ಕೊರೊನಾದ 2ನೇ ಅಲೆ ತುಂಬಾ ಅಪಾಯಕಾರಿ: ಅರವಿಂದ್ ಕೇಜ್ರಿವಾಲ್
ನವದೆಹಲಿ, ಏಪ್ರಿಲ್ 13: ದೇಶದಲ್ಲಿ ಶುರುವಾಗಿರುವ ಕೊರೊನಾದ 2ನೇ ಅಲೆ ತುಂಬಾ ಅಪಾಯಕಾರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10-15 ದಿನಗಳ ಅಂಕಿ-ಅಂಶವನ್ನು ಗಮನಿಸಿದರೆ ಶೇ.65ರಷ್ಟು ಕೊರೊನಾ ಸೋಂಕಿತರು 45 ವರ್ಷಕ್ಕೂ ಕೆಳಗಿನವರಾಗಿದ್ದಾರೆ.ಇದನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕಿದೆ.
ಯುವಕರು ಯಾವುದೇ ತುರ್ತು ಸಂದರ್ಭಗಳಿಲ್ಲದೆ ಹೊರಗೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.ಕಳೆದ ವರ್ಷ 60ಕ್ಕೂ ಹೆಚ್ಚು ವಯಸ್ಸಿನವರು ಹಾಗೂ ಯಾವುದಾದರೂ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮಾತ್ರ ಹೆಚ್ಚು ಅಪಾಯ ಎಂದು ಹೇಳಲಾಗಿತ್ತು.

ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ, ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 13,500 ಪ್ರಕರಣಗಳು ಪತ್ತೆಯಾಗಿವೆ, ಕಳೆದ ವರ್ಷ ಈ ಸಮಯದಲ್ಲಿ 8500 ಪ್ರಕರಣಗಳು ಪತ್ತೆಯಾಗುತ್ತಿತ್ತು ಎಂದರು.
ಈ ಬಾರಿ ದೆಹಲಿಯಲ್ಲಿ 6 ಲಕ್ಷ ವಿದ್ಯಾರ್ಥಿಗಳಿ ಸಿಬಿಎಸ್‌ಇ ಪರೀಕ್ಷೆ ಬರೆಯಲಿದ್ದಾರೆ. ಒಂದು ಲಕ್ಷ ಶಿಕ್ಷಕರು ಇದರ ಭಾಗವಾಗಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಸಿಬಿಎಸ್‌ಇ ಪರೀಕ್ಷೆಯನ್ನು ಮುಂದೂಡುವಂತೆ ಸರ್ಕಾರದ ಬಳಿ ಮನವಿ ಮಾಡಿದ್ದಾರೆ.












Click it and Unblock the Notifications