ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಎಫೆಕ್ಟ್: ವಿಮಾನ ಏರಿದವರಿಗೆ 14 ದಿನ ಗೃಹ ದಿಗ್ಬಂಧನ!

|
Google Oneindia Kannada News

ನವದೆಹಲಿ, ಮಾರ್ಚ್.10: ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವುದನ್ನೇ ಬಿಟ್ಟಿದ್ದಾರೆ. ಇದರ ಮಧ್ಯೆ ಕಳೆದ ಎರಡು ತಿಂಗಳಿನಲ್ಲಿ ವಿದೇಶಕ್ಕೆ ಪ್ರಯಾಣಿಸಿದ ಜನರಿಗೂ ಇದೀಗ ಸಂಕಷ್ಟ ಎದುರಾಗಿದೆ.

ಕೊರೊನಾ ಸೋಂಕಿತ ರಾಷ್ಟ್ರಗಳಿಗೆ ಪ್ರಯಾಣಿಸಿದ ಭಾರತೀಯರು 14 ದಿನ ಗೃಹ ಬಂಧನದಲ್ಲಿ ಇರುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ. ಈ ಹಿನ್ನೆಲೆಯಲ್ಲಿ ವಿದೇಶ ಪ್ರವಾಸ ಕೈಗೊಂಡ ಎಲ್ಲ ಪ್ರಯಾಣಿಕರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.

ಕೊರೊನಾ ವೈರಸ್ ಗೆ ಆಲ್ಕೋಹಾಲ್ ಮದ್ದು: ವದಂತಿಗೆ 27 ಮಂದಿ ಬಲಿ!ಕೊರೊನಾ ವೈರಸ್ ಗೆ ಆಲ್ಕೋಹಾಲ್ ಮದ್ದು: ವದಂತಿಗೆ 27 ಮಂದಿ ಬಲಿ!

ಚೀನಾ ಸೇರಿದಂತೆ ಸೋಂಕಿತ ರಾಷ್ಟ್ರಗಳಿಗೆ ತೆರಳಿ ವಾಪಸ್ ಆದ ಭಾರತೀಯರನ್ನು ಗುರುತಿಸಿ ಗೃಹ ದಿಗ್ಬಂಧನದಲ್ಲಿ ಇರಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಆರೋಗ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಈ ದೇಶಕ್ಕೆ ತೆರಳಿದ ಭಾರತೀಯರಿಗೆ ಗೃಹ ದಿಗ್ಬಂಧನ

ಈ ದೇಶಕ್ಕೆ ತೆರಳಿದ ಭಾರತೀಯರಿಗೆ ಗೃಹ ದಿಗ್ಬಂಧನ

ಚೀನಾ, ಹಾಂಗ್ ಕಾಂಗ್, ರಿಪಬ್ಲಿಕ್ ಆಫ್ ಕೊರಿಯಾ, ಜಪಾನ್, ಇಟಲಿ, ಥೈಲ್ಯಾಂಡ್, ಸಿಂಗಾಪುರ್, ಮಲೇಶಿಯಾ, ಫ್ರಾನ್ಸ್, ಸ್ಪೇನ್, ಮತ್ತು ಜರ್ಮನಿ ರಾಷ್ಟ್ರಗಳಿಗೆ ಭೇಟಿ ನೀಡಿದ ಭಾರತೀಯರನ್ನು ಗುರುತಿಸಿ 14 ದಿನಗಳ ಕಾಲ ಗೃಹ ದಿಗ್ಬಂಧನದಲ್ಲಿ ಇರಿಸಲು ತೀರ್ಮಾನಿಸಲಾಗಿದೆ.

ಈ ರಾಷ್ಟ್ರಗಳ ಪ್ರಜೆಗಳಿಗೆ ನೀಡಿದ ವೀಸಾ ರದ್ದುಗೊಳಿಸಿದ ಸರ್ಕಾರ

ಈ ರಾಷ್ಟ್ರಗಳ ಪ್ರಜೆಗಳಿಗೆ ನೀಡಿದ ವೀಸಾ ರದ್ದುಗೊಳಿಸಿದ ಸರ್ಕಾರ

ಕೊರೊನಾ ವೈರಸ್ ಸೋಂಕಿತ ರಾಷ್ಟ್ರಗಳ ಪ್ರಜೆಗಳಿಗೆ ಭಾರತದ ವೀಸಾವನ್ನು ತತ್ ಕ್ಷಣದಿಂದ ಜಾರಿಗೊಳ್ಳುವಂತೆ ರದ್ದುಗೊಳಿಸಲಾಗಿದೆ. ಫ್ರಾನ್ಸ್, ಜರ್ಮನಿ, ಸ್ಪೇನ್, ಇಟಲಿ, ಇರಾನ್, ರಿಪಬ್ಲಿಕ್ ಆಫ್ ಕೊರಿಯಾ, ಜಪಾನ್ ಮತ್ತು ಚೀನಾ ಪ್ರಜೆಗಳ ವೀಸಾವನ್ನು ರದ್ದುಗೊಳಿಸಲಾಗಿದೆ.

Work-From-Home ಅನುಮತಿ ನೀಡುವಂತೆ ಸೂಚನೆ

Work-From-Home ಅನುಮತಿ ನೀಡುವಂತೆ ಸೂಚನೆ

ಚೀನಾ, ಹಾಂಗ್ ಕಾಂಗ್, ರಿಪಬ್ಲಿಕ್ ಆಫ್ ಕೊರಿಯಾ, ಜಪಾನ್, ಇಟಲಿ, ಥೈಲ್ಯಾಂಡ್, ಸಿಂಗಾಪುರ್, ಮಲೇಶಿಯಾ, ಫ್ರಾನ್ಸ್, ಸ್ಪೇನ್, ಮತ್ತು ಜರ್ಮನಿ ದೇಶಗಳಿಂದ ಆಗಮಿಸಿದ ಭಾರತೀಯರನ್ನು 14 ದಿನಗಳ ಕಾಲ ಗೃಹ ದಿಗ್ಬಂಧನದಲ್ಲಿ ಇರಿಸಬೇಕು. ಈ ವೇಳೆ ಮನೆಯಿಂದಲೇ ಕೆಲಸ ನಿರ್ವಹಿಸಲು ಕಂಪನಿಗಳು ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರವು ಸೂಚನೆ ನೀಡಿದೆ.

ಭಾರತದಲ್ಲಿ ವಿದೇಶಿಗರಿಗೆ ಪ್ರವೇಶ ನಿರ್ಬಂಧ

ಭಾರತದಲ್ಲಿ ವಿದೇಶಿಗರಿಗೆ ಪ್ರವೇಶ ನಿರ್ಬಂಧ

ಮಾರ್ಚ್.11, 2020ಕ್ಕಿಂತ ಮೊದಲು ಅರ್ಜಿ ಸಲ್ಲಿಸಿದ ಫ್ರಾನ್ಸ್, ಜರ್ಮನಿ, ಸ್ಪೇನ್ ಪ್ರಜೆಗಳಿಗೆ ಈ-ವೀಸಾಗಳನ್ನು ವಿತರಿಸಲಾಗಿತ್ತು. ಅಂಥ ವಿದೇಶಿಗರಿಗೂ ಕೂಡಾ ಭಾರತಕ್ಕೆ ಪ್ರವೇಶ ರದ್ದುಗೊಳಿಸಲಾಗಿದೆ. ಇನ್ನು, ಫೆಬ್ರವರಿ.01ರ ಬಳಿಕ ಕೊರೊನಾ ವೈರಸ್ ಸೋಂಕಿತ ದೇಶಗಳಿಗೆ ಪ್ರಯಾಣಿಸಿದ ಭಾರತೀಯರಿಗೂ ಕೂಡಾ ದೇಶಕ್ಕೆ ಮರಳಿ ಬಾರದಂತೆ ನಿರ್ಬಂಧ ವಿಧಿಸಲಾಗಿದೆ.

ವೀಸಾ ಅವಧಿ ವಿಸ್ತರಣೆಗೆ ಅವಕಾಶ ನೀಡಿದ ಸರ್ಕಾರ

ವೀಸಾ ಅವಧಿ ವಿಸ್ತರಣೆಗೆ ಅವಕಾಶ ನೀಡಿದ ಸರ್ಕಾರ

ಭಾರತದಲ್ಲಿ ವಾಸವಿರುವ ವಿದೇಶಿಗರು ವಿದೇಶಕ್ಕೆ ಪ್ರಯಾಣಿಸಿದರೆ ಮತ್ತೆ ವಾಪಸ್ ಬರುವಂತಿಲ್ಲ. ಆದರೆ, ಈಗಾಗಲೇ ಭಾರತ ವೀಸಾ ಪಡೆದು ಇಲ್ಲಿಯೇ ವಾಸವಿರುವ ವಿದೇಶಿಗರ ವೀಸಾ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಅವಕಾಶ ಕಲ್ಪಿಸಿದೆ.

English summary
CoronaVirus Effect: Passangers Should Undergo 14-Day Self Imposed Quarantine, Who Travelled Infected Countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X