ನಾಯಕತ್ವ ಬದಲಾವಣೆ ಕುರಿತು ಪ್ರಿಯಾಂಕಾ ಹೇಳಿಕೆ 1 ವರ್ಷ ಹಳೆಯದು
ನವದೆಹಲಿ, ಆಗಸ್ಟ್ 19: ನಾಯಕತ್ವ ಬದಲಾವಣೆ ಕುರಿತಂತೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆಯನ್ನು ದುರುಪಯೋಗಪಡಿಸಿಕೊಂಡು ಮಾಧ್ಯಮಗಳು ಅಪಪ್ರಚಾರ ಮಾಡುತ್ತಿವೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
2019ರ ಜುಲೈ 1 ರಂದು ಕಾಂಗ್ರೆಸ್ ನಾಯಕತ್ವದಲ್ಲಿನ ಬದಲಾವಣೆ ಹಾಗೂ ಗಾಂಧಿ ಕುಟುಂಬದ ಹೊರತಾಗಿ ಬೇರೆಯವರಿಗೆ ಕಾಂಗ್ರೆಸ್ ನಾಯಕತ್ವ ನೀಡುವ ಕುರಿತಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಸಂಬಂಧಿಸಿ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಸರಣಿ ಟ್ವೀಟ್‌ಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆ ಒಂದು ವರ್ಷದ ಹಳೆಯದಾಗಿದ್ದು, ಈಗ ಈ ರೀತಿಯ ಯಾವುದೇ ಹೇಳಿಕೆಯನ್ನು ನೀಡಿಲ್ಲ, ಹಿಂದಿನ ಹೇಳಿಕೆಯನ್ನು ಈಗಿನ ಪರಿಸ್ಥಿತಿಗೆ ಹೋಲಿಸುವುದು ಸರಿಯಲ್ಲ, ಒಂದು ವರ್ಷದ ಹಿಂದೆ ನೀಡಿರುವ ಹೇಳಿಕೆಯನ್ನು ಈಗ ಬಿಜೆಪಿಯ ಕುಮ್ಮಕ್ಕಿನ ಮೇರೆಗೆ ಬಳಸಿಕೊಳ್ಳುತ್ತಿವೆ.
2019ರ ಚುನಾವಣೆಯ ಬಳಿಕ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿಸುವ ಧೈರ್ಯವನ್ನು ತೋರಿದ್ದರು. ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ನಾಯಕತ್ವ ಬದಲಾವಣೆ ಕುರಿತಂತೆ ಹೇಳಿಕೆ ನೀಡಿದ್ದರು.
ಈ ಹಿಂದೆ ಗಾಂಧಿ, ನೆಹರು ಕುಟುಂಬವು ಕಾಂಗ್ರೆಸ್ ಹಾಗೂ ದೇಶವನ್ನು ಮುನ್ನಡೆಸುವ ಧೈರ್ಯವನ್ನು ತೋರಿದೆ. ಬಳಿಕ ಸೋನಿಯಾ ಗಾಂಧಿಯು 2004ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. 2019ರಲ್ಲಿ ಅದೇ ರೀತಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾಹುಲ್ ಗಾಂಧಿಯೂ ಚುನಾವಣೆ ನೇತೃತ್ವವನ್ನು ವಹಿಸಿದ್ದರು. ಆದರೆ ಚುನಾವಣೆ ಬಳಿಕ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.












Click it and Unblock the Notifications