ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕೆಳಗಿಳಿಸಲು ಕಾಂಗ್ರೆಸ್ ಗೆ ಪಾಕ್ ನೆರವು: ನಿರ್ಮಲಾ ಸೀತಾರಾಮನ್

|
Google Oneindia Kannada News

ನವದೆಹಲಿ, ಜನವರಿ 13: ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಪಾಕಿಸ್ತಾನದ ನೆರವು ಬೇಡುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ರಾಜಸ್ಥಾನಿ ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ನ್ಯಾಶ್ನಲ್ ಕನ್ವೆನ್ಷನ್ ನಲ್ಲಿ ಶನಿವಾರ ಅವರು ಮಾತನಾಡುತ್ತಿದ್ದರು. "ಇಡೀ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಜೊತೆ ಭಾರತ ಉತ್ತಮ ಬಾಂಧವ್ಯ ಹೊಂದುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಇದನ್ನು ಪಾಕಿಸ್ತಾನಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳಿದರು.

ನಾನು ಯಾರು ಹೇಳಿ? ಸಚಿವೆ ನಿರ್ಮಲಾಗೆ ರಮ್ಯಾ ಕುಹಕದ ಟ್ವೀಟ್ನಾನು ಯಾರು ಹೇಳಿ? ಸಚಿವೆ ನಿರ್ಮಲಾಗೆ ರಮ್ಯಾ ಕುಹಕದ ಟ್ವೀಟ್

"ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ನಮ್ಮ ರಕ್ಷಣಾ ದಳ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಅದಕ್ಕಾಗಿ ಅಭಿನಂದನೆ ಸಲ್ಲಿಸುವ ಬದಲು ಕಾಂಗ್ರೆಸ್ ಸಾಕ್ಷ್ಯ ಕೇಳುತ್ತಿದೆ" ಎಂದು ಕಾಂಗ್ರೆಸ್ ಅನ್ನು ಟೀಕಿಸಿದರು.

Congress seeking help from Pakistan to remove Narendra Modi as PM: Nirmala Sitharaman

ಎಚ್ ಎಎಲ್ ಬಗ್ಗೆ ಸರಕಾರದ ಮೇಲಿನ ಸಂಶಯವು ದಾರಿ ತಪ್ಪಿಸುವಂಥದ್ದು, ಸಂಸತ್ ನಲ್ಲಿ ರಕ್ಷಣಾ ಸಚಿವೆಎಚ್ ಎಎಲ್ ಬಗ್ಗೆ ಸರಕಾರದ ಮೇಲಿನ ಸಂಶಯವು ದಾರಿ ತಪ್ಪಿಸುವಂಥದ್ದು, ಸಂಸತ್ ನಲ್ಲಿ ರಕ್ಷಣಾ ಸಚಿವೆ

"ನಾವು ಸಾಕ್ಷ್ಯವನ್ನು ತೋರಿಸಿದೆವು. ಆದರೆ ಇದೇ ಕಾಂಗ್ರೆಸ್ ನಂತರ ಪಾಕಿಸ್ತಾನಕ್ಕೆ ತೆರಳಿ ನಮ್ಮ ಪ್ರಧಾನಿಯವರನ್ನು ಕೆಳಗಿಳಿಸಲು ಆ ದೇಶದ ನೆರವು ಕೇಳುತ್ತಿದೆ! ಇದು ಕಾಂಗ್ರೆಸ್ ನ ಕೊಳಕು ರಾಜಕೀಯ" ಎಂದು ಅವರು ಖಾರವಾಗಿ ಹೇಳಿಕೆ ನೀಡಿದರು.

ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?'ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?'

"ಪ್ರಧಾನಿ ಮೋದಿಯವರು ನೀಡಿದ ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಉಗ್ರ ಚಟುವಟಿಕೆಗಳ ಮೇಲೆ ಬಿಗಿಯಾದ ನಿಯಂತ್ರಣದ ಬಗ್ಗೆ ಜನರಿಗೆ ತಿಳಿಸಬೇಕು. ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ, ಮತಕೇಳಿ" ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಸೀತಾರಾಮನ್ ಕರೆ ಕೊಟ್ಟರು."

English summary
Union Defence Minister Nirmala Sitharaman has accused the Congress party of seeking help from Pakistan to remove Narendra Modi as the Prime Minister even as the hostile neighbouring country stands isolated at the global level due to the NDA government's strong diplomatic moves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X