'ದೆಹಲಿ ಕಾಲೇಜು ಹೆಸರು ಬದಲಾವಣೆ ಸರ್ಕಾರದ ನಿರ್ಧಾರವಲ್ಲ'

ನವದೆಹಲಿ, ಡಿಸೆಂಬರ್ 19: ದೆಹಲಿಯ ದಯಾಳ್ ಸಿಂಗ್ (ಸಂಜೆ) ಕಾಲೇಜಿನ ಹೆಸರನ್ನು ಬದಲಾಯಿಸುವ ನಿರ್ಧಾರ ಸರ್ಕಾರ ತೆಗೆದುಕೊಂಡಿದ್ದಲ್ಲ ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.

ಅಕಾಲಿದದಳ ಸಂಸದ ನರೇಶ್ ಗುಜ್ರಾಲ್ ಕೇಳಿದ ಪ್ರಶ್ನೆಗೆ ಪ್ರಕಾಶ್ ಜಾವಡೇಕರ್ ಅವರು ಸಂಸತ್ತಿನ ಶೂನ್ಯವೇಳೆಯಲ್ಲಿ ಉತ್ತರಿಸಿದರು. ನವೆಂಬರ್ 18ರಂದು ಈ ಕಾಲೇಜಿನ ಹೆಸರನ್ನು ವಂದೇ ಮಾತರಂ ಮಹಾವಿದ್ಯಾಲಯ ಎಂದು ಬದಲಾಯಿಸಲಾಗಿತ್ತು.

Decision to rename Delhi Dayal Singh Evening college put on hold : Prakash Javadekar

ಪ್ರತಿ ಭಾರತೀಯರ ಮನಸ್ಸಿನಲ್ಲಿ ದೇಶಭಕ್ತಿಯ ಭಾವನೆಯು ವಂದೇ ಮಾತರಂ ಎಂಬ ಭಾವನೆ ಇದೆ ಎಂದು ನಾನು ನಂಬುತ್ತೇನೆ. ಸರ್ಕಾರವು ದೇಶದಾದ್ಯಂತ ವಂದೇ ಮಾತರಮ್ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಬೇಕು, ಆದರೆ ಯಾವುದೇ ಸಂಸ್ಥೆಯ ಹೆಸರನ್ನು ಬದಲಾಯಿಸಬಾರದು. ಅಲ್ಪಸಂಖ್ಯಾತರ ಶಾಲೆ ಹೆಸರನ್ನು ಬದಲಾಯಿಸುವುದರಿಂದ ಸಿಖ್ಖರ ಮನೋಭಾವವನ್ನು ಹಾನಿಯುಂಟುಮಾಡಿದೆ ಎಂದು ಗುಜ್ರಾಲ್ ಆರೋಪಿಸಿದ್ದರು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಕಾಲೇಜು ಹೆಸರನ್ನು ಬದಲಿಸುವ ನಿರ್ಧಾರ ಕೇಂದ್ರ ಸರ್ಕಾರದ ನಿರ್ಧಾರವಲ್ಲ. ದಯಾಳ್ ಸಿಂಗ್ ಕಾಲೇಜ್ ದೆಹಲಿ ವಿಶ್ವವಿದ್ಯಾನಿಲಯಕ್ಕೆ ಅಧೀನದಲ್ಲಿದ್ದು, ಈ ಬಗ್ಗೆ ವಿವಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಜಾವಡೇಕರ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+