ದೆಹಲಿ ಡೆಪ್ಯುಟಿ ಸಿಎಂ ಸಿಸೋಡಿಯಾ ವಿರುದ್ಧ ಸಿಬಿಐ ವಿಚಾರಣೆ

ನವದೆಹಲಿ, ಜನವರಿ 18: ಟಾಕ್ ಟು ಎಕೆ ಅಭಿಯಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ಪ್ರಾಥಮಿಕ ವಿಚಾರಣೆಯನ್ನು ನಡೆಸಿದೆ. ಅಭಿಯಾನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಾರ್ವಜನಿಕರ ಜೊತೆಗೆ ಮಾತುಕತೆ ನಡೆಸುವುದಾಗಿತ್ತು.

ಆ ಕಾರ್ಯಕ್ರಮದ ಮೊದಲ ಅವತರಣಿಕೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಧ್ಯೆ ಹದಗೆಟ್ಟಿರುವ ಸಂಬಂಧದ ಬಗ್ಗೆ ಮಾತನಾಡಿದ್ದರು. ಆ ಕಾರ್ಯಕ್ರಮದಲ್ಲಿ ಕೆಲವು ಅಕ್ರಮಗಳನ್ನು ಸಿಬಿಐ ಗುರುತಿಸಿತ್ತು.[ಮೋದಿ ವಿರುದ್ಧ ಸಾಕ್ಷ್ಯವಿದ್ದರೆ ರಾಹುಲ್ ಬಯಲು ಮಾಡಿ: ಕೇಜ್ರಿವಾಲ್]

Manish sisodia

ಈ ಸಮಯದಲ್ಲಿ ಇನ್ನಷ್ಟು ವಿವರಗಳನ್ನು ನೀಡುವುದು ಅಂದರೆ ತುಂಬ ಆತುರ ಮಾಡಿದಂತಾಗುತ್ತದೆ. ನಮಗೆ ಆ ಕಾರ್ಯಕ್ರಮದಲ್ಲಿ ಕೆಲವು ಲೋಪ ದೋಷಗಳು ಕಂಡುಬಂದಿವೆ. ಅದ್ದರಿಂದ ನಾವು ವಿಚಾರಣೆ ನಡೆಸಿದ್ದೇವೆ. ಈ ಎಲ್ಲ ಲೋಪದೋಷಗಳು ಗಂಭೀರವಾಗಿದ್ದು, ಈ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸಲಿದ್ದೇವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+