• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಚ್ಚರಿಯ ಸುದ್ದಿ: ಮೋದಿ ಪರ ನಿಂತ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್!

|
Google Oneindia Kannada News

ನವದೆಹಲಿ, ಆಗಸ್ಟ್ 22: ಅತ್ಯಂತ ಅಚ್ಚರಿ ಎನ್ನಿಸುವಂಥ ಬೆಳವಣಿಗೆಯಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರ ಜೈರಾಮ್ ರಮೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಂತಿದ್ದಾರೆ!

2014 ರಿಂದ 2019 ರವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಎಲ್ಲಾ ಕೆಲಸಗಳನ್ನೂ ತೆಗಳುವುದಕ್ಕೆ ಬರುವುದಿಲ್ಲ. ಹಾಗೊಮ್ಮೆ ಅವರು ಯಾವ ಉತ್ತಮ ಕೆಲಸವನ್ನೂ ಮಾಡಿಲ್ಲ ಎಂದಾಗಿದ್ದರೆ ಮತದಾರರು ಈ ಪ್ರಮಾಣದಲ್ಲಿ ಅವರ ಕೈ ಹಿಡಿಯುತ್ತಿರಲಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಒಂದು ದೇಶ, ಒಂದು ಚುನಾವಣೆ ಸಿದ್ಧಾಂತಕ್ಕೆ ಕಾಂಗ್ರೆಸ್‌ ತೀವ್ರ ವಿರೋಧಒಂದು ದೇಶ, ಒಂದು ಚುನಾವಣೆ ಸಿದ್ಧಾಂತಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ

ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಎಲ್ಲಾ ಬಾರಿಯೂ ಋಣಾತ್ಮಕವಾಗಿಯೇ ನೋಡುವುದಕ್ಕೆ ಬರುವುದಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಮೋದಿಯವರು ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡುತ್ತಾರೆ. ಅದು ಜನರನ್ನು ಅರೊಂದಿಗೆ ಸಂಪರ್ಕಿಸುತ್ತಿದೆ. ಜೊತೆಗೆ ಏನೇ ಮಾಡಿದರೂ ಅದನ್ನು ಗುರುತಿಸುವಂತೆ ಮಾಡುತ್ತಿದ್ದಾರೆ. ಇದನ್ನು ಅರ್ಥಮಾಡೀಕೊಂಡು, ಪ್ರತಿತಂತ್ರ ಹಣಿಯದಿದ್ದರೆ ಮುಂದೆ ಕಷ್ಟವಾಗುತ್ತದೆ ಎಂದು ಕಾಂಗ್ರೆಸ್ ನಾಯರಿಗೆ ಕಿವಿಮಾತು ಹೇಳುವ ಧಾಟಿಯಲ್ಲಿ ಹೇಳಿದ್ದಾರೆ.

"ನಾನೇನು ಯಾರೋ ಮೋದಿಯನ್ನು ಹೊಗಳಬೇಕು ಎಂದು ಹೇಳುತ್ತಿಲ್ಲ. ಆದರೆ ಅವರು ಸರ್ಕಾರದಲ್ಲಿತಂದಿರುವ ಕೆಲವು ಬದಲಾವಣೆಯನ್ನು ಗಮನಿಸಬೇಕು" ಎಮದು ಹೇಳುತ್ತಿದ್ದೇನೆ ಎಂದು ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದರು.

ಬಾಲಕೋಟ್ ದಾಳಿ ನಂತರ ಮೊದಲ ಬಾರಿಗೆ ಪಾಕ್ ವಾಯುಮಾರ್ಗದಲ್ಲಿ ಮೋದಿ ಪ್ರಯಾಣಬಾಲಕೋಟ್ ದಾಳಿ ನಂತರ ಮೊದಲ ಬಾರಿಗೆ ಪಾಕ್ ವಾಯುಮಾರ್ಗದಲ್ಲಿ ಮೋದಿ ಪ್ರಯಾಣ

"ಮೋದಿಯವರು ಮಾಡಿದ್ದೆಲ್ಲವನ್ನೂ ಋಣಾತ್ಮಕವಾಗಿಯೇ ನೋಡುವ ಅಗತ್ಯವಿಲ್ಲ. ಅವರ ಆಡಳಿತ ಸಂಪೂರ್ಣ ವಿಭಿನ್ನ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನೇ ನೋಡಿ. ಅದು ಎಷ್ಟು ಯಶಸ್ವಿಯಾಗಿದೆ!" ಎಂದು ಜೈರಾಮ್ ರಮೇಶ್ ಶ್ಲಾಘಿಸಿದರು.

ನಾವು ಮೋದಿ ಸರ್ಕಅರದ ಎಲ್ಲಾ ಕಾರ್ಯಗಳನ್ನೂ ತೆಗಳುತ್ತಲೇ ಸಮಯ ಕಳೆದರೆ ಅದರಿಂದ ನಮಗೇ ಹಾನಿ. ಕೆಲವನ್ನು ನೋಡಿ ಕಲಿಯಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರಿಗೆ ಕಿವಿಮಾತು ಹೇಳಿದರು.

"ನಾವು ಈ ಬಾರಿ ಚುನಾವಣೆಯ ಪ್ರಚಾರದಲ್ಲಿ ರೈತರ ಸಮಸ್ಯೆಯ ಬಗ್ಗೆ ಮಾತನಾಡಿದೆವು. ಅವಕ್ಕೆಲ್ಲ ಮೋದಿಯೇ ಕಾರಣ ಎಂದೆವು. ಆದರೆ ರೈತರ್ಯಾರೂ ಅದಕ್ಕೆ ಮೋದಿಯೇ ಜವಾಬ್ದಾರಿ ಎಂದುಕೊಳ್ಳಲಿಲ್ಲ. ಅದಕ್ಕೆ ಸಾಕ್ಷಿ ಫಲಿತಾಂಶ!" ಎಂದು ಜೈರಾಮ್ ರಮೇಶ್ ಮೋದಿ ಅವರನ್ನು ಹೊಗಳಿದ್ದಾರೆ.

English summary
In a shocking development Congress leader Jairam Ramesh told, Don't blame Pm Narendra Modi every time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X