ಜಂತರ್ ಮಂತರ್‌ನ ಭಾರತ್ ಜೋಡೋ ಆಂದೋಲನದಲ್ಲಿ ಕೋಮು ಘೋಷಣೆ: ಎಫ್‌ಐಆರ್ ದಾಖಲು
ನವದೆಹಲಿ, ಆ.09: ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಉದ್ರಿಕ್ತ ಘೋಷಣೆಗಳನ್ನು ಎತ್ತಿರುವ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ವಕೀಲ ಮತ್ತು ದೆಹಲಿ ಬಿಜೆಪಿಯ ಮಾಜಿ ವಕ್ತಾರ ಅಶ್ವಿನಿ ಉಪಾಧ್ಯಾಯ ಆಯೋಜಿಸಿದ್ದ 'ವಸಾಹತು ಕಾನೂನುಗಳು ಮತ್ತು ಏಕರೂಪದ ಕಾನೂನುಗಳನ್ನು ರಚಿಸಿ' ಮೆರವಣಿಗೆಯಲ್ಲಿ ಜಂತರ್ ಮಂತರ್‌ನಲ್ಲಿ ಕೋಮು ಘೋಷಣೆಗಳನ್ನು ಕೂಗಲಾಯಿತು ಎಂದು ವರದಿಗಳು ಹೇಳಿದೆ. ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ ವೀಡಿಯೊಗಳು ಪ್ರತಿಭಟನಾಕಾರರು ಸಮುದಾಯವನ್ನು ಬೆದರಿಸುವ ಘೋಷಣೆಗಳನ್ನು ಕೂಗುವುದನ್ನು ತೋರಿಸುತ್ತವೆ. ಈ ವಿಡಿಯೋಗಳು ಆರೋಪಿಗಳನ್ನು ಗುರುತಿಸಲು ಪೊಲೀಸರಿಗೆ ಸಹಾಯ ಮಾಡಿದೆ ಎನ್ನಲಾಗಿದೆ.
'ಭಾರತ್ ಜೊಡೋ (ಯುನೈಟ್ ಇಂಡಿಯಾ) ಮೂವ್ಮೆಂಟ್' ಬ್ಯಾನರ್ ಕಾರ್ಯಕ್ರಮವಾಗಿದ್ದು, ದೆಹಲಿ ಬಿಜೆಪಿಯ ಮಾಜಿ ವಕ್ತಾರ ಅಶ್ವಿನಿ ಉಪಾಧ್ಯಾಯರು ಈ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಜುಲೈನಲ್ಲಿ ಭಾರತೀಯ ದಂಡ ಸಂಹಿತೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು. ನ್ಯಾಯಾಂಗ ಸಮಿತಿ ಅಥವಾ ತಜ್ಞರ ಸಮಿತಿಯು ಕಾನೂನಿನ ನಿಯಮ ಮತ್ತು ಸಮಾನತೆಯನ್ನು ರಕ್ಷಿಸಲು 'ಎಲ್ಲವನ್ನು ಒಳಗೊಂಡ', 'ಕಟ್ಟುನಿಟ್ಟಾದ' ದಂಡ ಸಂಹಿತೆಯನ್ನು ರಚಿಸುವಂತೆ ಉಪಾಧ್ಯಾಯ ಕೋರಿದ್ದರು.

ಹೊಸದಿಲ್ಲಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಮಾರ್ಗಸೂಚಿಗಳನ್ನು ತಿಳಿಸಿದ ನಂತರ ಕಾರ್ಯಕ್ರಮವನ್ನು ನಡೆಸುವ ವಿನಂತಿಯನ್ನು ತಿರಸ್ಕರಿಸಿದ್ದಾರೆ ಎಂದು ಬಹಿರಂಗಪಡಿಸಿದರು. ಕೋವಿಡ್ -19 ಮಾರ್ಗಸೂಚಿಯ ಪ್ರಕಾರ ಕೂಟಗಳನ್ನು ಕೂಡುವುದು ನಿಷೇಧಿಸಿಲಾಗಿದೆ. ಇನ್ನು ಬಳಿಕ ಅಶ್ವಿನಿ ಉಪಾಧ್ಯಾಯ ಒಳಾಂಗಣ ಸ್ಥಳವನ್ನು ಹುಡುಕುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿದು ಬಂದಿದೆ ಎನ್ನಲಾಗಿದೆ.
ಸ್ಥಳದಲ್ಲಿ ಪೊಲೀಸ್ ವ್ಯವಸ್ಥೆಗಳಿದ್ದು ಪೊಲೀಸರು ಸುಮಾರು 50 ಜನರು ಬರುವ ನಿರೀಕ್ಷೆಯಲ್ಲಿದ್ದರು. ಆದರೆ ಇದ್ದಕ್ಕಿದ್ದಂತೆ ಅನೇಕ ಜನರು ಸಣ್ಣ ಗುಂಪುಗಳಲ್ಲಿ ಸೇರಲು ಪ್ರಾರಂಭಿಸಿ ಈ ಕಾರ್ಯಕ್ರಮದಲ್ಲಿ ಹಲವಾರು ಜನರು ಸೇರಿದರು ಎಂದು ಅಧಿಕಾರಿ ತಿಳಿಸಿದ್ದಾರೆ. ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಆದರೆ ಸ್ಥಳದಿಂದ ತೆರಳುವಾಗ, ಘೋಷಣೆಗಳನ್ನು ಕೂಗಿದ್ದಾರೆ ಎಂದು ಕೂಡಾ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅಶ್ವಿನಿ ಉಪಾಧ್ಯಾಯ, ಈ ವಿಡಿಯೋದ ಸತ್ಯಾಸತ್ಯತೆಯನ್ನು ದೃಢೀಕರಿಸುವಂತೆ ಕೋರಿ ದೆಹಲಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದೇನೆ. ಇದಕ್ಕೆ ಪ್ರತಿಯಾಗಿ ದೆಹಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 'ಭಾರತ್ ಛೋಡೋ' ಸಮಸ್ಯೆಯ ಕುರಿತು ಕಾರ್ಯಕ್ರಮ ನಡೆಯಿತು. ಕೋಮು ಭಾಷಣಗಳನ್ನು ಖ್ಯಾತಿ ಮಾಡಲೆಂದೇ ದೋಷಪೂರಿತ ಕಾನೂನುಗಳಿವೆ," ಎಂದು ಕಿಡಿಕಾರಿದರು.
ದೆಹಲಿ ಪೊಲೀಸರಿಂದ ಅನುಮತಿ ಇಲ್ಲದೆ ಕಾರ್ಯಕ್ರಮವನ್ನು ಏಕೆ ನಡೆಸಲಾಯಿತು ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಮಾಜಿ ಬಿಜೆಪಿ ವಕ್ತಾರರು, ಡಿಡಿಎಂಎ ಮಾರ್ಗಸೂಚಿಗಳು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿವೆ ಎಂದು ಹೇಳಿದರು. ಇದು ಐತಿಹಾಸಿಕ ಘಟನೆಯಾಗಿದೆ, ಆದ್ದರಿಂದ ಅನುಮತಿ ಅಗತ್ಯವಿಲ್ಲ ಎಂದು ಕೂಡಾ ಅಭಿಪ್ರಾಯಿಸಿದರು.
ಈ ನಡುವೆ ಭಾರತ್ ಜೊಡೋ ಚಳುವಳಿಯ ಮಾಧ್ಯಮ ಉಸ್ತುವಾರಿ ಶೀಪ್ರಾ ಶ್ರೀವಾಸ್ತವರನ್ನು ಸಂಪರ್ಕಿಸಿದಾಗ, ಬ್ರಿಟಿಷರು ಭಾರತೀಯರನ್ನು ನಿಗ್ರಹಿಸಲು ಬಳಸಿದ ವಸಾಹತುಶಾಹಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಯಿತು. ಇನ್ನೂ ಅಸ್ತಿತ್ವದಲ್ಲಿದೆ. ನಾವು ಆ ಕಾನೂನುಗಳ ವಿರುದ್ಧ ಮತ್ತು ಏಕರೂಪ ನಾಗರಿಕ ಸಂಹಿತೆಗಾಗಿ ಪ್ರತಿಭಟಿಸಲು ಸೇರಿದ್ದೆವು. ಏಕೆಂದರೆ ನಮ್ಮ ಬೇಡಿಕೆ ಒಂದೇ ದೇಶದಲ್ಲಿ ಒಂದು ನಿಯಮ ಇರಬೇಕು," ಎಂದರು. ಇದಲ್ಲದೆ, "ನನಗೆ ತಿಳಿದಿರುವಂತೆ ಯಾವುದೇ ಘೋಷಣೆಗಳನ್ನು ಕೂಗಲಾಗಿಲ್ಲ," ಎಂದ ಶೀಪ್ರಾ ಶ್ರೀವಾಸ್ತವ, ಈ ಸಮಾರಂಭದಲ್ಲಿ 5,000 ಜನರು ಇದ್ದರು, ಮತ್ತು ಹೊರಗೆ ಕೆಲವು ಜನರು ಅತಿರೇಕದ ಘೋಷಣೆಗಳನ್ನು ಕೂಗುತ್ತಿದ್ದರೆ, ನಾವು ಅವರನ್ನು ನಮ್ಮ ಮಿತ್ರರೆಂದು ಒಪ್ಪಿಕೊಳ್ಳುವುದಿಲ್ಲ," ಎಂದು ಹೇಳಿದರು.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications