ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ 15 ದಿನಗಳಲ್ಲಿ ದೇಶದ ರೆಡ್‌ಜೋನ್‌ಗಳ ಸಂಖ್ಯೆ ಇಳಿಕೆ

|
Google Oneindia Kannada News

ನವ ದೆಹಲಿ, ಮೇ 1: ಕೊರೊನಾ ವೈರಸ್ ಸೋಂಕಿನ ಪ್ರಮಾಣವನ್ನು ಗಮನಿಸಿ ಜಿಲ್ಲೆಗಳನ್ನು ರೆಡ್‌ ಝೋನ್, ಆರೆಂಜ್ ಝೋನ್ ಹಾಗೂ ಗ್ರೀನ್‌ ಝೋನ್‌ ಎಂದು ವಿಭಾಗ ಮಾಡಲಾಗಿದೆ. ಲಾಕ್‌ಡೌನ್ ಸಡಿಲಿಕೆ ಸೇರಿದಂತೆ, ಕೆಲವು ನಿಯಮಗಳು ಆಯಾ ವಲಯಕ್ಕೆ ತಕ್ಕ ಹಾಗೆ ಬದಲಾಗುತ್ತವೆ.

ರೆಡ್‌ ಝೋನ್‌ನಲ್ಲಿ ಅಲ್ಲಿನ ಜಿಲ್ಲಾಡಳಿತ ಹೆಚ್ಚಿನ ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಣಾಮ ದೇಶದಲ್ಲಿ ರೆಡ್‌ ಝೋನ್‌ಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಕಳೆದ 15 ದಿನಗಳಲ್ಲಿ ರೆಡ್ ಝೋನ್‌ ಪ್ರದೇಶಗಳು ಶೇ.23ರಷ್ಟು ಇಳಿಕೆ ಕಂಡಿವೆ. 15 ದಿನಗಳ ಹಿಂದೆ ‌170 ಜಿಲ್ಲೆಗಳು ಕೆಂಪು ವಲಯದಲ್ಲಿ ಇದ್ದು, ಅದು 130 ಜಿಲ್ಲೆಗಳಿಗೆ ಇಳಿಕೆಯಾಗಿದೆ.

ಕೊರೊನಾ ನಿರ್ವಹಣೆ ಸಮೀಕ್ಷೆ: ಪ್ರಧಾನಿ ಮೋದಿ ಜನಪ್ರಿಯತೆ ಆಕಾಶಕ್ಕೋ, ಪಾತಾಳಕ್ಕೋ? ಕೊರೊನಾ ನಿರ್ವಹಣೆ ಸಮೀಕ್ಷೆ: ಪ್ರಧಾನಿ ಮೋದಿ ಜನಪ್ರಿಯತೆ ಆಕಾಶಕ್ಕೋ, ಪಾತಾಳಕ್ಕೋ?

ಸದ್ಯ, ಒಂದು ಜಿಲ್ಲೆಯಲ್ಲಿ ಸತತ 28 ದಿನಗಳ ಕಾಲ ಒಂದೂ ಕೊರೊನಾ ಕೇಸ್ ಪತ್ತೆ ಆಗದೆ ಇದ್ದರೆ, ಅಂತಹ ಜಿಲ್ಲೆಯನ್ನು ಹಸಿರು ವಲಯ ಎಂದು ಪರಿಗಣಿಸಲಾಗುತ್ತದೆ. ಆದರೆ, ಅದರ ಬದಲಾಗಿ ಈ ನಿಯಮವನ್ನು 21 ದಿನಗಳ ಇಳಿಕೆ ಮಾಡಲು ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಆರೆಂಜ್ ಝೋನ್‌ಗಳ ಸಂಖ್ಯೆ ಹೆಚ್ಚು

ಆರೆಂಜ್ ಝೋನ್‌ಗಳ ಸಂಖ್ಯೆ ಹೆಚ್ಚು

ಆರೆಂಜ್ ಝೋನ್‌ಗಳ ಸಂಖ್ಯೆ 207 ಜಿಲ್ಲೆಗಳಿಂದ 284ಕ್ಕೆ ಏರಿಕೆ ಕಂಡಿದೆ. ಗ್ರೀನ್‌ ಜೋನ್‌ ಗಳ ಸಂಖ್ಯೆ 356 ರಿಂದ 319ಕ್ಕೆ ಇಳಿಕೆಯಾಗಿದೆ. ರೆಡ್‌ನಲ್ಲಿ ಇದ್ದ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದು, ಅವು ಆರೆಂಜ್‌ ಝೋನ್‌ಗೆ ಬಂದಿವೆ. ಅದೇ ರೀತಿ ಹಸಿರು ವಲಯದಲ್ಲಿ ಇದ್ದ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಕೇಸ್‌ ಹೆಚ್ಚಾಗಿದ್ದು, ಅವೂ ಆರೆಂಜ್‌ ಝೋನ್‌ಗೆ ಪ್ರದೇಶಿಸಿವೆ.

ಅಸ್ಸಾಂನಲ್ಲಿ ಅತಿ ಹೆಚ್ಚು ಹಸಿರು ವಲಯ

ಅಸ್ಸಾಂನಲ್ಲಿ ಅತಿ ಹೆಚ್ಚು ಹಸಿರು ವಲಯ

ದೇಶದಲ್ಲಿ ಅಸ್ಸಾಂ ರಾಜ್ಯದಲ್ಲಿ ಅತಿ ಹೆಚ್ಚು ಗ್ರೀನ್‌ ಜೋನ್‌ಗಳು ಇವೆ. ಅಸ್ಸಾಂನಲ್ಲಿ ಒಟ್ಟು 33 ಜಿಲ್ಲೆಗಳು ಇದ್ದು, ಇದರ ಪೈಕಿ 30 ಹಸಿರು ವಲಯದ ಪ್ರದೇಶಗಳಿವೆ. ನಿನ್ನೆ ಅಸ್ಸಾಂನಲ್ಲಿ 4 ಹೊಸ ಕೇಸ್‌ಗಳು ಬಂದಿವೆ. ಅಸ್ಸಾಂನಲ್ಲಿ ಒಟ್ಟು 42 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. ಇದರಲ್ಲಿ 29 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. 12 ಜನರಿಗೆ ಚಿಕಿತ್ಸೆ ನಡೆಯುತ್ತಿದೆ. ಒಬ್ಬ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿಂದು 11 ಕೇಸ್ ಪತ್ತೆ, ಒಟ್ಟು ಸೋಂಕಿತರ ಸಂಖ್ಯೆ 576ರಾಜ್ಯದಲ್ಲಿಂದು 11 ಕೇಸ್ ಪತ್ತೆ, ಒಟ್ಟು ಸೋಂಕಿತರ ಸಂಖ್ಯೆ 576

ರೆಡ್‌ ಝೋನ್‌ನಲ್ಲಿ 7 ಮೆಟ್ರೋ ನಗರಗಳು

ರೆಡ್‌ ಝೋನ್‌ನಲ್ಲಿ 7 ಮೆಟ್ರೋ ನಗರಗಳು

ದೇಶದ 7 ಮೆಟ್ರೋ ನಗರಗಳು ಕೆಂಪು ವಲಯದಲ್ಲಿವೆ. ಈ ಪೈಕಿ ದೆಹಲಿ ಹಾಗೂ ಮುಂಬೈನಲ್ಲಿ ಅತಿ ಹೆಚ್ಚು ಕೊರೊನಾ ಕೇಸ್‌ಗಳು ದಾಖಲಾಗಿವೆ. ದೆಹಲಿ ಹಾಗೂ ಮುಂಬೈ ಎರಡು ನಗರಗಳಲ್ಲಿ ಒಟ್ಟು 10 ಸಾವಿರಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. ದೆಹಲಿಯಲ್ಲಿ 11 ಕೆಂಪು ವಲಯಗಳಿದ್ದು, ಇಡೀ ದಿಲ್ಲಿಯನ್ನೇ ರೆಡ್‌ ಝೋನ್ ಎಂದು ಮಾಡಲಾಗಿದೆ.

ಯಾವ ಯಾವ ರಾಜ್ಯಗಳಲ್ಲಿ ರೆಡ್‌ಝೋನ್?

ಯಾವ ಯಾವ ರಾಜ್ಯಗಳಲ್ಲಿ ರೆಡ್‌ಝೋನ್?

ಕರ್ನಾಟಕದಲ್ಲಿ 3 ರೆಡ್‌ಜೋನ್‌ ಇವೆ. ಅದೇ ರೀತಿ ಮಹಾರಾಷ್ಟ್ರದಲ್ಲಿ 14 ರೆಡ್‌ ಜೋನ್‌, ತಮಿಳುನಾಡು 12 ರೆಡ್‌ ಜೋನ್‌, ಉತ್ತರ ಪ್ರದೇಶದಲ್ಲಿ 19 ರೆಡ್‌ಜೋನ್, ಪಶ್ಚಿಮ ಬಂಗಾಳ 10 ರೆಡ್‌ ಜೋನ್‌, ಗುಜರಾತ್‌ 9 ರೆಡ್‌ ಜೋನ್‌, ತೆಲಂಗಾಣ 6 ರೆಡ್‌ ಜೋನ್‌ ಹಾಗೂ ರಾಜಸ್ಥಾನ 8 ರೆಡ್‌ ಜೋನ್‌ಗಳು ಇವೆ. ಭಾರತದಲ್ಲಿ 35,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಈವರೆಗೆ ಪತ್ತೆಯಾಗಿವೆ.

English summary
Coronavirus red zones decreasing 23% in india from last 15 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X