• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಒದ್ದೊಡಿಸಲು ಪ್ರಧಾನಿ ಮೋದಿ ಮತ್ತೊಂದು ಕರೆ

|

ನವದೆಹಲಿ, ಮಾರ್ಚ್ 22: ಕೊರೊನಾ ವೈರಸ್ ಸೋಂಕು ಒದ್ದು ಓಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಇದಕ್ಕೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ಸೋಂಕು ಹರಡದಂತೆ ತಡೆಯಲು ಮತ್ತೊಂದು ಕರೆ ನೀಡಿರುವ ಮೋದಿ ಅವರು, ಮುಂದಿನ 15 ದಿನಗಳ ಕಾಲ ನಗರವಾಸಿಗಳು ಹಳ್ಳಿಗಳ ಕಡೆಗೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ಮನೆಯಲ್ಲೇ ಇರಿ ಆರೋಗ್ಯವಾಗಿರಿ ಎಂದು ಅವರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

Coronavirus: ಕ್ವಾರಂಟೈನ್ ನಿಯಮ ಮುರಿದ ಮೇರಿ ಕೋಮ್

ಅಲ್ಲದೇ ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ ಬಿ ಎಸ್ ಯಡಿಯೂರಪ್ಪ ಅವರೂ ಕೂಡ ನಗರವಾಸಿಗಳಿಗೆ ಮನವಿ ಮಾಡಿದ್ದು, ಹಳ್ಳಿಗಳಿಗೆ ಹೋಗಲೇಬೇಡಿ ಎಂದು ಮನವಿ ಮಾಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನೂ ರಾಜ್ಯ ಸರ್ಕಾರ ಮುಂದೂಡಿದ್ದು, ಜನತಾ ಕರ್ಫ್ಯೂಗೆ ರಾಜ್ಯದಲ್ಲಿ ಬೆಂಬಲ ವ್ಯಕ್ತವಾಗಿದೆ. ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ.

English summary
Coronavirus Fear: PM Narendra Modi Advise To City People. no visit to villages he request to city people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X