Breaking:ಒಂದು ಕುಟುಂಬವನ್ನು ಉಳಿಸಲು ಕಾಂಗ್ರೆಸ್‌ನಿಂದ ಪ್ರತಿಭಟನೆ- ಜೆಪಿ ನಡ್ಡಾ

ನವದೆಹಲಿ, ಜುಲೈ 27: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿಯವರನ್ನು ವಿಚಾರಣೆ ನಡೆಸುತ್ತಿರುವ ಕುರಿತು ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟೀಕಿಸಿದ್ದಾರೆ.

ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಸತ್ಯಾಗ್ರಹವಲ್ಲ. ಅವರ ಪ್ರತಿಭಟನೆ ಒಂದು ಕುಟುಂಬದ ರಕ್ಷಣೆಗಾಗಿ ನಡೆಯುತ್ತಿದೆಯೇ ಹೊರತು ದೇಶದ ರಕ್ಷಣೆಗಲ್ಲ ಎಂದು ಹೇಳಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವದ ಕಾಂಗ್ರೆಸ್ ಬೆಂಬಲಿತ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ನಡೆದ ಆಪಾದಿತ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಸತತ ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ವಿಚಾರಣೆ ಇನ್ನೂ ಪೂರ್ತಿಯಾಗದ ಹಿನ್ನೆಲೆಯಲ್ಲಿ ಬುಧವಾರವೂ ಕೂಡ ವಿಚಾರಣೆಗಾಗಿ ಇಡಿ ಕಚೇರಿಗೆ ಕಾಂಗ್ರೆಸ್ ನಾಯಕಿ ಹಾಜರಾಗಿದ್ದಾರೆ.

Congress protests not Satyagrah, They are protesting to protect a family, not the country- JP Nadda

"ಕಾಂಗ್ರೆಸ್ ಪ್ರತಿಭಟನೆ ಸತ್ಯಾಗ್ರಹವಲ್ಲ, ಸತ್ಯವನ್ನು ಮರೆಮಾಚುವ ಪ್ರಯತ್ನವದು. ಅವರು ಪ್ರತಿಭಟಿಸುತ್ತಿರುವುದು ಒಂದು ಕುಟುಂಬದ ರಕ್ಷಣೆಗಾಗಿಯೇ ಹೊರತು ದೇಶದ ರಕ್ಷಣೆಗಲ್ಲ. ಗಾಂಧಿ ಕುಟುಂಬದವರು ತನಿಖಾ ಸಂಸ್ಥೆಗಳಿಗೆ ಉತ್ತರಿಸಬೇಕಾಗಿತ್ತು, ಆದರೆ, ಅವರು ಕಾನೂನಿಗಿಂತ ದೊಡ್ಡವರು ಎಂದು ಭಾವಿಸುತ್ತಾರೆ" ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುವುದನ್ನು ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಸತ್ಯಾಗ್ರಹ ನಡೆಸಿತು. ಸೇಡಿನ ರಾಜಕೀಯ ಮಾಡಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

Congress protests not Satyagrah, They are protesting to protect a family, not the country- JP Nadda

ಬುಧವಾರ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಮುಂದೆ ಸೋನಿಯಾ ಗಾಂಧಿ ಹಾಜರಾಗುತ್ತಿದ್ದಂತೆ ಕಾಂಗ್ರೆಸ್ ಸಂಸದರು ಸಂಸತ್ತಿನಿಂದ ವಿಜಯ್ ಚೌಕ್‌ಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+