ಟಿಎಂಸಿ ತೊರೆದ ಸುವೇಂದುಗೆ ಕೇಂದ್ರದಿಂದ 'ಝಡ್' ಶ್ರೇಣಿಯ ಭದ್ರತೆ

ನವದೆಹಲಿ, ಡಿಸೆಂಬರ್ 18: ತೃಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಹೊರಬಂದಿರುವ ಸುವೇಂದು ಅಧಿಕಾರಿಗೆ 'ಝಡ್' ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ.

ಸುವೇಂದು ಮೇಲೆ ಇಲ್ಲಿಯವರೆಗೆ 11 ಬಾರಿ ಹಲ್ಲೆ ನಡೆದಿದ್ದು, ತಮಗೆ ಸೂಕ್ತ ಭದ್ರತೆ ನೀಡುವಂತೆ ಸುವೇಂದ್ರ ಸರ್ಕಾರದ ಬಳಿ ಮನವಿ ಮಾಡಿದ್ದರು. ಹೀಗಾಗಿ ಸರ್ಕಾರ ಈ ಹಿನ್ನೆಲೆಯಲ್ಲಿ ಭದ್ರತೆ ನೀಡಲು ಮುಂದಾಗಿದೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶದ ಪ್ರಕಾರ, ಸುವೇಂದು ಅಧಿಕಾರಿಯ ಭದ್ರತಾ ವ್ಯವಸ್ಥೆಯನ್ನು ಕೇಂದ್ರ ಭದ್ರತಾ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಪರಿಶೀಲಿಸಲಾಗಿದ್ದು, ಝಡ್ ಶ್ರೇಣಿಯ ಭದ್ರತೆ ನೀಡಲು ನಿರ್ಧರಿಸಲಾಗಿದೆ.

ಬುಲೆಟ್ ಪ್ರೂಫ್ ವಾಹನ

ಬುಲೆಟ್ ಪ್ರೂಫ್ ವಾಹನ

ಪಶ್ಚಿಮ ಬಂಗಾಳದಲ್ಲಿ ಬುಲೆಟ್ ಪ್ರೂಫ್ ವಾಹನದೊಂದಿಗೆ ಸಿಆರ್ ಪಿಎಫ್ ಸುತ್ತುವರೆದಿರುವ ಝಡ್ ಶ್ರೇಣಿಯ ಭದ್ರತೆಯನ್ನು, ಇತರ ರಾಜ್ಯಗಳಲ್ಲಿ ವೈ + ಶ್ರೇಣಿಯ ಭದ್ರತೆ ಕಲ್ಪಿಸಲಾಗಿದೆ.

ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದ ಸುವೇಂದು

ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ್ದ ಸುವೇಂದು

ಅಧಿಕಾರಿ ಇತ್ತೀಚಿಗೆ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಪಶ್ಚಿಮ ಬಂಗಾಳ ವಿಧಾನಸಭೆಯ ಸದಸ್ಯತ್ವಕ್ಕೂ ಅವರು ರಾಜೀನಾಮೆಯನ್ನು ನೀಡಿದ್ದಾರೆ.

ರಾಜೀನಾಮೆ ಪತ್ರದಲ್ಲಿ ಸುವೇಂದು ಏನು ಬರೆದಿದ್ದರು

ರಾಜೀನಾಮೆ ಪತ್ರದಲ್ಲಿ ಸುವೇಂದು ಏನು ಬರೆದಿದ್ದರು

ಪಕ್ಷದ ಸದಸ್ಯನಾಗಿ ಯಾವಾಗಲೂ ಮೌಲ್ಯಗಳೊಂದಿಗೆ ಸೇವೆ ಸಲ್ಲಿಸಿದ್ದು, ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದು ಮಮತಾ ಬ್ಯಾನರ್ಜಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಸುವೇಂದು ಅಧಿಕಾರಿ ಬರೆದಿದ್ದಾರೆ.

ಸುವೇಂದು ರಾಜೀನಾಮೆ 80 ಮತಗಳ ಮೇಲೆ ಪರಿಣಾಮ

ಸುವೇಂದು ರಾಜೀನಾಮೆ 80 ಮತಗಳ ಮೇಲೆ ಪರಿಣಾಮ

ಸುವೇಂದು ಅಧಿಕಾರಿಗೆ ಮಿಡ್ನಾಪುರ್ ಜಿಲ್ಲೆಯಲ್ಲಿ ಉತ್ತಮ ರಾಜಕಾರಣಿ ಎಂಬ ಬಿರುದಿದೆ. ಅವರ ಕುಟುಂಬ ಹಲವು ವರ್ಷಗಳಿಂದ ರಾಜಕಾರಣದಲ್ಲಿದೆ. ಸುವೇಂದು ಅವರ ತಂದೆ ಕಾಂಗ್ರೆಸ್‌ನಿಂದ ಸಂಸದರಾಗಿದ್ದರು. ಯುಪಿಎ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಇವರ ರಾಜೀನಾಮೆಯಿಂದ ಟಿಎಂಸಿ 80 ಕ್ಕೂ ಅಧಿಕ ಮತದಾರರನ್ನು ಕಳೆದುಕೊಂಡಂತಾಗಿದೆ.

ಒಂದೆರೆಡು ದಿನಗಳಲ್ಲಿ ಬಿಜೆಪಿಗೆ ಸೇರುವ ಸಾಧ್ಯತೆ

ಒಂದೆರೆಡು ದಿನಗಳಲ್ಲಿ ಬಿಜೆಪಿಗೆ ಸೇರುವ ಸಾಧ್ಯತೆ

ಸುವೇಂದು ಅಧಿಖಾರಿ ಒಂದೆರೆಡು ದಿನಗಳಲ್ಲಿ ಬಿಜೆಪಿಗೆ ಸೇರುವ ಸಾಧ್ಯತೆ ಇದೆ. 016ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುವೇಂದು ಅಧಿಕಾರಿಯನ್ನು ಬಿಜೆಪಿ ಭೇಟಿಯಾಡಿದ ಬೆನ್ನಲ್ಲೇ, ಇನ್ನೂ ಹಲವು ಅತೃಪ್ತ ಶಾಸಕರು ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+