ಬಚ್ಚನ್ ಫ್ಯಾಮಿಲಿಗೆ ಮತ್ತೆ ಕಾನೂನು ಕಂಟಕ

ನವದೆಹಲಿ, ಜೂ.18:ಬಚ್ಚನ್ ಕುಟಂಬಕ್ಕೆ ಯಾಕೋ ಟೈಂ ಚೆನ್ನಾಗಿಲ್ಲ. ಅಮಿತಾಬ್ ಬಚ್ಚನ್ ವಿರುದ್ಧ ಒಂದೆರಡು ನೋಟಿಸ್ ಜಾರಿಗೊಂಡ ಬೆನ್ನಲ್ಲೇ ಐಶ್ವರ್ಯಾ ರೈಗೆ ಕಾನೂನು ಕಂಟಕ ಶುರುವಾಗಿತ್ತು. ಈಗ ಅಮಿತಾಬ್ ಹಾಗೂ ಅಭಿಷೇಕ್ ವಿರುದ್ಧ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಗಾಜಿಯಾಬಾದ್ ಕೋರ್ಟಿನಲ್ಲಿ ಅಮಿತಾಬ್ ಹಾಗೂ ಅಭಿಷೇಕ್ ವಿರುದ್ಧ ಚೇತನ್ ಧಿಮಾನ್ ಎಂಬುವರು ದೂರು ನೀಡಿದ್ದಾರೆ. ಕ್ರೀಡಾಕೂಟವೊಂದರಲ್ಲಿ ಪಾಲ್ಗೊಂಡಿದ್ದ ಅಪ್ಪ-ಮಗ ರಾಷ್ಟ್ರಧ್ವಜವನ್ನು ಬೆನ್ನಿಗೆ ಹಾಕಿಕೊಂಡು ಅಪಮಾನ ಮಾಡಿದ್ದಾರೆ ಎಂದು ಚೇತನ್ ದೂರಿನಲ್ಲಿ ಹೇಳಿದ್ದಾರೆ. [ರಾಷ್ಟ್ರಧ್ವಜಕ್ಕೆ ಅಪಮಾನ, ಮಲ್ಲಿಕಾಗೆ ನೋಟಿಸ್]

Case against Amitabh Bachchan, Abhishek for insulting national flag

ಫೆ.15ರಂದು ಅಡಿಲೇಡ್ ನಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಸಮರದ ಸಂದರ್ಭದಲ್ಲಿ ಪ್ರೇಕ್ಷಕರಾಗಿ ತೆರಳಿದ್ದ ಅಮಿತಾಬ್-ಅಭಿಷೇಕ್ ಈ ಕೃತ್ಯ ಎಸಗಿದ್ದಾರೆ. ರಾಷ್ಟಧ್ವಜವನ್ನು ಹೆಮ್ಮೆಯಿಂದ ಹೊತ್ತು ಮೆರೆಸಬೇಕಾಗುತ್ತದೆ.

ಅದರೆ, ಈ ಇಬ್ಬರು ಅಂತಾರಾಷ್ಟ್ರೀಯ ಖ್ಯಾತಿ ಸೆಲೆಬ್ರಿಟಿಗಳು ಧ್ವಜವನ್ನು ಬಳಸಿದ ರೀತಿ ಸರಿ ಕಾಣಲಿಲ್ಲ. ಈ ದೃಶ್ಯವನ್ನು ಕಣ್ಣಾರೆ ಕಂಡ ಮೇಲೆ ಸುಮ್ಮನೆ ಇರಲು ಸಾಧ್ಯವಿರದೆ ನನ್ನ ಕಕ್ಷಿದಾರರು ದೂರು ನೀಡಿದ್ದಾರೆ ಎಂದು ಚೇತನ್ ಪರ ವಕೀಲ ಸಂಜೀವ್ ಶರ್ಮ ಹೇಳಿದ್ದಾರೆ.

1971ರ ರಾಷ್ಟ್ರೀಯ ಗೌರವ ಕಾಯ್ದೆ, ರಾಷ್ಟ್ರಧ್ವಜ ಸಂರಕ್ಷಣಾ ಕಾಯ್ದೆ 2002 ಅನ್ವಯ ಪ್ರಕರಣ ದಾಖಲಿಸಿಕೊಂಡು ಇಬ್ಬರಿಗೂ ಸಮನ್ಸ್ ಜಾರಿಗೊಳಿಸಲಾಗಿದೆ.

ಇದಕ್ಕೂ ಮುನ್ನ ಸರಬ್ಜಿತ್ ಸಿಂಗ್ ಜೀವನ ಆಧಾರಿಸಿದ ಚಿತ್ರದಲ್ಲಿ ಸರಬ್ಜಿತ್ ತಂಗಿ ಪಾತ್ರದಲ್ಲಿ ಐಶ್ವರ್ಯಾ ರೈ ನಟಿಸುತ್ತಾರೆ ಎಂಬ ಕಾರಣಕ್ಕೆ ರೈಗೆ ಸರಬ್ಜಿತ್ ಸಿಂಗ್ ಸೋದರಿಯೊಬ್ಬರು ನೋಟಿಸ್ ಜಾರಿಗೊಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+