ಕೋಕ್ ಕಂಪನಿಯಿಂದ ಹಣ್ಣಿನ ಜ್ಯೂಸ್ ಮಿಶ್ರಿತ ತಂಪು ಪಾನೀಯ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ, 12: ಕೂಲ್ ಡ್ರಿಂಕ್ಸ್ ಉತ್ಪಾದನೆಯಲ್ಲಿ ಜಗತ್ಪ್ರಸಿದ್ಧವಾದ ಕೋಕಾ ಕೋಲಾ ಕಂಪನಿ ಇದೀಗ ಹಣ್ಣಿನ ಜ್ಯೂಸ್ ಮಿಶ್ರಿತ ತಂಪು ಪಾನೀಯ ಉತ್ಪಾದನೆ ಮಾಡುವ ಕಾರ್ಯಕ್ಕೆ ಸಿದ್ಧವಾಗುತ್ತಿದೆ. ಕೋಕಾ ಕೋಲಾ ಕಂಪನಿಯ ಹಣ್ಣಿನ ಜ್ಯೂಸ್ ಗಳು ಮಾರುಕಟ್ಟೆಗೆ ಸದ್ಯದಲ್ಲೇ ಲಗ್ಗೆ ಇಡಲಿವೆ.

ಕೋಕಾ ಕೋಲಾ ಕಂಪನಿಯು ಈಗಾಗಲೇ ಶೇ.10.4ರಷ್ಟು ಹಣ್ಣಿನ ಜ್ಯೂಸ್ ಮಿಶ್ರಣ ತಂಪು ಪಾನೀಯವನ್ನು ತಯಾರು ಮಾಡಿದ್ದು, ಫೆ.13 ರಿಂದ 28ರವರೆಗೆ ಮುಂಬೈನಲ್ಲಿ ನಡೆಯಲಿರುವ ಮೇಕ್ ಇನ್ ಇಂಡಿಯಾ ಸಪ್ತಾಹದ ವೇಳೆ ಪ್ರದರ್ಶನ ಮಾಡುವ ನಿರ್ಧಾರ ತೆಗೆದುಕೊಂಡಿದೆ.[ಕೂಲ್ ಡ್ರಿಂಕ್ಸ್ ಬಾಟಲಿನಲ್ಲಿ ಸತ್ತ ಹಾವು, ಹೀಗೂ ಉಂಟೆ!]

Coca Cola company release fruit mixed juice in New delhi

ಕೂಲ್ ಡ್ರಿಂಕ್ಸ್ ಕಂಪನಿಗಳು ಹಣ್ಣಿನ ಜ್ಯೂಸ್ ಮಿಶ್ರಿತ ತಂಪು ಪಾನೀಯ ಬಿಡುಗಡೆ ಮಾಡುವುದರ ಮೂಲಕ ಭಾರತದ ರೈತರ ಬದುಕಿಗೆ ನೆರವಾಗಬೇಕು. ಅವರ ಉತ್ಪಾದನೆಗೆ ನೈತಿಕವಾಗಿ ಬೆಂಬಲ ನೀಡಬೇಕು ಎಂದು 2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತುಮಕೂರಿನಲ್ಲಿ ನೀಡಿದ ಸಲಹೆಗೆ ಕೋಕಾ ಕೋಲಾ ಕಂಪನಿ ಸ್ಪಂದಿಸಿದೆ.[ಯುವಕರಿಗೆ ಪೆಪ್ಸಿ, ಕೋಕ್ ವೃದ್ಧರಿಗೆ : ನೂಯಿ]

ಹಣ್ಣಿನ ಜ್ಯೂಸ್ ಮಿಶ್ರಿತ ತಂಪು ಪಾನೀಯ ಉತ್ಪಾದನೆ ತಯಾರು ಮಾಡುವಲ್ಲಿ ಸಾಕಷ್ಟು ಬಾರಿ ಸಂಶೋಧನೆ ಕೈಗೊಂಡು ಇದರಲ್ಲಿ ಯಶಸ್ವಿಯಾಗಿದ್ದೇವೆ. ಹೊಸ ಉತ್ಪನ್ನ ತಯಾರಿಕೆಗೆ ಮುಂದಾಗಿರುವುದು ನಮ್ಮ ಕಂಪನಿಗೆ ಸಂತಸ ತಂದಿದೆ ಎಂದು ಕೋಕಾ ಕೋಲಾ ಕಂಪನಿ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Coca Cola company release fruit mixed juice in New delhi. Coca cola company inspire about Prime Minister Narendra modi's words.
Please Wait while comments are loading...