ಸೇನೆ ಬಗ್ಗೆ ಅವಹೇಳನಕಾರಿ ಟ್ವೀಟ್: ರಕ್ಷಣಾ ಸಚಿವಾಲಯದ ವಕ್ತಾರನಿಗೆ ರಜೆ ಶಿಕ್ಷೆ

ನವದೆಹಲಿ, ಅಕ್ಟೋಬರ್ 26: ಸೇನೆಯ ಅಧಿಕಾರಿಗಳ ಕುರಿತು ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ ರಕ್ಷಣಾ ಸಚಿವಾಲಯದ ವಕ್ತಾರರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ.

ವಕ್ತಾರರನ್ನು ರಜೆ ಮೇಲೆ ಕಳುಹಿಸಿರುವುದರಿಂದ ಕರ್ನಲ್ ಅಮನ್ ಆನಂದ್ ಅವರು ಅಧಿಕೃತ ಹಂಗಾಮಿ ವಕ್ತಾರರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಟ್ವೀಟ್ ಖಾತೆ ತಿಳಿಸಿದೆ.

ನೌಕಾಪಡೆದ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್ ಅವರ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

Defence ministry spokesperson sent on leave for insluting military

ಅರುಣ್ ಪ್ರಕಾಶ್ ಅವರು ಹರಿಯಾಣದ ಪಂಚಕುಳ ಜಿಲ್ಲೆಯಲ್ಲಿ ಪಶ್ಚಿಮ ಸೇನಾ ಕಮಾಂಡ್‌ನ ಆಂತರಿಕ ಹಣಕಾಸು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಕಾರ್‌ನ ಬಾನೆಟ್ ಮೇಲೆ ಸೇನೆಯ ಬಾವು ಇರುವುದಕ್ಕೆ ಟ್ವಿಟ್ಟರ್‌ನಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಅಧಿಕಾರಿಯು ಈಗ ಸಾಮಾನ್ಯ ನಾಗರಿಕರಾಗಿದ್ದು, ವಾಹನದಲ್ಲಿ ಸೇನಾ ಧ್ವಜ ಬಳಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದಕ್ಕೆ ಅರುಣ್ ಪ್ರಕಾಶ್, ನಾಗರಿಕರೊಬ್ಬರು ಸೇನಾ ಕಮಾಂಡ್‌ನ ಲಾಂಛನವನ್ನು ದುರ್ಬಳಕೆ ಮಾಡಿಕೊಂಡರೂ ಅದು ಅಪರಾಧವಲ್ಲ. ಆ ವ್ಯಕ್ತಿಗೆ ವಾಗ್ದಂಡನೆ ವಿಧಿಸಬಹುದು ಎಂದು ಪ್ರತಿಕ್ರಿಯೆ ನೀಡಿದ್ದರು.

Defence ministry spokesperson sent on leave for insluting military

ಇದಕ್ಕೆ ರಕ್ಷಣಾ ಸಚಿವಾಲಯದ ಅಧಿಕೃತ ಖಾತೆ ಬಳಸಿ ಪ್ರತಿಕ್ರಿಯೆ ನೀಡಿದ್ದ ವಕ್ತಾರ, 'ನಿಮ್ಮ ಅಧಿಕಾರದ ಅವಧಿಯಲ್ಲಿ ಮನೆಯಲ್ಲಿ ಸೈನಿಕರನ್ನು ದುರ್ಬಳಕೆ ಮಾಡಿಕೊಳ್ಳುವುದರ ಬಗ್ಗೆ ಏನು ಸರ್? ಮಕ್ಕಳನ್ನು ಸೇನೆಯ ವಾಹನದಲ್ಲಿ ಶಾಲೆಗೆ ಕರೆದೊಯ್ಯುವ ಮತ್ತು ಮರಳಿ ತರುವ ಬಗ್ಗೆ ಏನು? ಸರ್ಕಾರಿ ವಾಹನಗಳಲ್ಲಿ ಮೇಡಂ (ಅಧಿಕಾರಿಯ ಪತ್ನಿ) ಅವರ ಶಾಪಿಂಗ್ ವೆಚ್ಚವಾಗುವುದನ್ನು ಮರೆಯುವಂತಿಲ್ಲ. ಮತ್ತು ಲೆಕ್ಕವಿಲ್ಲದಷ್ಟು ಪಾರ್ಟಿಗಳು... ಅವುಗಳಿಗೆ ಯಾರು ಹಣ ನೀಡುತ್ತಾರೆ?' ಎಂದು ಬರೆದಿದ್ದರು.

ಈ ಟ್ವೀಟ್, ಸೇನೆಯ ಅನೇಕ ನಿವೃತ್ತ ಯೋಧರ ಆಕ್ರೋಶ, ಪ್ರತಿಭಟನೆಗೆ ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+