• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ರಾಷ್ಟ್ರೀಯ ನಾಗರಿಕ ನೋಂದಣಿ(ಎನ್ಆರ್ ಸಿ) ಮಾಡಿದ್ದೇ ಕಾಂಗ್ರೆಸ್"

|
   ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳಿಗೆ ಮೋದಿ ಕಿವಿಮಾತು | MODI | CAA | BJP | CONGRESS | ONEINDIA KANNADA

   ದೆಹಲಿ, ಡಿಸೆಂಬರ್.22: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟಾಂಗ್ ಕೊಟ್ಟಿದ್ದಾರೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಬಿಜೆಪಿ ಧನ್ಯವಾದ ರ್ಯಾಲಿ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

   ಕೇಂದ್ರ ಸರ್ಕಾರದ ವಿರುದ್ಧ ಸುಳ್ಳುಗಾರರು ಎಂಬ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರದ ಹಲವು ಯೋಜನೆಗಳ್ನ್ನು ಜಾರಿಗೊಳಿಸಿದೆ. ಅಂದು ದೇಶದ ಪ್ರಜೆಗಳನ್ನು ಯಾವ ಧರ್ಮವೆಂದು ಪ್ರಶ್ನೆ ಮಾಡಿದ್ದೆವಾ. ಧರ್ಮದ ಆಧಾರದ ಮೇಲೆ ಯೋಜನೆಗಳನ್ನು ಜಾರಿಗೊಳಿಸಿದ್ದೇವಾ ಎಂದು ವಿರೋಧ ಪಕ್ಷಗಳನ್ನು ಪ್ರಶ್ನೆ ಮಾಡಿದ್ದಾರೆ.

   ಪೌರತ್ವ ತಿದ್ದುಪಡಿ ಮಸೂದೆ: ಮೋದಿಗೆ 'ಜೈ' ಎಂದ ಸಮೀಕ್ಷಾ ಫಲಿತಾಂಶ

   ಕಳೆದ ಒಂದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಒಂದು ಉಜ್ವಲ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಂದು ಕೇಂದ್ರ ಸರ್ಕಾರ ಯಾವುದೇ ಪ್ರಜೆಯನ್ನು ಧರ್ಮದ ಆಧಾರದಲ್ಲಿ ಅಳೆಯಲಿಲ್ಲ. ದೇಶದ ಪ್ರಜೆಗಳಿಗೆಲ್ಲ ಧರ್ಮವನ್ನು ನೋಡದೇ ಯೋಜನೆಯ ನೀಡಲಾಯಿತು.

   40 ಲಕ್ಷ ಜನರಿಗೆ ಹೊಸ ಜೀವನದ ಬೆಳಕು

   40 ಲಕ್ಷ ಜನರಿಗೆ ಹೊಸ ಜೀವನದ ಬೆಳಕು

   ದೆಹಲಿಯ ಅನಧಿಕೃತ ಕಾಲೋನಿಗಳನ್ನು ಅಧಿಕೃತಗೊಳಿಸಿದ ಹಿನ್ನೆಲೆ ಇಂದು ಬಿಜೆಪಿ ಸಮಾವೇಶ ನಡೆಸಿತು. ಈ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ, 40 ಲಕ್ಷ ಮಂದಿಗೆ ಹೊಸ ಬದುಕು ಸಿಕ್ಕಿದೆ. ನಿಮಗೆ ನಿಮ್ಮ ಜಾಗದ ಸಂಪೂರ್ಣ ಹಕ್ಕು ಸಿಕ್ಕಿದೆ. ಈ ಯೋಜನೆಯ ಫಲವು ಹಿಂದೂ, ಮುಸ್ಲಿಂ, ಕ್ರೈಸ್ತರು, ಬೌದ್ಧರಿಗೂ ಲಭಿಸಿದೆ. ಈ ಯೋಜನೆ ಜಾರಿಗೊಳಿಸುವಾಗಲೂ ನಾವು ಯಾರನ್ನೂ ಯಾವ ಧರ್ಮ ಎಂದು ಪ್ರಶ್ನೆ ಮಾಡಿಲ್ಲವಲ್ಲ ಎಂದು ಪ್ರಧಾನಿ ಹೇಳಿದರು.

   ದೇಶದಲ್ಲಿ ಸರ್ಕಾರ ಬದಲಾಗುತ್ತೆ, ಪೊಲೀಸರು ಬದಲಾಗುವುದಿಲ್ಲ

   ದೇಶದಲ್ಲಿ ಸರ್ಕಾರ ಬದಲಾಗುತ್ತೆ, ಪೊಲೀಸರು ಬದಲಾಗುವುದಿಲ್ಲ

   ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುವ ಜನರಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದರು. ನಿಮ್ಮ ಸಿಟ್ಟನ್ನು ಮೋದಿ ಮೇಲೆ ತೋರಿಸಿರಿ. ಆದರೆ, ಪೊಲೀಸರಿಗೆ ಕಲ್ಲು ಹೊಡೆಯುವುದರಿಂದ ನಿಮಗೆ ಏನು ಸಿಗುತ್ತದೆ. ದೇಶದ ರಕ್ಷಣೆಗೆ ನಿಂತಿರುವ ಪೊಲೀಸರ ವಿರುದ್ಧ ಸಿಟ್ಟು ತೋರಿಸುವುದು ಎಷ್ಟು ಸರಿ ಎಂದು ಪ್ರಧಾನಿ ಮೋದಿ ಪ್ರಶ್ನೆ ಮಾಡಿದ್ದಾರೆ.

   NRC: ಭಾರತೀಯ ಪೌರರೆಂದು ಸಾಬೀತುಪಡಿಸಲು ಕೊಡಬೇಕಾದ ದಾಖಲೆಗಳ ಪಟ್ಟಿ

   "ಪೊಲೀಸರನ್ನು ಸಹೋದರರಂತೆ ನೋಡಿಕೊಳ್ಳುತ್ತೀರಾ?"

   ಪೊಲೀಸರು ಜಾತಿ-ಧರ್ಮ ನೋಡುವುದಿಲ್ಲ. ಶಾಂತಿ ಕಾಪಾಡಲು ಎಷ್ಟೋ ಜನ ಪೊಲೀಸರು ಹೋರಾಡಿ ಹುತಾತ್ಮರಾಗಿದ್ದಾರೆ. ಹಗಲು ರಾತ್ರಿ, ಚಳಿ-ಮಳೆಯನ್ನು ನೋಡದೇ ದೇಶಕ್ಕಾಗಿ ಪೊಲೀಸರು ದುಡಿಯುತ್ತಿದ್ದಾರೆ. ದೇಶದ ರಕ್ಷಣೆಗೆ ಶ್ರಮಿಸುತ್ತಿರುವ ಪೊಲೀಸರನ್ನು ಎಲ್ಲರೂ ಸಹೋದರರಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

   "ದೇಶದಲ್ಲಿ ಶಾಂತಿ ನೆಲೆಸುವುದು ನಿಮಗೆ ಬೇಕಾಗಿಲ್ಲವೇ?"

   ವಿವಿಧತೆಯಲ್ಲಿ ಏಕತೆ ಎಂಬುದು ದೇಶದ ವಿಶೇಷತೆಯಾಗಿದೆ. ಆದರೆ, ಕೆಲವರಿಗೆ ದೇಶದಲ್ಲಿ ಶಾಂತಿ ನೆಲೆಸುವುದು ಬೇಕಾಗಿಲ್ಲ. ಅದಕ್ಕಾಗಿ ಹಿಂಸಾಚಾರದ ಮೂಲಕ ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದಾರೆ. ದೇಶದ ಜನರ ದಾರಿ ತಪ್ಪಿಸುವ ಕೆಲವನ್ನು ಮಾಡುತ್ತಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದರು.

   ಸಿಎಎ ವಿರುದ್ಧ ಪ್ರತಿಭಟನೆ; ಉ. ಪ್ರದೇಶದಲ್ಲಿ 16 ಸಾವು

   ಅಂದು ಮಲಗಿದ್ದಿರಾ ಎಂದು ಕಾಂಗ್ರೆಸ್ ಗೆ ಪ್ರಶ್ನೆ

   ಅಂದು ಮಲಗಿದ್ದಿರಾ ಎಂದು ಕಾಂಗ್ರೆಸ್ ಗೆ ಪ್ರಶ್ನೆ

   ಎನ್ಆರ್ ಸಿ ನೀತಿಯನ್ನು ಮಾಡಿದ್ದೇ ಕಾಂಗ್ರೆಸ್. ಅಂದು ಎಲ್ಲಿ ಮಲಗಿದ್ದೀರಾ ಎಂದು ಪ್ರಧಾನಿ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ನವರೇ ಮಾಡಿದ್ದ ಎನ್ಆರ್ ಸಿ ಬಿಲ್ ನ್ನು ನಾವು ಪಾಸ್ ಮಾಡಿದ್ದೇವೆ ಅಷ್ಟೇ. ಇಂದು ಅದೇ ಕಾಂಗ್ರೆಸ್ ನವರು ರಾಷ್ಟ್ರೀಯ ನಾಗರಿಕ ನೋಂದಣಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರಧಾನಿ ಕಿಡಿ ಕಾರಿದರು.

   ಅರ್ಬನ್ ನಕ್ಸಲರಿಂದ ಸುಳ್ಳು ಬಿತ್ತುವ ಕೆಲಸ

   ಅರ್ಬನ್ ನಕ್ಸಲರಿಂದ ಸುಳ್ಳು ಬಿತ್ತುವ ಕೆಲಸ

   ದೇಶದಲ್ಲಿ ಅರ್ಬನ್ ನಕ್ಸಲರು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆರ್ ಸಿ) ಬಗ್ಗೆ ಸುಳ್ಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ದೇಶದ ಮುಸ್ಲಿಂರನ್ನು ನಿರಾತ್ರಿತರ ಕೇಂದ್ರಕ್ಕೆ ದಬ್ಬುತ್ತಾರಂತೆ. ಇದು ಸುಳ್ಳನ್ನು ಬಿತ್ತುವ ಕೆಲಸವಾಗಿದೆ. ಅಫ್ಘಾನಿಸ್ತಾನ್, ಪಾಕಿಸ್ತಾನ್, ಬಾಂಗ್ಲಾದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾದ ಜನರಿಗೆ ಆಶ್ರಯ ನೀಡುವುದೇ ಈ ಕಾಯ್ದೆಯ ಉದ್ದೇಶವಾಗಿದೆ ಎಂದು ಸ್ಪಷ್ಟನೆ ನೀಡಿದರು.

   ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲ

   ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲ

   ಅಫ್ಘಾನಿಸ್ತಾನ್, ಪಾಕಿಸ್ತಾನ್, ಬಾಂಗ್ಲಾದೇಶದಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾದ ಜನರ ಬಗ್ಗೆ ಮಾತ್ರ ಈ ಕಾಯ್ದೆಯಲ್ಲಿ ಹೇಳಲಾಗಿದೆ. ಇಲ್ಲಿ ಭಾರತೀಯ ಮುಸ್ಲಿಮರ ಬಗ್ಗೆ ಉಲ್ಲೇಖಿಸಿಲ್ಲ. ದೇಶದ ಭಾರತೀಯರು ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ, ಕೆಲವರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.

   English summary
   Citizenship Amendment Act: Prime Minister Narendra Modi Attacked On Congress.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X