#MeToo ಪ್ರಕರಣ ನಿರ್ವಹಿಸಲು ನ್ಯಾಯಾಧೀಶರ ಸಮಿತಿ ರಚನೆ: ಮೇನಕಾ ಗಾಂಧಿ
ನವದೆಹಲಿ, ಅಕ್ಟೋಬರ್ 12: ದೇಶದಾದ್ಯಂತ ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳ ನಿರ್ವಹಣೆಗೆಂದೇ ನ್ಯಾಯಾಧೀಶರ ಸಮಿತಿಯೊಂದನ್ನು ರಚಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
'ಮಿ ಟೂ' ಪ್ರಕರಣಗಳ ಪ್ರತಿಯೊಂದು ದೂರಿನ ಹಿಂದ ಇರುವ ನೋವು ಮತ್ತು ಆಘಾತವನ್ನು ನಾನು ನಂಬುತ್ತೇನೆ. ಕೆಲಸದ ಸ್ಥಳಗಳಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಶೂನ್ಯ ಸಹಿಷ್ಣುತೆಯ ನೀತಿಯೊಂದಿಗೆ ನಿಭಾಯಿಸಬೇಕಿದೆ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.
'ನಾವು ನ್ಯಾಯಾಧೀಶರ ಸಮೂಹವೊಂದನ್ನು ರಚಿಸಿದ್ದು, ಅದು ಸ್ವತಂತ್ರ ಮತ್ತು ಮುಕ್ತ ಶೈಲಿಯಲ್ಲಿ ಪ್ರಕರಣಗಳನ್ನು ಪರೀಕ್ಷಿಸಲಿವೆ. ಮತ್ತು ಅವರಿಗೆ ಹಾಗೂ ನಮಗೆ ಅಲ್ಲಿಂದ ಎತ್ತ ಮುಂದುವರಿಯಬೇಕು ಎಂಬ ಸಲಹೆಯನ್ನು ನೀಡಲಿವೆ ಎಂದು ಮೇನಕಾ ತಿಳಿಸಿದ್ದಾರೆ.

ಕೇಂದ್ರ ಸಚಿವ ಮಾಜಿ ಸಂಪಾದಕ ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಾಗ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ ಬಿಜೆಪಿಯ ಮೊದಲ ನಾಯಕಿ ಮೇನಕಾ ಗಾಂಧಿ.
The committee will look into the legal & institutional framework which is in place for handling complaints of #SexualHarassmentAtWork and advise the
— Ministry of WCD (@MinistryWCD) 12 October 2018
Ministry on how to strengthen these frameworks.#MeTooIndia #DrawTheLine
'ಈ ಬಗ್ಗೆ ತನಿಖೆಯಾಗಬೇಕು. ಅಧಿಕಾರದಲ್ಲಿರುವ ಪುರುಷರು ಹೆಚ್ಚಾಗಿ ಇದನ್ನು ಮಾಡುತ್ತಾರೆ. ಇದು ಮಾಧ್ಯಮಗಳು, ರಾಜಕೀಯ ಮತ್ತು ಕಂಪೆನಿಗಳಲ್ಲಿ ಕೆಲಸ ಮಾಡುವ ಹಿರಿಯರಿಗೂ ಅನ್ವಯಿಸುತ್ತವೆ. ಮಹಿಳೆಯರು ಈಗ ಮಾತನಾಡಲು ಆರಂಭಿಸಿದ್ದಾರೆ. ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು' ಎಂದು ಮೇನಕಾ ತಿಳಿಸಿದ್ದರು.












Click it and Unblock the Notifications