ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆ ಬೆಳೆಯಲು ಅನುವು ಮಾಡಿಕೊಟ್ಟ ಕಾಂಗ್ರೆಸ್: ಜೇಟ್ಲಿ ಆರೋಪ

|
Google Oneindia Kannada News

ನವದೆಹಲಿ, ನವೆಂಬರ್ 21: ಉಗ್ರರನ್ನು ಹತ್ತಿಕ್ಕಲು ಅಮೃತಸರದ ಸ್ವರ್ಣ ಮಂದಿರದಲ್ಲಿ ನಡೆಸಿದ 'ಆಪರೇಷನ್ ಬ್ಲೂಸ್ಟಾರ್' ಅನ್ನು 'ಐತಿಹಾಸಿಕ ಪ್ರಮಾದ' ಎಂದು ಕರೆದಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, 1984ರ ಚುನಾವಣೆಯನ್ನು ಎದುರು ನೋಡುತ್ತಿದ್ದ ಕಾಂಗ್ರೆಸ್, ಪಂಜಾಬ್‌ನಲ್ಲಿ ಭಯೋತ್ಪಾದನೆ ಬೆಳೆಯಲು ಅವಕಾಶ ನೀಡಿತು ಎಂದು ಆರೋಪಿಸಿದ್ದಾರೆ.

ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದಾಳಿ ನಡೆಸಲು ಅದು ಬಯಸಿತ್ತು. ಹೀಗಾಗಿ ಅಮೃತಸರದ ಸ್ವರ್ಣ ಮಂದಿರದ ಒಳಕ್ಕೆ ಬೆಳೆದ ಭಯೋತ್ಪಾದನೆಯನ್ನು ಅದು ಪರಿಶೀಲಿಸಲು ಹೋಗಲೇ ಇಲ್ಲ.

ರಫೇಲ್ ಒಪ್ಪಂದ : ರಾಹುಲ್‌ಗೆ ಟ್ವೀಟ್ ಮೂಲಕ ಜೇಟ್ಲಿ ತಿರುಗೇಟು ರಫೇಲ್ ಒಪ್ಪಂದ : ರಾಹುಲ್‌ಗೆ ಟ್ವೀಟ್ ಮೂಲಕ ಜೇಟ್ಲಿ ತಿರುಗೇಟು

ಅಕಾಲಿ ದಳದ ಮೇಲಿನ ಸಿಖ್ಖರ ಪ್ರಭಾವಕ್ಕೆ ಎದುರಾಗಿ ಕಾಂಗ್ರೆಸ್ ಬೆಳೆಸಿದ ಶಕ್ತಿಯನ್ನು ಕೊನೆಗೆ ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಆಪರೇಷನ್ ಬ್ಲೂಸ್ಟಾರ್ ಐತಿಹಾಸಿಕ ಪ್ರಮಾದ ಎಂದು ಸಾಬೀತಾಯಿತು. ಅದು ಅತ್ಯಂತ ಕಳಪೆಯಾಗಿ ಯೋಜಿಸಿದ ಮತ್ತು ಭೀಕರವಾಗಿ ಪ್ರಯೋಗಿಸಿದ ಕಾರ್ಯಾಚರಣೆ ಎಂದು ಜೇಟ್ಲಿ ವಿಶ್ಲೇಷಿಸಿದ್ದಾರೆ.

Congress allowed militancy to grow operation bluestar historic blunder arun jaitley

ಸ್ವರ್ಣ ಮಂದಿರದ ಒಳಗೆ ಎಷ್ಟು ಉಗ್ರರಿದ್ದಾರೆ ಮತ್ತು ಅವರ ಬಳಿ ಎಷ್ಟು ಶಸ್ತ್ರಾಸ್ತ್ರಗಳಿವೆ ಎಂಬುದರ ಬಗ್ಗೆ ಗುಪ್ತಚರ ಮಾಹಿತಿಯೇ ಇರಲಿಲ್ಲ. ಈ ಪ್ರಕ್ರಿಯೆಯಲ್ಲಿ ಅನೇಕ ಅಮಾಯಕರು ಬಲಿಯಾದರು. ಬ್ಲೂಸ್ಟಾರ್ ಕಾರ್ಯಾಚರಣೆ ದೇಶದ ಅತ್ಯಂತ ದೇಶಪ್ರೇಮಿ ಸಮುದಾಯಕ್ಕೆ ಗಾಸಿಯುಂಟುಮಾಡಿತು. ಇದರ ರಾಜಕೀಯ ಬೆಲೆಯನ್ನು ಸರ್ಕಾರ ಪರಿಗಣಿಸಲಿಲ್ಲ ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಸಿಖ್ ಹತ್ಯಾಕಾಂಡ : ಒಬ್ಬರಿಗೆ ಗಲ್ಲು, ಮತ್ತೊಬ್ಬರಿಗೆ ಜೀವಾವಧಿ ಶಿಕ್ಷೆ ಸಿಖ್ ಹತ್ಯಾಕಾಂಡ : ಒಬ್ಬರಿಗೆ ಗಲ್ಲು, ಮತ್ತೊಬ್ಬರಿಗೆ ಜೀವಾವಧಿ ಶಿಕ್ಷೆ

ದೆಹಲಿ ಹೈಕೋರ್ಟ್ 1984ರ ಸಿಖ್ ವಿರೋಧಿ ದಂಗೆ ವಿರುದ್ಧ

English summary
Union Minister Arun Jailtey called Operation Bluestar as a historic blunder, it allowed militancy to grow and accused congress used it as election tactic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X