ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಪ್ರಕರಣ: ಕಾಂಗ್ರೆಸ್ ನಿಂದ ಅ.26 ರಂದು ಬೃಹತ್ ಪ್ರತಿಭಟನೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 25: ಕೇಂದ್ರ ತನಿಖಾ ದಳ(ಸಿಬಿಐ)ದಲ್ಲಿ ನಡೆಯುತ್ತಿರುವ ಕೆಲ ಅನಪೇಕ್ಷಿತ ಬೆಳವಣಿಗೆಗಳ ವಿರುದ್ಧ ಅ.26, ಶುಕ್ರವಾರದಂದು ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.

ಶುಕ್ರವಾರದಂದು ನವದೆಹಲಿಯ ಸಿಬಿಐ ಕೇಂದ್ರ ಕಚೇರಿ ಎದುರು ಕೇಂದ್ರ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲಿದ್ದರೆ, ಆಯಾ ರಾಜ್ಯಗಳ ಸಿಬಿಐ ಕಚೇರಿ ಎದುರು ರಾಜ್ಯ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ದೇಶದಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ಕಾಂಗ್ರೆಸ್ ಹೇಳಿದೆ.

ಸಿಬಿಐ ನಿರ್ದೇಶಕರನ್ನು ಕಿತ್ತೊಗೆಯಲು ಕೇಂದ್ರಕ್ಕೆ ಅಧಿಕಾರವಿಲ್ಲ : ಪ್ರಶಾಂತ್ಸಿಬಿಐ ನಿರ್ದೇಶಕರನ್ನು ಕಿತ್ತೊಗೆಯಲು ಕೇಂದ್ರಕ್ಕೆ ಅಧಿಕಾರವಿಲ್ಲ : ಪ್ರಶಾಂತ್

CBI row: Congress to hold protest on Oct 26

ಸಿಬಿಐ ನಿರ್ದೇಶಕರು ಮತ್ತು ಆಯಕಟ್ಟಿನ ಹುದ್ದೆಯಲ್ಲಿರುವ ಅಧಿಕಾರಿಗಳ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪದಿಂದಾಗಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಅವರನ್ನು ರಜೆಯ ಮೇಲೆ ಕಳಿಸಲಾಗಿದ್ದು, ನಾಗೇಶ್ವರ್ ರಾವ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.

ಸಿಬಿಐ ವಿಶ್ವಾಸರ್ಹತೆ ಉಳಿಸಲು ಕೇಂದ್ರ ಕಠಿಣ ನಿರ್ಣಯ: ಅರುಣ್ ಜೇಟ್ಲಿಸಿಬಿಐ ವಿಶ್ವಾಸರ್ಹತೆ ಉಳಿಸಲು ಕೇಂದ್ರ ಕಠಿಣ ನಿರ್ಣಯ: ಅರುಣ್ ಜೇಟ್ಲಿ

ದೇಶದ ಇತಿಹಾಸದಲ್ಲೇ ಇದೊಂದು ತೀರಾ ಮುಜುಗರಕ್ಕೀಡುಮಾಡುವ ಘಟನೆಯಾಗಿದ್ದು, ಚುನಾವಣೆಯ ಹೊತ್ತಲ್ಲಿ ಯಾವುದೇ ಅಪವಾದ ಹೊತ್ತುಕೊಳ್ಳಲು ಸಿದ್ಧವಿಲ್ಲದ ಕೇಂದ್ರ ಸರ್ಕಾರ ಮುಲಾಜಿಲ್ಲದೆ ಇಬ್ಬರು ಅಧಿಕಾರಿಗಳನ್ನೂ ಮತ್ತು ಸಿಬಿಐ ನ ಇತರ ಮೇಲಧಿಕಾರಿಗಳನ್ನೂ ರಜೆಯ ಮೇಲೆ ಕಳಿಸಿದೆ.

ಹಣ ಕೀಳುವ ದಂಧೆಗಿಳಿದಿದ್ದ ರಾಕೇಶ್ ಅಸ್ಥಾನಾ : ಸಿಬಿಐ ಶಾಕಿಂಗ್ ಹೇಳಿಕೆಹಣ ಕೀಳುವ ದಂಧೆಗಿಳಿದಿದ್ದ ರಾಕೇಶ್ ಅಸ್ಥಾನಾ : ಸಿಬಿಐ ಶಾಕಿಂಗ್ ಹೇಳಿಕೆ

ಆದರೆ ಸಿಬಿಐ ನಿರ್ದೇಶಕರಿಗೆ ರಜೆ ಕೊಟ್ಟು ಕಳಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ವಕೀಲ ನ್ಯಾ.ಪ್ರಶಾಂತ್ ಭೂಷಣ್ ಹೇಳಿದ್ದಾರೆ.

English summary
The Congress party will protests across the country on Oct 26, Thursday over the ongoing Central Bureau of Investigation(CBI) row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X