ಕಾವೇರಿ ನಿರ್ವಹಣಾ ಮಂಡಳಿ ವಿರೋಧಿಸಿ ಕಾಂಗ್ರೆಸ್ ಸಂಸದರ ಪ್ರತಿಭಟನೆ

ನವ ದೆಹಲಿ, ಏಪ್ರಿಲ್ 06: ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ಕರ್ನಾಟಕದ ಕಾಂಗ್ರೆಸ್ ಸಂಸದರು ಲೋಕಸಭೆ ಆವರಣದಲ್ಲಿ ಇಂದು (ಏಪ್ರಿಲ್ 06) ಪ್ರತಿಭಟನೆ ಮಾಡಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಸಂಸದ ಡಿ.ಕೆ.ಸುರೇಶ್, ರಾಯಚೂರು ಸಂಸದ ಬಿ.ವಿ.ನಾಯಕ್, ತುಮಕೂರು ಸಂಸದ ಮುದ್ದಹನುಮೇಗೌಡ, ಬಿಎನ್ ಚಂದ್ರಪ್ಪ, ದೃವ ನಾರಾಯರಂಗಸ್ವಾಮಿ ಅವರುಗಳು 'ವಿ ಆಪೋಸ್ ಕಾವೇರಿ ಮ್ಯಾನೇಜ್‌ಮೆಂಟ್ ಬೋರ್ಡ್‌' (ಕಾವೇರಿ ನಿರ್ವಹಣಾ ಮಂಡಳಿಗೆ ನಮ್ಮ ವಿರೋಧವಿದೆ) ಎಂಬ ಫಲಕಗಳನ್ನು ಹಿಡಿದು ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡಿದರು.

ಮತ್ತೊಂದು ಕಡೆ ತಮಿಳುನಾಡಿದ ಸಂಸದರು ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಸತತವಾಗಿ ಪ್ರತಿಭಟನೆ ಮಾಡುತ್ತಲೇ ಇದ್ದಾರೆ.

congress MPs protest aginst Cauvery Management Board

ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠದ ತೀರ್ಪಿನ ಅನ್ವಯ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ಕರ್ನಾಟಕ ರಾಜ್ಯಕ್ಕೆ ಮರಣ ಶಾಸನವಾಗಲಿದೆ ಎಂಬ ಭಯ ಇದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ನಿರ್ಧಾರ ಕೇಂದ್ರದ ಬಳಿ ಇರುವ ಕಾರಣ ತಮಿಳುನಾಡು ಸಂಸದರು ನಿರ್ವಹಣಾ ಮಂಡಳಿ ರಚಿಸುವಂತೆ ಹಾಗೂ ಕರ್ನಾಟಕದ ಸಂಸದರು ನಿರ್ವಹಣಾ ಮಂಡಳಿ ರಚಿಸದಂತೆ ಒತ್ತಾಯ ಹೇರುತ್ತಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಏಪ್ರಿಲ್ 12ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

ಈ ಬಾರಿಯ ಲೋಕಸಭಾ ಅಧಿವೇಶನ ಕೇವಲ ಪ್ರತಿಭಟನೆ, ಜಗಳಗಳಲ್ಲೇ ಮುಗಿದಿದ್ದು ಒಂದೂ ಚರ್ಚೆ ಸರಿಯಾಗಿ ಸಾಧ್ಯವಾಗಿಲ್ಲ. ಆಂಧ್ರಕ್ಕೆ ವಿಶೇಷ ಸ್ಥಾನಮಾನ ಗಲಾಟೆ, ನೀರವ್ ಮೋದಿ, ಕಾವೇರಿ ನಿರ್ವಹಣಾ ಮಂಡಳಿ ಗಲಾಟೆ, ರೈತರ ಸಾಲ ಮನ್ನಾ ವಿಷಯ ಹೀಗೆ ಹತ್ತು ಹಲವು ಗಲಾಟೆಗಳು, ಪ್ರತಿಭಟನೆಗಳು ಕಲಾಪವನ್ನು ನುಂಗಿ ಹಾಕಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+