"ಪೌರತ್ವ ಮಸೂದೆಗೆ ಒಪ್ಪಿಗೆ: ಭಾರತದ ಪಾಲಿಗಿದು ಕರಾಳ ದಿನ"

ದೆಹಲಿ, ಡಿಸೆಂಬರ್ 11: ಸಂಸತ್ ಮೇಲ್ಮನೆಯಲ್ಲೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ನೆರೆ ರಾಷ್ಟ್ರಗಳಿಂದ ವಲಸೆ ಬಂದಿರುವ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವವನ್ನು ನೀಡುವ ತಿದ್ದುಪಡಿ ಪರವಾಗಿ ರಾಜ್ಯಸಭೆಯಲ್ಲಿ 125 ಮತಗಳು ಹಾಗೂ ವಿರುದ್ಧವಾಗಿ 105 ಮತಗಳು ಬಿದ್ದಿವೆ.

ಕಳೆದ ಡಿಸೆಂಬರ್ 09ರಂದು ಲೋಕಸಭೆಯಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಸಂಸತ್ ಕೆಳಮನೆಯಲ್ಲೂ ಅಂಗೀಕಾರಗೊಂಡಿದ್ದ ತಿದ್ದುಪಡಿಗೆ ರಾಜ್ಯಸಭೆಯಲ್ಲಿ ಇಂದು ಬಹುಮತ ಸಿಕ್ಕಿದೆ.

ಈಶಾನ್ಯ ರಾಜ್ಯಗಳ ತೀವ್ರ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿಗೆ ಒಪ್ಪಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಸೆಂಬರ್ 11ರ ಬುಧವಾರವನ್ನು "ಭಾರತೀಯ ಸಾಂವಿಧಾನದ ಪಾಲಿಗೆ ಕರಾಳ ದಿನ" ಎಂದು ವ್ಯಾಖ್ಯಾನಿಸಿದ್ದಾರೆ.

Citizenship Amendment Bill: Today Marks A Dark Day In The Constitutional History Of India

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ದೇಶದಲ್ಲಿನ ಧರ್ಮಾಂಧ ಶಕ್ತಿಗಳು ಹಾಗೂ ಸಂಕುಚಿತ ಮನಸ್ಥಿತಿಯುಳ್ಳ ಜನರಿಗೆ ಜಯ ಸಿಕ್ಕಿದೆ. ಈ ದಿನ ಭಾರತದ ಸಂವಿಧಾನದ ಮಟ್ಟಿಗೆ ಕರಾಳ ದಿನವಾಗಿದೆ ಎಂದು ಟೀಕಿಸಿದ್ದಾರೆ.

ಒಂದೆಡೆ ಪೌರತ್ವ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದರೆ, ಇನ್ನೊಂದಡೆ ಈಶಾನ್ಯ ರಾಜ್ಯಗಳಲ್ಲಿ ಹೋರಾಟದ ಜ್ವಾಲೆ ಹರಡಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರನಲ್ಲಿ ನಿಯೋಜಿಸಿದ್ದ ಸೇನಾ ತುಕಡಿಗಳನ್ನು ಅಸ್ಸಾಂ, ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಶಿಫ್ಟ್ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+