ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಕೊರತೆ: ದೇಶದಲ್ಲಿ ವ್ಯಾಕ್ಸಿನೇಷನ್‌ ವೇಗ ಶೇ 35 ಕ್ಕೆ ಕುಸಿತ

|
Google Oneindia Kannada News

ನವದೆಹಲಿ, ಮೇ 25: ದೇಶದಲ್ಲಿ ಕೊರೊನಾ ಲಸಿಕೆ ಕೊರತೆ ಮುಂದುವರಿದಿದ್ದು, ದೈನಂದಿನ ವ್ಯಾಕ್ಸಿನೇಷನ್ ವೇಗವು ಮೇ 23 ರಿಂದ ಕುಸಿಯುತ್ತಿದೆ. ಪ್ರತಿ ಮಿಲಿಯನ್ ಜನರಲ್ಲಿ 980 ಮಂದಿಗೆ ಮಾತ್ರ ಪ್ರತಿ ದಿನ ಲಸಿಕೆ ಹಾಕಲಾಗುತ್ತಿದೆ. ಇದರಂತೆ ದೇಶದಲ್ಲಿ ವ್ಯಾಕ್ಸಿನೇಷನ್‌ ಪ್ರಮಾಣ ಶೇ. 35 ಕ್ಕೆ ಕುಸಿತ ಕಂಡಿದೆ. ಒಂದು ವಾರಕ್ಕೂ ಮುನ್ನ ದೇಶದಲ್ಲಿ ಒಂದು ಮಿಲಿಯನ್‌ ಜನರ ಪೈಕಿ 1,455 ಮಂದಿಗೆ ಲಸಿಕೆ ನೀಡಲಾಗುತ್ತಿತ್ತು ಎಂದು ವರದಿ ತಿಳಿಸಿದೆ.

ಮೇ 23 ರಿಂದ ಕೊರೊನಾ ಲಸಿಕೆ ನೀಡಿಕೆ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡು ಬರುತ್ತಿದೆ. ಸತತ ಎರಡು ವಾರಗಳಿಂದ ದೈನಂದಿನ ಕೊರೊನಾ ಲಸಿಕೆ ನೀಡಿಕೆ ಪ್ರಮಾಣ ಕುಸಿತ ಕಾಣುತ್ತಿದೆ. ದೈನಂದಿನ ಹೊಸ ಪ್ರಕರಣಗಳು ಈಗ ಸರಾಸರಿ 2.5 ಲಕ್ಷದಷ್ಟಿದೆ.

ಭಾರತಕ್ಕೆ ಶುಭ ಸುದ್ದಿ: ಭಾರೀ ಇಳಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆಭಾರತಕ್ಕೆ ಶುಭ ಸುದ್ದಿ: ಭಾರೀ ಇಳಿಕೆ ಕಂಡ ಕೊರೊನಾ ಸೋಂಕಿತರ ಸಂಖ್ಯೆ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಇಳಿಕೆ ಕಾಣುತ್ತಿದ್ದು, ಕಳೆದ 24 ಗಂಟೆಯಲ್ಲಿ 1,96,427 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕಳೆದ ವಾರಕ್ಕೆ ಹೋಲಿಸಿದಾಗ ದೇಶದಲ್ಲಿ ಈ ವಾರ ಸೋಂಕು ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಕೊನೆಯ ವಾರದಲ್ಲಿ ಮೇ 16 ರಂದು 3.3 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿತ್ತು.

Covid-19 Vaccination Drive Fall by 35% amid shortage in India

ಆದರೆ ಈ ನಡುವೆ ಲಸಿಕೆ ಲಭ್ಯತೆಯ ಕೊರತೆಯು ದೇಶದಲ್ಲಿ ಕಾಣಿಸಿಕೊಂಡಿದೆ. ವ್ಯಾಕ್ಸಿನೇಷನ್‌ನ ವೇಗವು ತೀವ್ರವಾಗಿ ಕುಸಿಯುತ್ತಿದೆ.

ಇನ್ನು ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯದಲ್ಲಿ ಹೆಚ್ಚಿನ ಜನರಿಗೆ ಲಸಿಕೆ ಹಾಕಲಾಗಿದ್ದರೂ, ಈ ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ವೇಗವು ಮೇ ತಿಂಗಳಲ್ಲಿ ಕಡಿಮೆಯಾಗಿದೆ.

ಅತಿ ಹೆಚ್ಚು ಲಸಿಕೆ ನೀಡಲಾಗಿರುವ ರಾಜ್ಯಗಳ ಪಟ್ಟಿ ಇಲ್ಲಿದೆಅತಿ ಹೆಚ್ಚು ಲಸಿಕೆ ನೀಡಲಾಗಿರುವ ರಾಜ್ಯಗಳ ಪಟ್ಟಿ ಇಲ್ಲಿದೆ

ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಈವರೆಗೆ 19,55,06,779 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ಪೈಕಿ 4,19,95,400 ಮಂದಿ ಎರಡು ಡೋಸ್‌ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇದರನ್ವಯ ದೇಶದಲ್ಲಿ ಶೇ. 3.1 ಮಂದಿಗೆ ಕೊರೊನಾ ಲಸಿಕೆ ಲಭಿಸಿದೆ. 15,35,11,379 ಮಂದಿ ಮೊದಲ ಡೋಸ್‌, 4,19,95,400 ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ.

ದೇಶದಲ್ಲಿ ಈವರೆಗೆ 2,69,48,874 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದುವರೆಗೆ ದೇಶದಲ್ಲಿ 2,40,54,861 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಮವಾರ ಒಂದೇ ದಿನ 3,26,850 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 25,86,782 ಸಕ್ರಿಯ ಕೊರೊನಾ ಪ್ರಕರಣಗಳಿವೆ.

(ಒನ್ಇಂಡಿಯಾ ಸುದ್ದಿ)

English summary
Covid Vaccinations in India fall by 35% amid shortage. New Covid cases also Falling down in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X