ಸಹೋದ್ಯೋಗಿ ಸೇನಾಧಿಕಾರಿ ಪತ್ನಿ ಜತೆ ಅನೈತಿಕ ಸಂಬಂಧ, ಕೋರ್ಟ್ ವಿಚಾರಣೆ

ನವದೆಹಲಿ, ಜನವರಿ 3: ಮತ್ತೊಬ್ಬ ಅಧಿಕಾರಿಯ ಪತ್ನಿ ಜತೆಗೆ ಸಂಬಂಧ ಹೊಂದಿದ ಆರೋಪದಲ್ಲಿ ಭಾರತೀಯ ಸೇನೆಯ ಕರ್ನಲ್ ವೊಬ್ಬರು ಕೋರ್ಟ್ ವಿಚಾರಣೆ ಎದುರಿಸಲಿದ್ದಾರೆ. ತನ್ನ ಸಹೋದ್ಯೋಗಿ ಕರ್ನಲ್ ಪತ್ನಿಯ ಜತೆಗೆ ಆತ ಸಂಬಂಧ ಬೆಳೆಸುವ ವೇಳೆ ದೆಹಲಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಅದೇ ಸಮಯದಲ್ಲಿ ಮತ್ತೊಬ್ಬ ಕರ್ನಲ್ ಕೂಡ ಅದೇ ನಗರದಲ್ಲೇ ಕಾರ್ಯ ನಿರ್ವಹಿಸುತ್ತಿದ್ದರು.

ತನ್ನ ಪತ್ನಿಯ ಮೊಬೈಲ್ ಫೋನ್ ನಲ್ಲಿ 'ಆಕ್ಷೇಪಾರ್ಹ ಚಿತ್ರಗಳನ್ನು' ಅಧಿಕಾರಿ ನೋಡಿದ ಮೇಲೆ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು. ಅದರ ಆಧಾರದಲ್ಲಿ ಎರಡು ವರ್ಷಗಳಿಂದ ವಿಚಾರಣೆ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಅಧಿಕಾರಿಗಳು ಮೂರು ಆರೋಪಕ್ಕೆ ಸೇನಾ ಕಾಯ್ದೆ ಅಡಿಯಲ್ಲಿ ಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿ ಎಂದು ಶಿಫಾರಸು ಮಾಡಿದ್ದರು.

ಸೇನೆ ಅಧಿಕಾರಿಗಳು ವಿಚಾರಣೆ ವೇಳೆ ಅಧಿಕಾರಿಯ ಫೋನ್ ಅನ್ನು ಸಾಕ್ಷ್ಯವಾಗಿ ತೆಗೆದುಕೊಂಡಿದ್ದರು. ಆರೋಪಿಯು ದೂರುದಾರರ ಪತ್ನಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದು ಸಹ ಪತ್ತೆಯಾಗಿತ್ತು. ಅದರ ಜತೆಗೆ ಪರಸ್ಪರರು ಲೈಂಗಿಕ ವಿಚಾರಗಳನ್ನು ಒಳಗೊಂಡ ಸಂದೇಶಗಳ ವಿನಿಮಯ ಮಾಡಿಕೊಂಡಿದ್ದರು.

Colonel to face court martial over illicit affair with another officers wife

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಂಡೀಗಢದ ಕೋರ್ಟ್ ಮೇಜರ್ ಜನರಲ್ ರನ್ನು ಇತ್ತೀಚೆಗೆ ವಜಾ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+