• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿಯಲ್ಲಿ ಹಿಡಿತಕ್ಕೆ ಬಂದ ಕೊರೊನಾ ವೈರಸ್: ಎರಡಂಕಿಗೆ ಇಳಿಯಿತು ಸಾವಿನ ಪ್ರಮಾಣ

|
Google Oneindia Kannada News

ನವದೆಹಲಿ, ಮೇ 30: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್‌ ಸತತ ಎರಡನೇ ದಿನ 24 ಗಂಟೆಗಳಲ್ಲಿ 1000ಕ್ಕಿಂತ ಕಡಿಮೆ ಜನರಿಗೆ ಕೊರೊನಾ ವೈರಸ್ ತಗುಲಿದೆ. ಅಲ್ಲದೆ ಈ ವೈರಸ್‌ಗೆ ಮೃತಪಟ್ಟವರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದ್ದು ಕಳೆದ 24 ಗಂಟೆಗಳ ಅಂತರದಲ್ಲಿ 78 ಜನರು ಈ ವೈರಸ್‌ಗೆ ಬಲಿಯಾಗಿದ್ದಾರೆ. ಇದು 47 ದಿನಗಳ ನಂತರ ದಾಖಲಾದ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ.

ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 946 ಜನರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಈ ಮೂಲಕ ಸತತ ಎರಡನೇ ದಿನ ದೆಹಲಿಯಲ್ಲಿ ಕೊರೊನಾ ವೈರಸ್‌ಗೆ ತುತ್ತಾದವರ ಸಂಖ್ಯೆ 1000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದೆ.

ಕೊವಿಡ್ 19: ಮೇ 30ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ?ಕೊವಿಡ್ 19: ಮೇ 30ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ?

ರಾಷ್ಟ್ರ ರಾಜಧಾನಿ ಕಳೆದ ಕೆಲ ವಾರಗಳಿಂತ ಸತತವಾಗಿ ಕೊರೊನಾ ವೈರಸ್‌ನಲ್ಲಿ ಇಳಿಮುಖವನ್ನು ಕಾಣುತ್ತಿದೆ. ದೆಹಲಿ ಸರ್ಕಾರದ ಆರೋಗ್ಯ ಇಲಾಖೆ ಭಾನುವಾರ ನೀಡಿದ ಮಾಹಿತಿಯ ಪ್ರಕಾರ 24 ಗಂಟೆಗಳ ಅಂತರದಲ್ಲಿ 1,803 ಸೋಂಕಿತರು ಗುಣಮುಖರಾಗಿದ್ದಾರೆ. ಈ ವೇಳೆ ಪಾಸಿಟಿವಿಟಿ ದರ ಕೂಡ 2 ಶೇಕಡಾಗಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದ್ದು 1.25 ಶೇಕಡಾ ದಾಖಲಾಗಿದೆ.

ಸರ್ಕಾರದ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 75,440 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಈ ಮೂಲಕ ಒಟ್ಟಾರೆ ಈವರೆಗೆ 1,92,37,040 ಕೊರೊನಾ ಪರೀಕ್ಷೆಗಳನ್ನು ನಡೆಸಿದಂತಾಗಿದೆ.

ಜೂನ್‌ನಲ್ಲಿ ಎಷ್ಟು ಲಸಿಕೆ ಲಭ್ಯವಾಗಲಿದೆ ಎಂದು ಲೆಕ್ಕ ನೀಡಿದ ಆರೋಗ್ಯ ಸಚಿವಾಲಯಜೂನ್‌ನಲ್ಲಿ ಎಷ್ಟು ಲಸಿಕೆ ಲಭ್ಯವಾಗಲಿದೆ ಎಂದು ಲೆಕ್ಕ ನೀಡಿದ ಆರೋಗ್ಯ ಸಚಿವಾಲಯ

ದೆಹಲಿಯಲ್ಲಿ ಈವರೆಗೆ ಒಟ್ಟು 14,25,592 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು 13,89,341 ಸೋಂಕಿತರು ಚೇತರಿಸಿಕೊಂಡಿದ್ದಾರೆ. 24,151 ಸೋಕಿತರು ಈ ವೈರಸ್‌ಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸದ್ಯ 12,100 ಕೊರೊನಾ ವೈರಸ್ ಪ್ರಕರಣಗಳು ದೆಹಲಿಯಲ್ಲಿ ಸಕ್ರಿಯವಾಗಿದೆ. ಕಳೆದ 24 ಗಂಟೆಗಳಲ್ಲಿ 53,918 ಜನರು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದು ಈವರೆಗೆ ಒಟ್ಟು 53,43,766 ಜನರು ಲಸಿಕೆಯನ್ನು ಹಾಕಿಸಿಕೊಂಡಂತಾಗಿದೆ.

English summary
In Delhi With 946 new positive coronavirus cases in the last 24 hours and death count went below 100 for the first time since April 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X