ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ವೈರಸ್ ತಪಾಸಣೆಗೆಷ್ಟು ಹಣ?

|
Google Oneindia Kannada News

ನವದೆಹಲಿ, ಮಾರ್ಚ್.22: ಭಾರತದಲ್ಲೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ. ಮಾರಕ ಸೋಂಕಿನಿಂದ ಏಳು ಮಂದಿ ಪ್ರಾಣ ಬಿಟ್ಟಿದ್ದರೆ, ಸೋಂಕಿತರ ಸಂಖ್ಯೆಯು 300ರ ಗಡಿ ದಾಟಿದೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ 338 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

ಕೇಂದ್ರ ಸರ್ಕಾರ ಅಧೀನದಲ್ಲಿ ಇರುವ ನ್ಯಾಷನಲ್ ಅಕ್ರಿಡಿಯೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿಬ್ರೇಷನ್ ಲ್ಯಾಬೋರೇಟರಿಗಳಿಗೆ ಕೊರೊನಾ ವೈರಸ್ ಸೋಂಕಿತರ ವೈದ್ಯಕೀಯ ತಪಾಸಣೆ ಮಾಡುವುದಕ್ಕೆ ಅನುಮತಿ ನೀಡಿದೆ.

ಭಾರತದಲ್ಲಿ ಕೊರೊನಾ ವೈರಸ್ ವೈದ್ಯಕೀಯ ತಪಾಸಣೆಗೆ 111 ಲ್ಯಾಬ್ಭಾರತದಲ್ಲಿ ಕೊರೊನಾ ವೈರಸ್ ವೈದ್ಯಕೀಯ ತಪಾಸಣೆಗೆ 111 ಲ್ಯಾಬ್

ಕೊರೊನಾ ವೈರಸ್ ಸೋಂಕಿತರ ರಕ್ತದ ಮಾದರಿ ಮತ್ತು ಗಂಟಲು ದ್ರವ್ಯವನ್ನು ಲ್ಯಾಬೋರೇಟರಿಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಕೇಂದ್ರ ಸರ್ಕಾರವು ಈಗಾಗಲೇ 111 ಲ್ಯಾಬೋರೇಟರಿ ತೆರೆದಿದ್ದು, ಇದರ ನಡುವೆ ಖಾಸಗಿ ಲ್ಯಾಬ್ ಗಳಲ್ಲಿಯೂ ತಪಾಸಣೆಗೆ ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರವು ಅಂಥ ಲ್ಯಾಬ್ ಗಳಿಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ.

Coronavirus: Indian Government Guidlines For Private Labs

ಖಾಸಗಿ ಲ್ಯಾಬೋರೇಟರಿಗಳಿಗೆ ಸರ್ಕಾರದ ಮಾರ್ಗಸೂಚಿ:

- ರಾಷ್ಟ್ರೀಯ ಟಾಸ್ಕ್ ಫೋರ್ಸ್ ಶಿಫಾರಸ್ಸಿನಂತೆ ಗರಿಷ್ಠ 4,500 ರೂಪಾಯಿಗಿಂತ ಹೆಚ್ಚು ಹಣವನ್ನು ತೆಗೆದುಕೊಳ್ಳುವಂತಿಲ್ಲ. ಇದರಲ್ಲಿ ಥರ್ಮಲ್ ಸ್ಕ್ರೀನಿಂಗ್ ಗೆ 1,500 ರೂಪಾಯಿ ಮತ್ತು ಇತರೆ ತಪಾಸಣೆಗೆ 3,000 ರೂಪಾಯಿ ಎಂದು ದರ ನಿಗದಿ ಮಾಡಲಾಗಿದೆ.

- ಕೊರೊನಾ ವೈರಸ್ ಶಂಕಿಸ ಸೋಂಕಿತರ ರಕ್ತ ಮತ್ತು ಗಂಟಲು ದ್ರವ್ಯದ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ಲ್ಯಾಬ್ ಗಳಲ್ಲಿಯೂ ಕೂಡಾ ಜೈವಿಕ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು.

- ಮನೆಗಳಿಗೆ ತೆರಳಿ ಸೋಂಕಿತರ ತಪಾಸಣೆ ಮತ್ತು ಮಾದರಿಯನ್ನು ಸಂಗ್ರಹಿಸುವಲ್ಲಿ ಖಾಸಗಿ ಲ್ಯಾಬ್ ಗಳು ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಸೋಂಕಿತರ ನಡುವಿನ ಸಂಪರ್ಕವು ಕಡಿಮೆಯಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

- ಪಾಲಿಮರ್ಸ್ ಚೈನ್ ರಿಯಾಕ್ಷನ್ ಆಧಾರದಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಮನೆಗಳಲ್ಲಿಯೇ ವೈದ್ಯಕೀಯ ತಪಾಸಣೆಗೆಲ ಒಳಪಡಿಸಲು ಅವಕಾಶ ನೀಡಲಾಗಿದೆ.

- ಖಾಸಗಿ ಲ್ಯಾಬ್ ಗಳಲ್ಲಿ ತಪಾಸಣೆಗೆ ಒಳಪಡಿಸಿದ ನಂತರ ಪಾಲಿಟಿವ್ ಫಲಿತಾಂಶ ಬಂದಲ್ಲಿ ಅಂಥ ವ್ಯಕ್ತಿಗಳ ರಕ್ತ ಮತ್ತು ಗಂಟಲು ದ್ರವ್ಯದ ಮಾದರಿ ಜೊತೆಗೆ ಖಾಸಗಿ ಲ್ಯಾಬ್ ಗಳು ತಯಾರಿಸಿದ ವರದಿಯನ್ನು ಪುಣೆಯಲ್ಲಿ ಇರುವ ಕೇಂದ್ರ ಸೂಕ್ಷ್ಮ ರೋಗಾಣುಗಳ ತಪಾಸಣಾ ಕೇಂದ್ರಕ್ಕೆ ಕಳುಹಿಸಿ ಕೊಡಬೇಕು.

- ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ಹೆಚ್ಚುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ತುರ್ತಾಗಿ ಸರ್ಕಾರಿ ಲ್ಯಾಬ್ ಗಳನ್ನು ತೆರೆಯುವುದು ಅಸಾಧ್ಯವಾಗುವ ಹಿನ್ನೆಲೆಯಲ್ಲಿ ಸರ್ಕಾರವು ಈ ಕ್ರಮವನ್ನು ತೆಗೆದುಕೊಂಡಿದೆ.

English summary
Coronavirus: Indian Government Guidlines For Private Labs. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X