ಭಾರತಕ್ಕೆ ಮೃತದೇಹ ಬಂದರೂ ವಿಮಾನದಿಂದ ಕೆಳಗಿಳಿಸದೆ ವಾಪಸ್
ನವದೆಹಲಿ, ಏಪ್ರಿಲ್ 25: ಅಬುದಾಬಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ ಕೇಂದ್ರ ಸರ್ಕಾರ ಮೃತದೇಹ ಹಸ್ತಾಂತರಕ್ಕೆ ಅನುಮತಿ ನೀಡದ ಕಾರಣ ಶವವನ್ನು ವಾಪಸ್ ಕಳುಹಿಸಲಾಗಿದೆ.
ಅಬುದಾಬಿಯಲ್ಲಿ ಕೆಲಸ ಮಾಡುತ್ತಿದ್ದ ಕಮಲೇಶ್ ಭಟ್ ಹೃದಯಾಘಾತದಿಂದ ನಿಧರಾಗಿದ್ದರು. ಆ ಸುದ್ದಿಯನ್ನು ಕಂಪನಿ ಪೋಷಕರಿಗೆ ನೀಡಿತ್ತು.
ಅಬುದಾಬಿಯ ಸ್ಥಳೀಯರು ಹಾಗೂ ಅವರ ಸ್ನೇಹಿತರ ನೆರವಿನಿಂದ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಅನುಮತಿ ಪಡೆಯಲಾಗಿತ್ತು.

ಅಬುದಾಬಿಯಿಂದ ದೆಹಲಿಗೆ ವಿಮಾನ ಬರುತ್ತಿದ್ದಂತೆ ಮೃತದೇಹ ಹಸ್ತಾಂತರಿಸುವಂತೆ ಕುಟುಂಬದವರು ಕೇಳಿದ್ದಾರೆ.
ಮೃತದೇಹ ರವಾನೆ ಅಥವಾ ಹಸ್ತಾಂತರ ಸಂದರ್ಭದಲ್ಲಿ ಪಾಲಿಸಬೇಕಾದ ಶಿಷ್ಟಾಚಾರದ ಕ್ರಮಗಳ ಬಗ್ಗೆ ಅಬುದಾಬಿಯಲ್ಲಿರುವ ದೂತಾವಾಸ ಕಚೇರಿಯೊಂದಿಗೆ ಚರ್ಚೆ ನಡೆಸಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ ಮೃತದೇಹವನ್ನು ಹಸ್ತಾಂತರಿಸದಂತೆ ಗೃಹ ಸಚಿವಾಲಯ ಆದೇಶ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದರು. ಹೀಗಾಗಿ ಬಂದ ವಿಮಾನದಲ್ಲೇ ಮೃತದೇಹವನ್ನು ವಾಪಸ್ ಕಳುಹಿಸಲಾಯಿತು.
ಇದೀಗ ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿ ಇದೆ. ಈ ಹಿನ್ನೆಲೆಯಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ.












Click it and Unblock the Notifications