ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಚಿತ್ರಹಿಂಸೆ ನೆನೆದು ಮೊದಲ ಬಾರಿಗೆ ಕಣ್ಣೀರಿಟ್ಟ ಅಮೂಲ್ ಬೇಬಿ

|
Google Oneindia Kannada News

Recommended Video

ನವ ದೆಹಲಿ : ಬಾಲಕಿಯ ಮೇಲಿನ ಅತ್ಯಾಚಾರ | ಅಳುತ್ತಿರುವ ಅಮೂಲ್ ಬೇಬಿ ಕಾರ್ಟೂನ್ ವೈರಲ್ | Oneindia Kananda

ನವದೆಹಲಿ, ಏಪ್ರಿಲ್ 25: ಸಕಾಲಿಕ ವಿಷಯಗಳನ್ನಿಟ್ಟುಕೊಂಡು ಹಾಸ್ಯಚಟಾಕಿ ಸುರಿಸುತ್ತಿದ್ದ ಅಮೂಲ್ ಬೇಬಿ ಎಂದಾದರೂ ಅತ್ತಿದ್ದನ್ನು ಕಂಡಿದ್ದೀರಾ? ಇದುವರೆಗೂ ಒಮ್ಮೆಯೂ ಕಣ್ಣೀರು ಸುರಿಸದ ಈ ಪುಟ್ಟ ಅಮೂಲ್ ಬೇಬಿ ಮೊದಲ ಬಾರಿಗೆ ಅತ್ತಿದ್ದಾಳೆ. ಕತುವಾದಲ್ಲಿ ನಡೆದ ಎಂಟು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಅಮೂಲ್ ಬಾಲಕಿ ವಿರೋಧಿಸಿದ್ದೇ ಹಾಗೆ.

ಅಮೂಲ್ ಬೇಬಿ ಅಳುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಮೂಲ್ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಈ ಕಾರ್ಟೂನ್ ಅನ್ನು 8.9 ಸಾವಿರ ಜನ ಲೈಕ್ ಮಾಡಿದ್ದರೆ, 985 ಜನ ಶೇರ್ ಮಾಡಿದ್ದಾರೆ.

ನಿರ್ಧಾರ ಸ್ವಾಗತಾರ್ಹ, ಆದರೂ... ಎಲ್ಲಾ ಅತ್ಯಾಚಾರಿಗಳೂ ಗಲ್ಲಿಗೇರಲಿ!ನಿರ್ಧಾರ ಸ್ವಾಗತಾರ್ಹ, ಆದರೂ... ಎಲ್ಲಾ ಅತ್ಯಾಚಾರಿಗಳೂ ಗಲ್ಲಿಗೇರಲಿ!

"ಝರಾ ಆಂಕೊ ಮೆ ಬರ್ಲೋ ಪಾನಿ" ಎಂಬ ಶಿರ್ಷಿಕೆಯೊಂದಿಗೆ ಮಹಿಳೆಯರ ಮೇಲಿನ ಅದರಲ್ಲೂ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲಿನ ದೌರ್ಜನ್ಯವನ್ನು ಖಂಡಿಸಲಾಗಿದೆ.

ಏನಿದು ಅಮೂಲ್ ಬೇಬಿ ಕಾರ್ಟೂನ್?

ಅಮೂಲ್ ಬ್ರಾಂಡ್ ತನ್ನ ಉತ್ಪನ್ನಗಳ ಪ್ರಚಾರಕ್ಕಾಗಿ ಆರಂಭಿಸಿರುವ ಈ ಕಾರ್ಟೂನ್ ದೇಶದಾದ್ಯಂತ ಪ್ರಸಿದ್ಧಿ ಪಡೆಯುವುದಕ್ಕೆ ಕಾರಣ ಜಾಹೀರಾತಿನ ವಿಭಿನ್ನ ಪರಿಕಲ್ಪನೆಯಿಂದ. ಜಾಹೀರಾತಿನ ಮೂಲಕವೇ ಸಕಾಲಿಕ ವಿಷಗಳ ಬಗ್ಗೆ ಹಾಸ್ಯ ಚಟಾಕಿ ಹರಿಸುವ ಪುಟ್ಟ ಬಾಲಕಿಯಾಗಿ ಅಮೂಲ್ ಬೇಬಿ ಮನೆ ಮಾತಾಗಿದ್ದಾಳೆ. ಬಿಳಿ, ಕೆಂಪು ಬಣ್ಣದ ಫ್ರಾಕ್ ತೊಟ್ಟು, ನೀಲಿಬಣ್ಣದ ಜುಟ್ಟು ಕಟ್ಟಿಕೊಂಡ ಈ ಮುದ್ದು ಬಾಲಕಿ ಪ್ರತಿ ದಿನವೂ ಹೊಸ ಹೊಸ ಹಾಸ್ಯ, ಆಶಯ, ವಿಡಂಬನೆ ಹೊತ್ತು ಬರುತ್ತಾಳೆ. ತನ್ನ ಉತ್ಪನ್ನಗಳ ಜಾಹೀರಾತಿಗೆ ಯಾವ ಕಂಪನಿಯೂ ಆರಂಭಿಸದ ವಿನೂತನ ಪ್ರಚಾರ ಕಾರ್ಯವನ್ನು ಆರಂಬಿಸಿರುವ ಕಾರಣಕ್ಕೆ ಅಮೂಲ್ ಮತ್ತು ಅಮೂಲ್ ಬಾಬಿ ವಿಶೇಷ ಆಕರ್ಷಣೆ ಗಳಿಸಿವೆ.

Array

ನಾಚಿಕೆಗೇಡು

ಕತುವಾ, ಉನ್ನಾವೋ ಘಟನೆ ನೆನೆದು ಅಮೂಲ್ ಬೇಬಿ ಅಳುತ್ತಿದ್ದಾಳೆ. ಇದು ಅತ್ಯಾಚಾರಿಗಳಿಗೆ ಮತ್ತು ಅವರನ್ನು ಬೆಂಬಲಿಸುವವರಿಗೆ ನಾಚಿಕೆಯಾಗಬೇಕಾದ ವಿಷಯ ಎಂದಿದ್ದಾರೆ ಫಾರೂಖ್ ಅಹ್ಮದ್ ಖಾನ್.

12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ

Array

ಕ್ಷಮಿಸು ಅಮೂಲ್ ಬೇಬಿ

ಕ್ಷಮಿಸು ಅಮೂಲ್ ಬೇಬಿ. ಕೆಲವು ಕೆಟ್ಟ ಜನರು ನೀನು ಅಳುವಂತೆ ಮಾಡಿದ್ದಾರೆ. ಅವರು ಏನನ್ನು ಯೋಚಿಸುತ್ತಿದ್ದಾರೋ, ಅದರತ್ತಲೇ ನಮ್ಮ ಸಮಾಜ ನಡೆಯುತ್ತಿದೆ ಎಂಬುದೂ ಅಷ್ಟೇ ಸತ್ಯ ಎಂದಿದ್ದಾರೆ ಅಕ್ಷಯ್ ಚೌಧರಿ.

ನಿಜಕ್ಕೂ ಖೇದಕರ

ಅಮೂಲ್ ಬೇಬಿ ಅಳುತ್ತಿರುವುದು ನಿಜಕ್ಕೂ ಅತ್ಯಂತ ಬೇಸರದ ದಿನ. ಈ ಸಮಾಜ ಬಾಲಕಿಯರ ಪಾಲಿಗೆ ಸುರಕ್ಷಿತವಾಗಿಲ್ಲ ಎಂಬುದನ್ನು ಅದು ಸಾಬೀತುಪಡಿಸಿದೆ ಎಂದಿದ್ದಾರೆ ಅಮೋಲ್.

English summary
A cartoon of Amul Baby, which depicts condemning child rape and atrocities on woman becomes viral in social media now. For the first time Amul baby is crying in this cartoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X