ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಬೇಡಿಕೆ ಬಂದ ಹತ್ತು ದಿನಗಳಲ್ಲೇ ಸಿದ್ಧಗೊಳ್ಳುತ್ತದೆ ಲಸಿಕೆ"

|
Google Oneindia Kannada News

ನವದೆಹಲಿ, ಜನವರಿ 04: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಆಸ್ಟ್ರಾಜೆನಿಕಾ ಸಹಯೋಗದಲ್ಲಿ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್ ತಯಾರಿಸಿದ 'ಕೋವಿಶೀಲ್ಡ್' ಲಸಿಕೆಯ ಷರತ್ತುಬದ್ಧ ತುರ್ತು ಬಳಕೆಗೆ ಪರಿಣತರ ಸಮಿತಿ ಜನವರಿ 1ರಂದು ಅನುಮೋದನೆ ನೀಡಿದೆ. ಈ ಮೂಲಕ ಭಾರತದಲ್ಲಿ ಬಳಕೆಯ ಅನುಮತಿ ಪಡೆದ ಮೊದಲ ಲಸಿಕೆ ಕೋವಿಶೀಲ್ಡ್ ಎನಿಸಿಕೊಂಡಿದೆ.

ತುರ್ತು ಬಳಕೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಭಾರತದಲ್ಲಿ ಲಸಿಕೆ ಕುರಿತು ಮುಂದಿನ ಕ್ರಮದ ಬಗ್ಗೆ ಹಲವು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲ ತಿಳಿಸಿದ್ದಾರೆ.

ದೇಶದ ಕೋವಿಡ್ ಲಸಿಕೆಗಳು ಶೇ 110ರಷ್ಟು ಸುರಕ್ಷಿತ: ಡಿಸಿಜಿಐ ದೇಶದ ಕೋವಿಡ್ ಲಸಿಕೆಗಳು ಶೇ 110ರಷ್ಟು ಸುರಕ್ಷಿತ: ಡಿಸಿಜಿಐ

"ಈ ಲಸಿಕೆಗೆ ಅನುಮೋದನೆ ದೊರಕಿರುವುದು ನಮಗೆ ಸಿಕ್ಕಿರುವ ದೊಡ್ಡ ಗೆಲುವು. ಮಾರ್ಚ್-ಏಪ್ರಿಲ್ ನಲ್ಲಿ ಲಸಿಕೆಗೆ ಅನುಮೋದನೆ ಸಿಗುವ ಖಾತ್ರಿ ಇರಲಿಲ್ಲ. ಈಗ ಲಸಿಕೆ ಅಭಿವೃದ್ಧಿಗೊಂಡಿದೆ. ನನಗೆ ಈ ಕುರಿತು ಹೆಮ್ಮೆ ಅನಿಸುತ್ತಿದೆ. ಸರ್ಕಾರ ಮೊದಲು ಖರೀದಿ ಕುರಿತು ಒಪ್ಪಂದ ಮಾಡಿಕೊಳ್ಳಬೇಕು. ನಂತರ ಲಸಿಕೆಗಳನ್ನು ಎಲ್ಲಿಗೆ ಸರಬರಾಜು ಮಾಡಬೇಕು ಎಂದು ತಿಳಿಸಬೇಕು. ಆ ಬೇಡಿಕೆ ಬಂದ ನಂತರ 7-10 ದಿನಗಳ ಒಳಗೆ ಲಸಿಕೆಗಳನ್ನು ಸಿದ್ಧಪಡಿಸಲಾಗುತ್ತದೆ" ಎಂದು ತಿಳಿಸಿದರು.

Can Get Covishield Vaccines 7-10 Days After Order Said Adar Poonawalla

"ಸರ್ಕಾರಕ್ಕೆ ವಿಶೇಷ ಬೆಲೆಯಲ್ಲಿ ಲಸಿಕೆಗಳನ್ನು ನೀಡಲಾಗುತ್ತಿದೆ. ಮೊದಲು 100 ಮಿಲಿಯನ್ ಡೋಸ್ ಗಳನ್ನು ವಿಶೇಷ ಬೆಲೆಗೆ ನೀಡಲಾಗುತ್ತಿದೆ. ನಂತರ ಬೆಲೆ ಹೆಚ್ಚಿಸಲಾಗುತ್ತದೆ. ಪ್ರಸ್ತುತ ಖಾಸಗಿ ಮಾರುಕಟ್ಟೆಯಲ್ಲಿ ಲಸಿಕೆಗಳು ಲಭ್ಯವಿಲ್ಲ" ಎಂದು ಹೇಳಿದ್ದಾರೆ. ಸದ್ಯಕ್ಕೆ ಕೋವಿಶೀಲ್ಡ್ ಲಸಿಕೆಯ 50 ಮಿಲಿಯನ್ ಡೋಸ್ ಗಳನ್ನು ಸರ್ಕಾರಕ್ಕೆಂದು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

Recommended Video

ಬೆಂಗಳೂರು: ಬಿಬಿಎಂಪಿ ತೆರಿಗೆ ಹೊರೆ ನೀತಿಗೆ ಖಂಡನೆ, ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನಾ ರ್ಯಾಲಿ | Oneinda Kannada

ಸೆರಂ ಇನ್ ಸ್ಟಿಟ್ಯೂಟ್ ಈಗಾಗಲೇ 50 ಮಿಲಿಯನ್ ಡೋಸ್ ಗಳನ್ನು ತಯಾರಿಸಿದೆ. ಭಾರತಕ್ಕೆ ಮೊದಲ ಹಂತದಲ್ಲಿ ಕಂಪನಿ ಲಸಿಕೆ ಪೂರೈಕೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಖಾಸಗಿ ಮಾರುಕಟ್ಟೆಗೆ ಲಸಿಕೆಗಳನ್ನು ಪರಿಚಯಿಸಿರುವುದಾಗಿ ಪೂನಾವಾಲಾ ತಿಳಿಸಿದ್ದಾರೆ. ಕೋವಿಶೀಲ್ಡ್ ಲಸಿಕೆ ಸರ್ಕಾರಕ್ಕೆ ಕಡಿಮೆ ಬೆಲೆಗೆ ದೊರೆಯಲಿದ್ದು, ಅವಶ್ಯಕತೆಗೆ ತಕ್ಕಂತೆ ಖಾಸಗಿ ಮಾರುಕಟ್ಟೆಯಲ್ಲಿ ಲಸಿಕೆಯನ್ನು ಪರಿಚಯಿಸಲಾಗುವುದು. ಖಾಸಗಿ ಮಾರುಕಟ್ಟೆಯಲ್ಲಿ ಲಸಿಕೆ ಬೆಲೆ ಅಧಿಕವಿರಲಿದೆ ಎಂದು ತಿಳಿದುಬಂದಿದೆ.

ಆರಂಭಿಕವಾಗಿ 50 ಮಿಲಿಯನ್ ಡೋಸ್ ಲಸಿಕೆ ಸರಬರಾಜು ಮಾಡುತ್ತೇವೆ. ಹೆಚ್ಚಿನ ಅವಶ್ಯಕತೆ ಬಂದಾಗ ಇನ್ನಷ್ಟು ಲಸಿಕೆಗಳನ್ನು ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.

English summary
Indian government have to still sign a purchase order with us, and tell us where to send the vaccine and 7 to 10 days after that, we can deliver the vaccine said ceo Adar Poonawalla,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X