ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಡ್ಸ್ ರೋಗಿಯಿಂದ ಕೊರೊನಾ ಬಿ.1.1.529 ರೂಪಾಂತರ: ವಿಜ್ಞಾನಿಗಳೇ ಗಾಬರಿ

|
Google Oneindia Kannada News

ನವದೆಹಲಿ, ನವೆಂಬರ್ 26: ಕೊರೊನಾವೈರಸ್ ಹೊಸ ಬಿ.1.1.529 ರೂಪಾಂತರವು ಪ್ರಪಂಚದಾದ್ಯಂತ ಜನರನ್ನು ಆತಂಕಕ್ಕೆ ದೂಡಿದೆ. ಮೂರು ದೇಶಗಳಲ್ಲಿ ಇದುವರೆಗೆ ಕೇವಲ 10 ಪ್ರಕರಣಗಳು ವರದಿಯಾಗಿದ್ದರೂ, ಹೊಸ ರೂಪಾಂತರವು 32 ರೂಪಾಂತರಗಳನ್ನು ಹೊಂದಿರುವ ಕೊರೊನಾವೈರಸ್ ಎಂದು ವರದಿಯೊಂದು ಹೇಳುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಸುಲಭವಾಗಿ ಕುಗ್ಗಿಸಬಲ್ಲದು. ಸರಿಯಾದ ಚಿಕಿತ್ಸೆ ಪಡೆಯದ ಏಡ್ಸ್/ಎಚ್‌ಐವಿ ರೋಗಿಯ ದೇಹದಿಂದ ಈ ರೂಪಾಂತರ ಉಂಟಾಗಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಪ್ರಸ್ತುತ ಸರ್ಕಾರಿ ಮೂಲಗಳ ಪ್ರಕಾರ, ಹೊಸ ರೂಪಾಂತರದ ಒಂದೇ ಒಂದು ಪ್ರಕರಣವು ದೇಶದಲ್ಲಿ ಕಂಡುಬಂದಿಲ್ಲ ಎಂಬುದು ಭಾರತಕ್ಕೆ ಸಮಾಧಾನದ ವಿಷಯವಾಗಿದೆ.

ವಿಜ್ಞಾನಿಗಳಲ್ಲಿ ಭಯ ಏಕೆ?: ಹೆಚ್ಚಿನ ಸಂಖ್ಯೆಯ ರೂಪಾಂತರಗಳಿಂದಾಗಿ, ಇದು ಮಾನವ ದೇಹದ ರಕ್ಷಣೆಯನ್ನು ತಡೆಯುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಜೊತೆಗೆ ಕೊರೊನಾದ ಹೆಚ್ಚಿನ ಅಲೆಗಳಿಗೆ ಕಾರಣವಾಗಬಹುದು. ಪ್ರಸ್ತುತ, ಎಲ್ಲಾ ಮೂರು ದೇಶಗಳು ಸೇರಿದಂತೆ ಕೇವಲ 10 ಪ್ರಕರಣಗಳು ವರದಿಯಾಗಿವೆ. ಆದರೆ ಈ ಸುದ್ದಿಯು ಜನರು ಮತ್ತು ತಜ್ಞರಲ್ಲಿ ಭೀತಿಯನ್ನು ಸೃಷ್ಟಿಸಿದೆ. ಈ ರೂಪಾಂತರಗಳು ಕೊರೊನಾ ವೈರಸ್‌ ರಕ್ಷೆಗೆ ಸಹಾಯ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ವಿವರಕ್ಕೆ ಮುಂದೆ ಓದಿ...

32 ರೂಪಾಂತರಗಳೊಂದಿಗೆ B.1.1529

32 ರೂಪಾಂತರಗಳೊಂದಿಗೆ B.1.1529

B.1.1529 ರೂಪಾಂತರಿ 32 ರೂಪಾಂತರಗಳೊಂದಿಗೆ ಹುಟ್ಟಿಕೊಂಡಿದೆ. 30 (32) ಕ್ಕಿಂತ ಹೆಚ್ಚು ರೂಪಾಂತರಗಳೊಂದಿಗೆ ಕೊರೊನಾದ ಹೊಸ ರೂಪಾಂತರದಿಂದಾಗಿ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ವಿಜ್ಞಾನಿಗಳು ಅನೇಕ ರೂಪಾಂತರಗಳ ಸಂಯೋಜನೆಯಿಂದ ಹುಟ್ಟಿಕೊಂಡ ವೈರಸ್ ಅನ್ನು ಹಾಗೆ ತೆಡೆಯಬಹುದು? ಇದು ಪ್ರತಿರಕ್ಷೆಯನ್ನು ಸಹ ವಿಫಲಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಲಂಡನ್‌ನ ಇಂಪೀರಿಯಲ್ ಕಾಲೇಜಿನ ವೈರಾಲಜಿಸ್ಟ್ ಡಾ ಟಾಮ್ ಪೀಕಾಕ್ ಅವರು ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ 'ಇದು ನಿಜಕ್ಕೂ ವಿಸ್ಮಯಕಾರಿಯಾಗಿದೆ. ಹೆಚ್ಚಿನ ಪ್ರಮಾಣದ ರೂಪಾಂತರಗಳು ಸಂಯೋಗದಿಂದ ಹುಟ್ಟಿಕೊಂಡ ವೈರಸ್ ಹೆಚ್ಚು ಅಪಾಯಕಾರಿಯಾಗಿದೆ. ಆದರೆ ಸೋಂಕಿತರ ಸಂಖ್ಯೆಗಳು ತುಂಬಾ ಕಡಿಮೆ ಇದೆ ಎಂದು ನಿರಾಳವಾಗಿರುವಂತಿಲ್ಲ. ಭಯಾನಕ ಸ್ಪೈಕ್ ಪ್ರೊಫೈಲ್ ಬಗ್ಗೆ ನಿಗಾ ಇಡಲು ಸಲಹೆ ನೀಡಿದ್ದಾರೆ.

B. 1.1.529 ಹೊಸ ರೂಪಾಂತರವು ಯಾವ ದೇಶಗಳಲ್ಲಿ ಕಂಡುಬರುತ್ತದೆ?

B. 1.1.529 ಹೊಸ ರೂಪಾಂತರವು ಯಾವ ದೇಶಗಳಲ್ಲಿ ಕಂಡುಬರುತ್ತದೆ?

B.1.1.529 ರ ಮೊದಲ ಪ್ರಕರಣ ನವೆಂಬರ್ 11 ರಂದು ಬೋಟ್ಸ್ವಾನಾದಲ್ಲಿ ವರದಿಯಾಗಿದೆ. ಮೂರು ದಿನಗಳ ನಂತರ, ದಕ್ಷಿಣ ಆಫ್ರಿಕಾದಲ್ಲಿ ಅದೇ ರೂಪಾಂತರವನ್ನು ದೃಢಪಡಿಸಲಾಯಿತು. ಇವುಗಳ ಹೊರತಾಗಿ, ಇಲ್ಲಿಯವರೆಗೆ ಈ ರೂಪಾಂತರವು ಹಾಂಗ್ ಕಾಂಗ್‌ನಲ್ಲಿ 36 ವರ್ಷದ ವ್ಯಕ್ತಿಯಲ್ಲಿ ಮಾತ್ರ ಕಂಡುಬಂದಿದೆ. ಇವರು ದಕ್ಷಿಣ ಆಫ್ರಿಕಾದಲ್ಲಿ ಅಕ್ಟೋಬರ್ 22 ರಿಂದ ನವೆಂಬರ್ 11 ರವರೆಗೆ ಇರುವುದು ಕಂಡು ಬಂದಿದೆ. ನವೆಂಬರ್ 13 ರಂದು, ಅವರ ಮಾದರಿಯಲ್ಲಿ ಹೊಸ ರೂಪಾಂತರ ಪತ್ತೆಯಾಗಿದೆ ಮತ್ತು ಅಂದಿನಿಂದ ಅವರು ಕ್ವಾರಂಟೈನ್‌ನಲ್ಲಿದ್ದಾರೆ.

B.1.1.529 ಏಕೆ ಹೆಚ್ಚು ಸಾಂಕ್ರಾಮಿಕವಾಗಬಹುದು?

B.1.1.529 ಏಕೆ ಹೆಚ್ಚು ಸಾಂಕ್ರಾಮಿಕವಾಗಬಹುದು?

P681H ಕೊರೊನಾ ರೂಪಾಂತರದಲ್ಲಿ ಒಂದಾಗಿದೆ. ಹೊಸ ರೂಪಾಂತರಗಳಲ್ಲಿ ಈ ಹಿಂದೆ ಆಲ್ಫಾ, ಮು ಮತ್ತು b.1.1.318 ವರದಿಯಾಗಿದೆ. ಇವು ಸೋಂಕನ್ನು ಹೆಚ್ಚಿಸುತ್ತವೆ. ಹೊಸ ರೂಪಾಂತರವು N679K ರೂಪಾಂತರವನ್ನು ಸಹ ಹೊಂದಿದೆ. ಜೊತೆಗೆ ಹೆಚ್ಚುವರಿಯಾಗಿ ಹೊಸ ರೂಪಾಂತರವು N501Y ರೂಪಾಂತರವನ್ನು ಹೊಂದಿದೆ. B.1.1.529 ವೈರಸ್ 32 ರೂಪಾಂತರಗಳನ್ನು ಒಳಗೊಂಡಿದ್ದು ರೂಪಾಂತರ ವೈರಸ್ಗಳು ಹೆಚ್ಚು ಸಾಂಕ್ರಾಮಿಕವಾಗಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಇವುಗಳ ಹೊರತಾಗಿ, ಹೊಸ ರೂಪಾಂತರದಲ್ಲಿ ಮ್ಯುಟೇಶನ್ D614G ಸಹ ವರದಿಯಾಗಿದೆ. ಇದು ವೈರಸ್‌ನ ಸೋಂಕನ್ನು ಹೆಚ್ಚಿಸುತ್ತದೆ. ವರದಿಯ ಪ್ರಕಾರ, ಈ ರೂಪಾಂತರದ ಸ್ಪೈಕ್ ಪ್ರೋಟೀನ್‌ನಲ್ಲಿ 32 ರೂಪಾಂತರಗಳು ಇರುತ್ತವೆ ಮತ್ತು ಅದಕ್ಕಾಗಿಯೇ ಇದು ದೇಹದ ಪ್ರತಿರೋಧವನ್ನು ತಟಸ್ಥಗೊಳಿಸುತ್ತದೆ ಎಂದು ಶಂಕಿಸಲಾಗಿದೆ.

ವಿಜ್ಞಾನಿಗಳಲ್ಲಿ ಭಯ ಏಕೆ?

ವಿಜ್ಞಾನಿಗಳಲ್ಲಿ ಭಯ ಏಕೆ?

ಹೆಚ್ಚಿನ ಸಂಖ್ಯೆಯ ರೂಪಾಂತರಗಳಿಂದಾಗಿ, ಇದು ಮಾನವ ದೇಹದ ರಕ್ಷಣೆಯನ್ನು ತಡೆಯುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಜೊತೆಗೆ ಕೊರೊನಾದ ಹೆಚ್ಚಿನ ಅಲೆಗಳಿಗೆ ಕಾರಣವಾಗಬಹುದು. ಪ್ರಸ್ತುತ, ಎಲ್ಲಾ ಮೂರು ದೇಶಗಳು ಸೇರಿದಂತೆ ಕೇವಲ 10 ಪ್ರಕರಣಗಳು ವರದಿಯಾಗಿವೆ. ಆದರೆ ಈ ಸುದ್ದಿಯು ಜನರು ಮತ್ತು ತಜ್ಞರಲ್ಲಿ ಭೀತಿಯನ್ನು ಸೃಷ್ಟಿಸಿದೆ. ಈ ರೂಪಾಂತರಗಳು ಕೊರೊನಾ ವೈರಸ್‌ ರಕ್ಷೆಗೆ ಸಹಾಯ ಮಾಡಬಹುದು ಎಂದು ಹೇಳಲಾಗುತ್ತಿದೆ.

ಏಡ್ಸ್ ರೋಗಿಯಿಂದ ಹೊಸ ರೂಪಾಂತರವನ್ನು ಅಭಿವೃದ್ಧಿಪಡಿಸಲಾಗಿದೆಯೇ?

ಏಡ್ಸ್ ರೋಗಿಯಿಂದ ಹೊಸ ರೂಪಾಂತರವನ್ನು ಅಭಿವೃದ್ಧಿಪಡಿಸಲಾಗಿದೆಯೇ?

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಕಂಪ್ಯೂಟೇಶನಲ್ ಸಿಸ್ಟಮ್ಸ್ ಬಯಾಲಜಿಯ ಪ್ರಾಧ್ಯಾಪಕ ಮತ್ತು ಯುಸಿಎಲ್ ಜೆನೆಟಿಕ್ಸ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಫ್ರಾಂಕೋಯಿಸ್ ಬಲೂಕ್ಸ್, ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳಲ್ಲಿ ದೀರ್ಘಕಾಲದ ಸೋಂಕಿನ ಸಮಯದಲ್ಲಿ ಈ ರೂಪಾಂತರವು ಬೆಳೆಯುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಸೈನ್ಸ್ ಮೀಡಿಯಾ ಸೆಂಟರ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಚಿಕಿತ್ಸೆ ಪಡೆಯದ HIV/AIDS ರೋಗಿಯಲ್ಲಿ ಇದು ಬೆಳೆಯುವ ಸಾಧ್ಯತೆ ಇದೆ ಎಂದು Balloux ಹೇಳಿದ್ದಾರೆ. 'p681H ಮತ್ತು N679K ಎರಡೂ ರೂಪಾಂತರಗಳು ಹೇಗೆ ಸಹಬಾಳ್ವೆ ನಡೆಸುತ್ತವೆ ಎಂಬುದನ್ನು ತಿಳಿಯುವುದು ಕಷ್ಟ. ಇದು ನಾವು ಅಸಾಧಾರಣವಾಗಿ ಮತ್ತು ವಿರಳವಾಗಿ ನೋಡುವ ಸಂಯೋಜನೆಯಾಗಿದೆ.

ಇಲ್ಲಿಯವರೆಗೆ ಕಾಳಜಿಯ ಎಷ್ಟು ರೂಪಾಂತರಗಳಿವೆ?

ಇಲ್ಲಿಯವರೆಗೆ ಕಾಳಜಿಯ ಎಷ್ಟು ರೂಪಾಂತರಗಳಿವೆ?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇಲ್ಲಿಯವರೆಗೆ ಕೊರೊನಾ ವೈರಸ್‌ನ ನಾಲ್ಕು ರೂಪಾಂತರಗಳನ್ನು ಮಾತ್ರ ವಿವರಿಸಲಾಗಿದೆ. ಅವುಗಳೆಂದರೆ - ಆಲ್ಫಾ (b.1.1.7 ಅಥವಾ ಆಪಾದಿತ UK ರೂಪಾಂತರ), ಬೀಟಾ (b.1.351 ಅಥವಾ ಆಪಾದಿತ ದಕ್ಷಿಣ ಆಫ್ರಿಕಾ ರೂಪಾಂತರ), ಗಾಮಾ (P.1 ಅಥವಾ ಆಪಾದಿತ ಬ್ರೆಜಿಲಿಯನ್ ರೂಪಾಂತರ) ಮತ್ತು ಡೆಲ್ಟಾ (b.1.617.2) ರೂಪಾಂತರಗಳಿವೆ.

Recommended Video

ರಾಜ್ಯದಲ್ಲಿ ACB ದಾಳಿ ಬಗ್ಗೆ B S Yediyurappa ಹೇಳಿಕೆ | Oneindia Kannada

English summary
A new variant of the corona virus B.1.1529 has become a matter of concern for people across the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X