ಲೇಖಕನ ಹತ್ಯೆಗೆ ಸಂಚು: ಛೋಟಾ ಶಕೀಲ್ ನಿಕಟವರ್ತಿ ಬಂಧನ
ನವದೆಹಲಿ, ಜೂನ್ : ಪಾಕ್ ಮೂಲದ ಕೆನಡಾ ಲೇಖಕ ತಾರೆಕ್ ಫತಾಹ್ ಸಾಹಿತಿಯ ಹತ್ಯೆಗೆ ಸಂಚು ರೂಪಿಸಿದ್ದ ಛೋಟಾ ಶಕೀಲ್ ನಿಕಟವರ್ತಿ ಓರ್ವನನ್ನು ದೆಹಲಿ ವಿಶೇಷ ದಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಜುನೈದ್ ಚೌಧರಿಯನ್ನು ಜೂನ್ 7ರ ಮಧ್ಯರಾತ್ರಿ ಈಶಾನ್ಯ ದೆಹಲಿಯ ವಾಜಿರಾಬಾದ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಬಂಧಿಸಲಾಗಿದೆ ಎಂದು ಪೊಲೀಸ್ ವಿಶೇಷ ದಳದ ಉಪ ಆಯುಕ್ತ ಪಿಎಸ್ ಕುಶ್ವಾ ತಿಳಿಸಿದ್ದಾರೆ.

ಬಂಧಿತನ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ಅವರು 'ಸದ್ಯ ದೆಹಲಿಯಲ್ಲಿ ಇಲ್ಲದ ವಿವಾದಿತ ಸಾಹಿತಿ ಪತಾಹ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಅದರ ಹೊಣೆಯನ್ನು ಚೌಧರಿ ವಹಿಸಿದ್ದ' ಎಂದು ಹೇಳಿದ್ದಾರೆ.
ಚೌಧರಿ ಹಾಗೂ ಇತರೆ ಮೂವರನ್ನು 2016ರ ಜೂನ್‌ನಲ್ಲಿ ಬಂಧಿಸಲಾಗಿತ್ತು. ಆ ವೇಳೆ ಚೋಟಾ ಶಕೀಲ್ ಕಳುಹಿಸಿದ್ದ ಹವಾಲಾ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಇವರು, ನಾಲ್ಕು ತಿಂಗಳ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.












Click it and Unblock the Notifications