-G office as mockery of democracy

ಕಳೆದ ಮೂರು ದಿನಗಳಿಂದ ಅರವಿಂದ್ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಸ್‌ ಸಿಸೋಡಿಯಾ, ಸಚಿವರಾದ ಸತ್ಯೇಂದ್ರ ಜೈನ್, ಗೋಪಾಲ್ ರೈ ಪ್ರತಿಭಟನೆ ನಡೆಸಿದ್ದು, ಈಗ ಉಪವಾಸ ಸತ್ಯಾಗ್ರಹ ಶುರು ಮಾಡಿದ್ದಾರೆ. ಈ ಹಿಂದೆ ಕೂಡ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರ ಮತ್ತು ಆಗಿನ ಲೆಫ್ಟಿನೆಂಟ್‌‌ ಗವರ್ನರ್‌‌ ನಜೀಬ್‌ ಜಂಗ್‌ ಅವರ ಮಧ್ಯೆ ಕೂಡ ತೀವ್ರ ತಿಕ್ಕಾಟ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

2013 ಹಾಗೂ 2015ರಲ್ಲಿ ಭ್ರಮೆ ಸೃಷ್ಟಿಸಿ ಜನರ ಒಲುವು ಗಳಿಸಿದ ಎಎಪಿ, ಈಗ ಪ್ರತ್ಯೇಕ ರಾಜ್ಯದ ಸ್ಥಾನ ಮಾನದ ವಿಷಯವನ್ನು ದೊಡ್ಡದು ಮಾಡಿ 2019ರ ಲೋಕಸಭೆ ಚುನಾವಣೆ ಎದುರಿಸಲು ಮುಂದಾಗಿದೆ. ಎಎಪಿ ವಿರುದ್ಧ ಬಿಜೆಪಿ ಶಾಸಕರು ಹಾಗೂ ಸಂಸದರು ಪ್ರತಿಭಟನೆ ನಡೆಸುತ್ತೇವೆ ಎಂದು ತಿವಾರಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+