'ದೇವರು ದಯಾಮಯಿ', ಕ್ಯಾನ್ಸರ್ ಗೆದ್ದ ರಿಷಿ ಕಪೂರ್

ನವದೆಹಲಿ, ಮೇ 03: ಬಾಲಿವುಡ್ ನ ಹಿರಿಯ, ಪ್ರಸಿದ್ಧ ನಟ ರಿಷಿ ಕಪೂರ್ ಅವರು ಕ್ಯಾನ್ಸರ್ ರೋಗದಿಂದ ಗುಣಮುಖರಾಗಿದ್ದಾರೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ.

ಅವರು ಕಳೆದ ಒಂದು ವರ್ಷದಿಂದ ಅಮೆರಿಕದ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದುವರೆಗೂ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಎಲ್ಲಿಯೂ ಅವರಾಗಲೀ, ಕುಟುಂಬದ ಇತರರಾಗಲೀ ಅಧಿಕೃತವಾಗಿ ಹೇಳಿಕೆ ನೀಡಿರಲಿಲ್ಲ.

ಆದರೆ ರೋಗ ಗುಣಮುಖವಾದ ನಂತರ ಇದೀಗ ರಿಷಿ ಕಪೂರ್ ಅವರೇ ತಮಗೆ ಕ್ಯಾನ್ಸರ್ ಇದ್ದಿದ್ದು ನಿಜ ಎಂದಿದ್ದಾರೆ. ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

Bollywood actor Rishi Kapoor is cancer free

"ಕಳೆದ ಎಂಟು ತಿಂಗಳಿನಿಂದ ನಾನು ಚಿಕಿತ್ಸೆ ಪಡೆಯುತ್ತಿದ್ದೆ. ದೇವರು ದಯಾಮಯಿ. ನಾನೀಗ ಕ್ಯಾನ್ಸರ್ ನಿಂದ ಮುಕ್ತಿ ಪಡೆದಿದ್ದೇನೆ" ಎಂದು ಅವರು ಹೇಳಿದ್ದಾರೆ.

"ನಾನು ಇನ್ನೆರಡು ತಿಂಗಳಿನಲ್ಲಿ ಬೋನ್ ಮ್ಯಾರೋ ಕಸಿ ಚಿಕಿತ್ಸೆಗೆ ಒಳಪಡಬೇಕಿದೆ. ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ನನ್ನೊಂದಿಗಿದ್ದ ನನ್ನ ಕುಟುಂಬ ಮತ್ತು ನನಗಾಗಿ ಪ್ರಾರ್ಥಿಸಿದ ಎಲ್ಲಾ ಅಭಿಮಾನಿಗಳಿಗೂ, ಸ್ನೇಹಿತರಿಗೂ ನಾನು ಕೃತಜ್ಞ. ನಾನು ಗುಣಮುಖವಾಗಿದ್ದಕ್ಕೆ ನಿಮ್ಮ ಪ್ರಾರ್ಥನೆಯೇ ಕಾರಣ" ಎಂದು ರಿಷಿ ಕಪೂರ್ ಹೇಳಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಇತ್ತೀಚೆಗಷ್ಟೇ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಮುಗಿಸಿ ವಾಪಸ್ಸಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+