ಅಗತ್ಯ ವಸ್ತು ಮನೆಗೆ ತಲುಪಿಸುವವರಿಗೆ ಕೋವಿಡ್ - 19 ಪರೀಕ್ಷೆ

ನವದೆಹಲಿ, ಏಪ್ರಿಲ್ 17 : ಅಗತ್ಯ ವಸ್ತುಗಳನ್ನು ಮನೆ-ಮನೆಗೆ ಪೂರೈಕೆ ಮಾಡುತ್ತಿರುವರಿಗೆ ಕೋವಿಡ್ - 19 ಪರೀಕ್ಷೆ ಮಾಡಲು ದೆಹಲಿ ಸರ್ಕಾರ ತಿರ್ಮಾನಿಸಿದೆ. ದೆಹಲಿಯಲ್ಲಿ ಇದುವರೆಗೂ 1640 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ.

ದಕ್ಷಿಣ ದೆಹಲಿಯಲ್ಲಿ ಫಿಜ್ಜಾ ಡೆಲಿವರಿ ಮಾಡುವ ಹುಡುಗನಿಗೆ ಕೊರೊನಾ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿತ್ತು. ಆದ್ದರಿಂದ ದೆಹಲಿ ಸರ್ಕಾರ ಎಲ್ಲರಿಗೂ ಪರೀಕ್ಷೆ ನಡೆಸಲು ಮುಂದಾಗಿದೆ.

ಆಹಾರ, ಹಾಲು ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಎಲ್ಲರಿಗೂ ಕೋವಿಡ್ -19 ಪರೀಕ್ಷೆ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರ ಕೋವಿಡ್ - 19 ಪರೀಕ್ಷೆ ಮಾಡುವ ಕಿಟ್ ಪಡೆದ ತಕ್ಷಣ ಪರೀಕ್ಷೆಯನ್ನು ಮಾಡಲಾಗುತ್ತದೆ.

COVID 19 Test For Those Delivering Essential Services In Delhi

ಫಿಜ್ಜಾ ಡೆಲವರಿ ಮಾಡುವ 19 ವರ್ಷದ ಹುಡುಗನಿಗೆ ಕೊರೊನಾ ಸೋಂಕು ತಗುಲಿರುವುದು ಗುರುವಾರ ಪತ್ತೆಯಾಗಿತ್ತು. ಇದರಿಂದಾಗಿ 72 ಕುಟುಂಬಗಳಿಗೆ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿತ್ತು. ಇದರಿಂದಾಗಿ ಮನೆಗಳಿಗೆ ಭೇಟಿ ನೀಡುವ ಅಗತ್ಯ ವಸ್ತು ಸರಬರಾಬು ಮಾಡುವವರಿಗೆ ಪರೀಕ್ಷೆ ನಡೆಸಲಾಗುತ್ತಿದೆ.

ಮಾರ್ಚ್ ಕೊನೆಯ ವಾರದಲ್ಲಿ ಫಿಜ್ಜಾ ಡೆಲಿವರಿ ಬಾಯ್ ಆನಾರೋಗ್ಯದ ಕಾರಣದಿಂದಾಗಿ ರಜೆ ಹಾಕಿದ್ದ. ಬಳಿಕ ಮತ್ತೆ ಕೆಲಸ ಆರಂಭಿಸಿದ್ದ. ಹಲವು ಬಡಾವಣೆಗಳಿಗೆ ಝೆಮ್ಯಾಟೋ ಅಪ್ಲಿಕೇಶನ್ ಮೂಲಕ ಆಹಾರ ಪೂರೈಕೆ ಮಾಡಿದ್ದ. ಬಳಿಕ ಆಸ್ಪತ್ರೆಗೆ ದಾಖಲಾದಾಗ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು.

ಫಿಜ್ಜಾ ಡೆಲಿವರಿ ಹುಡುಗನ ಜೊತೆ ಸಂಪರ್ಕದಲ್ಲಿದ್ದ 17 ಜನರಿಗೆ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿದೆ ಎಂದು ದಕ್ಷಿಣ ದೆಹಲಿಯ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+